ಜಮ್ಮು ಕಾಶ್ಮೀರದಲ್ಲಿ ಕಣಿವೆಗೆ ಬಿದ್ದ 23 ಸಿಆರ್‌ಪಿಎಫ್‌ ಸಿಬ್ಬಂದಿ ಇದ್ದ ಬಸ್‌! | Jk Crpf Bus Falls Into Gorge 2 Soldiers Dead 12 Injured San

ಉಧಂಪುರದಲ್ಲಿ ಸಿಆರ್‌ಪಿಎಫ್ ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಟ್ಟು 23 ಸಿಬ್ಬಂದಿ ವಾಹನದಲ್ಲಿದ್ದರು.

ನವದೆಹಲಿ (ಆ.7): ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢ ಪ್ರದೇಶದ ಕಾಂಡ್ವಾ ಬಳಿ ಸಿಆರ್‌ಪಿಎಫ್ ವಾಹನ ಅಪಘಾತಕ್ಕೀಡಾದ ಪರಿಣಾಮ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಹೆಚ್ಚುವರಿ ಎಸ್‌ಪಿ ಉಧಂಪುರ ಸಂದೀಪ್ ಭಟ್ ಅವರ ಪ್ರಕಾರ, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿ, ಎಲ್ಲಾ ಗಾಯಾಳು ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದವು. ಬಂಕರ್ ವಾಹನವು ಪಲ್ಟಿಯಾದಾಗ ಒಟ್ಟು 23 ಸಿಆರ್‌ಪಿಎಫ್ ಸಿಬ್ಬಂದಿ ಅದರಲ್ಲಿದ್ದರು.

Source link

Leave a Reply

Your email address will not be published. Required fields are marked *