
‘ಭೂಮಿ ತಾಯಾಣೆ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟಿಸಿ ಸೈ ಎನ್ನಿಸಿಕೊಂಡವರು ನಟಿ ಕಾವ್ಯಾ ಶೈವ. (Kavya Shaivas) ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ‘ಸುಮನಾ’ ಪಾತ್ರದಲ್ಲಿ ಜನಮನ ಸೂರೆಗೊಂಡಿದ್ದರೂ, ಅರ್ಧದಲ್ಲಿಯೇ ಸೀರಿಯಲ್ ಬಿಟ್ಟು ವೀಕ್ಷಕರನ್ನು ನಿರಾಸೆಗೊಳಿಸಿದ್ದರು. ಗ್ರಾಮವೊಂದರ ಹುಡುಗಿ, ರಾಜಕೀಯದಲ್ಲಿ ಮಿಂಚಲು ರೆಡಿಯಾಗಲಿರುವ ವ್ಯಕ್ತಿಯನ್ನು ಮದುವೆಯಾಗಿ, ಅವರ ಮನೆಯಲ್ಲಿ ಅನುಭವಿಸುವ ನೋವು, ತಮ್ಮನ ಸಾವಿನ ಪ್ರತಿಕಾರ ಇವೆಲ್ಲವನ್ನೂ ಕಾವ್ಯ ಅದ್ಭುತವಾಗಿ ನಿರ್ವಹಿಸಿದ್ದರು. ಇದಕ್ಕೆ ಸೂಕ್ತ ಕಾರಣವೂ ತಿಳಿದಿರಲಿಲ್ಲ.