ಮಡೆನೂರು ಮನು (Madenuru Manu) ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಶಿವರಾಜ್ಕುಮಾರ್ ಮನೆ ಎದುರು ಅವರು ಕಾಯುತ್ತಿರುವುದು ಕಂಡು ಬಂದಿತ್ತು. ಆದರೆ, ಶಿವಣ್ಣ ಬಾಗಿಲು ತೆರೆದಿರಲಿಲ್ಲ ಎಂದು ವರದಿ ಆಗಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಈ ಬಗ್ಗೆ ಮಾತನಾಡಿದ್ದು, ಇದು ಹಳೆಯ ವಿಡಿಯೋ ಎಂದಿದ್ದಾರೆ. ಶಿವರಾಜ್ಕುಮಾರ್ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಮನು ಇಲ್ಲಿಗೆ ಹೋಗಿದ್ದರಂತೆ. ಶಿವಣ್ಣ ಇಲ್ಲದ ವಿಚಾರ ಗೊತ್ತಾದ ಬಳಿಕ ಅವರು ವಾಪಸ್ ಬಂದಿದ್ದಾರೆ. ಹಳೆಯ ವಿಡಿಯೋ ವೈರಲ್ ಮಾಡಿ ಅಪಪ್ರಚಾರ ಮಾಡಬೇಡಿ ಎಂದು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.