ಇಂದು ವರಮಹಾಲಕ್ಷ್ಮೀ ಹಬ್ಬ. ಎಲ್ಲರೂ ವರಮಹಾಲಕ್ಷ್ಮೀ ಹಬ್ಬವನ್ನು ಎಲ್ಲರೂ ಖುಷಿಯಿಂದ ಆಚರಿಸುತ್ತಿದ್ದಾರೆ. ನಟ ಅಭಿಷೇಕ್ ಅಂಬರೀಶ್ ( Abhishek Ambareesh ) ಹಾಗೂ ಅವಿವಾ ಬಿದ್ದಪ್ಪ ಅವರ ಪುತ್ರ ರಾಣಾ ಅಮರ್ ( Rana Amar ) ಈ ಬಾರಿ ಮೊದಲ ಹಬ್ಬದ ಖುಷಿಯಲ್ಲಿದ್ದಾರೆ.

ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಗ್ರ್ಯಾಂಡ್ ಆಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ್ದಾರೆ. ಮೊದಲಿನಿಂದಲೂ ಅಂಬಿ ಕುಟುಂಬ ಪ್ರತಿ ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸುವುದು.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಪುತ್ರ ರಾಣಾ ಅಮರ್ ಅವರಿಗೆ ಇದು ಮೊದಲ ವರಮಹಾಲಕ್ಷ್ಮೀ ಹಬ್ಬ. ಮಗ ಹಬ್ಬದಲ್ಲಿ ಭಾಗಿ ಆಗಿರೋದನ್ನು ಅವಿವಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಗ್ರ್ಯಾಂಡ್ ಆಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗಿದೆ. ಪುರೋಹಿತರು ಪೂಜೆ ಮಾಡುವಾಗ ರಾಣಾ ಅಮರ್ ಅವರು ದೇವರ ಮನೆಯಲ್ಲಿ ಕಂಡಿದ್ದು ಹೀಗೆ.. ಈ ಫೋಟೋ ನೋಡಿದವರು ಜ್ಯೂನಿಯರ್ ಅಂಬಿ ಹುಟ್ಟಿ ಬಂದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಪ್ಪ-ಅಮ್ಮನ ಜೊತೆ ಹಬ್ಬ ಆಚರಣೆ ಮಾಡಿದ ರಾಣಾ ಅಮರ್ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ..

ಅವಿವಾ ಬಿದ್ದಪ್ಪ ಅವರು ಫ್ಯಾಷನ್ ಡಿಸೈನರ್. ಪ್ರಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮಗಳು ಇವರು.

ಇದುವರೆಗೂ ರಾಣಾ ಅಮರ್ ಮುಖವನ್ನು ಅಂಬರೀಶ್ ಕುಟುಂಬ ಎಲ್ಲಿಯೂ ರಿವೀಲ್ ಮಾಡಿಲ್ಲ. ಆಗಾಗ ಸುಮಲತಾ, ಅವಿವಾ ಅವರು ರಾಣಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.

ಅಂದಹಾಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಾಣಾ ಅಮರ್ ಅವರ ನಾಮಕರಣ ಶಾಸ್ತ್ರ ಮಾಡಲಾಗಿತ್ತು. ನಟ ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Source link
Photos: ವರಮಹಾಲಕ್ಷ್ಮೀ ಹಬ್ಬದಲ್ಲಿ ಭಾಗಿಯಾದ ನಟ ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಮಗ ರಾಣಾ ಅಮರ್!