ಹೃತಿಕ್ ರೋಷನ್ ಆ್ಯಂಡ್ NTR ಡ್ಯಾನ್ಸ್ ವಾರ್, ನಾಟು ನಾಟು ನೆನಪಿಸಿದ ವಾರ್-2 ಸಾಂಗ್ | War 2 Hrithik Roshan And Jr Ntr Set The Stage On Fire Janab E Aali Dance Gow

ಹೃತಿಕ್ ರೋಷನ್ ಆ್ಯಂಡ್ NTR ಡ್ಯಾನ್ಸ್ ವಾರ್, ನಾಟು ನಾಟು ನೆನಪಿಸಿದ ವಾರ್-2 ಸಾಂಗ್ | War 2 Hrithik Roshan And Jr Ntr Set The Stage On Fire Janab E Aali Dance Gow


ಹೃತಿಕ್ ರೋಷನ್  ಆ್ಯಂಡ್ ಎನ್.ಟಿ.ಆರ್ ನಟನೆಯ ಬಹುನಿರೀಕ್ಷೆ ವಾರ್-2 ಮೂವಿ ರಿಲೀಸ್​​ಗೆ ಇನ್ನು ಕೆಲವೇ ದಿನ ಬಾಕಿ. ಸದ್ಯ ಈ ಸಿನಿಮಾದ ಡ್ಯಾನ್ಸ್ ನಂಬರ್  ‘ಜನಾಬ್-ಎ-ಆಲಿ’ ರಿಲೀಸ್ ಆಗಿದ್ದು, ವಾರ್ ಮೂವಿನಲ್ಲಿ ಬರೀ ವಾರ್ ಅಷ್ಟೇ ಅಲ್ಲ ಡ್ಯಾನ್ಸ್ ದಂಗಲ್ ಕೂಡ ಇರುತ್ತೆ ಅನ್ನೋ ಸೂಚನೆ ಕೊಟ್ಟಿದೆ.

ವಾರ್-2 ಮೂವಿ ರಿಲೀಸ್​ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸೌತ್​ನ ಯಂಗ್ ಟೈಗರ್ ಜೂ.ಎನ್.ಟಿ.ಆರ್ ಡೆಡ್ಲಿ ಕಾಂಬಿನೇಷನ್ ಇರೋ ಸಿನಿಮಾ ಇದು. ಈಗಾಗ್ಲೇ ರಿಲೀಸ್ ಆಗಿರೊ ಟ್ರೈಲರ್ ಸಾಂಗ್ಸ್ ಚಿತ್ರದ ಕುರಿತ ನಿರೀಕ್ಷೆಯನ್ನ ಹೆಚ್ಚಿಸಿವೆ. ಮತ್ತೀಗ ‘ಜನಾಬ್-ಎ-ಆಲಿ’ ಅನ್ನೋ ಡ್ಯಾನ್ಸ್ ನಂಬರ್ ರಿಲೀಸ್ ಆಗಿದ್ದು ಫುಲ್ ಟ್ರೆಂಡ್ ಸೃಷ್ಟಿ ಮಾಡಿದೆ.

ಹೃತಿಕ್ ರೋಷನ್​ ಡ್ಯಾನ್ಸಿಂಗ್ ಗಾಡ್ ಅಂತಾನೇ ಕರೆಸಿಕೊಂಡವರು. ಇನ್ನೂ ಎನ್.ಟಿ.ಆರ್ ನಾಟು ನಾಟು ಅಂತ ಕುಣಿದು ದೇಶವನ್ನೇ ಕುಣಿಸಿದವರು. ಸೋ ಈ ಇಬ್ಬರೂ  ಡ್ಯಾನ್ಸ್​ನಲ್ಲಿ ದೈತ್ಯರೇ. ಈ ಇಬ್ಬರ ನಡುವೆ ಬರೀ ಌಕ್ಷನ್​ನಲ್ಲಷ್ಟೇ ಅಲ್ಲ ಡ್ಯಾನ್ಸ್​ನಲ್ಲೂ ಪೈಪೋಟಿ ನಡೆದಿದೆ.

ಸದ್ಯ ಈ ಸಾಂಗ್ ಟೀಸರ್​​ನಲ್ಲಿ ಇಬ್ಬರ ಡ್ಯಾನ್ಸ್ ಕೂಡ ಹುಬ್ಬೇರಿಸುವಂತೆ ಇದೆ. ಇದನ್ನ ನೋಡಿದ ಫ್ಯಾನ್ಸ್  ಯಾರು ಬೆಸ್ಟ್ ಅಂತ ಪೈಪೋಟಿಗೆ ಬಿದ್ದು ಕಾಮೆಂಟ್ ಮಾಡ್ತಾ ಇದ್ದಾರೆ. ಈ ಸಾಂಗ್​ ಟ್ರೆಂಡಿಂಗ್​ನಲ್ಲಿದ್ದು,  ವಾರ್-2 ನಲ್ಲಿ ಬರೀ ವಾರ್ ಅಲ್ಲ ಡ್ಯಾನ್ಸ್ ವಾರ್ ಕೂಡ ಇದೆ ಅನ್ನೋ ಸೂಚನೆ ನೀಡಿದೆ.



Source link

Leave a Reply

Your email address will not be published. Required fields are marked *