ತರಕಾರಿಯ ಸಿಪ್ಪೆಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹವನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಜನರು ತರಕಾರಿಯ ಸಿಪ್ಪೆ ತೆಗೆಯದೇ ಉಪಯೋಗಿಸಲು ಇಚ್ಛಿಸುತ್ತಿದ್ದಾರೆ. ಆದರೆ ಸಿಪ್ಪೆ ತೆಗೆಯದೇ ಯಾವುದೇ ಹಣ್ಣು ತರಕಾರಿಯನ್ನು ನೀವು ತಿನ್ನಲು ಬಯಸಿದರೆ ಅವುಗಳಲ್ಲಿ ಇರುವ ಕೀಟನಾಶಕ ಗಳನ್ನು ಸರಿಯಾಗಿ ತೆಗೆದುಹಾಕುವುದು ಬಹಳ ಅಗತ್ಯ. ಏಕೆಂದರೆ ಈ ರಾಸಾಯನಿಕಗಳು ದೀರ್ಘಕಾಲಿಕವಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ತೊಳೆಯುವ ವಿಧಾನಗಳು:
ತಣ್ಣೀರಿನಲ್ಲಿ ತೊಳೆಯುವುದು:
ಹೆಚ್ಚಿನ ಹಣ್ಣು-ತರಕಾರಿಗಳ ಮೇಲೆ ಇರುವ ಸುಮಾರು ಶೇ.75-80 ಕೀಟನಾಶಕದ ಅಂಶ ಸರಿಯಾಗಿ ತಣ್ಣೀರಿನಲ್ಲಿ ತೊಳೆಯುವ ಮೂಲಕವೇ ತೆಗೆದುಹೋಗುತ್ತವೆ. ಇದು ಪ್ರತಿ ಉಪಯೋಗದ ಮುಂಚೆಯೂ ಮಾಡಬೇಕಾದ ಪಾಠವಾಗಬೇಕು. ಇನ್ನಷ್ಟು ಪರಿಣಾಮಕಾರಿಯಾದ ವಿಧಾನವೆಂದರೆ ಉಪ್ಪು ನೀರಿನಲ್ಲಿ ತೊಳೆಯುವುದು. ಇದು ಕೆಲವೊಂದು ಕಠಿಣ ಕೀಟನಾಶಕಗಳ ಅಂಶವನ್ನು ಕಡಿಮೆ ಮಾಡಬಹುದು.
ಉಪ್ಪು ನೀರು ತಯಾರಿಸುವ ವಿಧಾನ:
- 1 ಲೀಟರ್ ಕುಡಿಯುವ ನೀರನ್ನು ಬಾಟಲಿಯಲ್ಲಿ ತೆಗೆದುಕೊಳ್ಳಿ
- ಅದರಲ್ಲಿ 4 ಸಮತಟ್ಟಾದ ಟೀಚಮಚ ಉಪ್ಪು ಸೇರಿಸಿ
- ಉಪ್ಪು ಸಂಪೂರ್ಣವಾಗಿ ಕರಗುವ ತನಕ ಬಿಡಿ.
ಈ ರೀತಿಯಾಗಿ ತಯಾರಾದ ಉಪ್ಪು ನೀರಿನಲ್ಲಿ ನೀವು ಹಣ್ಣುಗಳು ಮತ್ತು ತರಕಾರಿಗಳನ್ನು 5 ರಿಂದ 10 ನಿಮಿಷಗಳವರೆಗೆ ಮುಳುಗಿಸಿ, ನಂತರ ತಣ್ಣೀರಿನಲ್ಲಿ ಮತ್ತೆ ತೊಳೆಯಿರಿ.
ಇತರ ತೊಳೆಯುವ ವಿಧಾನಗಳು:
ಬೇಕಿಂಗ್ ಸೋಡಾ ದ್ರಾವಣ:
- 1 ಲೀಟರ್ ನೀರಿಗೆ 1 ಚಮಚೆ ಬೇಕಿಂಗ್ ಸೋಡಾ ಸೇರಿಸಿ
- 12-15 ನಿಮಿಷ ನೆನೆಸಿಟ್ಟು ತಾಜಾ ನೀರಿನಲ್ಲಿ ತೊಳೆಯಿರಿ.
- 3:1 ಅನುಪಾತದಲ್ಲಿ ನೀರು ಮತ್ತು ಬಿಳಿ ವಿನೆಗರ್ ಬೆರೆಸಿ
- 5-10 ನಿಮಿಷ ನೆನೆಸಿಟ್ಟು ಚೆನ್ನಾಗಿ ತೊಳೆಯಿರಿ
ನಿರ್ದಿಷ್ಟ ತರಕಾರಿಗಳಿಗೆ ವಿಶೇಷ ಸಲಹೆಗಳು:
- ಎಲೆಕೋಸು ತರಹದ ತರಕಾರಿಗಳು: ಹೊರಗಿನ 2-3 ಎಲೆಗಳನ್ನು ತೆಗೆದುಹಾಕಿ
- ಬೇರು ತರಕಾರಿಗಳು: ಬ್ರಷ್ ಬಳಸಿ ಚೆನ್ನಾಗಿ ಉಜ್ಜಿ ತೊಳೆಯಿರಿ
- ಹಣ್ಣುಗಳು: ಕೈಯಿಂದ ಉಜ್ಜಿ ತೊಳೆಯಿರಿ
- ದ್ರಾಕ್ಷಿ ಮತ್ತು ಬೆರಿ ಹಣ್ಣುಗಳು:ಉಪ್ಪು ನೀರಿನ ವಿಧಾನ ವಿಶೇಷವಾಗಿ ಪರಿಣಾಮಕಾರಿ
ಇದನ್ನೂ ಓದಿ: Health Tips: ದಿನದಲ್ಲಿ ಹಲವು ಬಾರಿ ಮಲ ವಿಸರ್ಜನೆಯಾಗಲು ಕಾರಣವೇನು?
ಮುಖ್ಯ ಸೂಚನೆಗಳು ಮತ್ತು ಸಲಹೆಗಳು
ಮಾಡಬೇಕಾದವು:
- ಸಮಯ: ತಿನ್ನುವ ಮುಂಚೆಯೇ ತೊಳೆಯಿರಿ, ಮುಂಚಿತವಾಗಿ ಅಲ್ಲ
- ಒಣಗಿಸುವುದು: ಸ್ವಚ್ಛ ಬಟ್ಟೆಯಿಂದ ಮಾತ್ರ
- ಹಣ್ಣು ತಿನ್ನುವ ಮುನ್ನ ತಾಜಾ ನೀರಿನಲ್ಲಿ ತೊಳೆಯುವುದನ್ನು ಮರೆಯಬೇಡಿ
- ತಾಜಾ ದ್ರಾವಣ:* ಪ್ರತಿವೇಳೆ ಹೊಸ ದ್ರಾವಣ ತಯಾರಿಸಿ
ಮಾಡಬಾರದವು:
- ಸಾಬೂನು ಅಥವಾ ಡಿಟರ್ಜೆಂಟ್ ಬಳಸಬೇಡಿ
- ಉಪ್ಪು ನೀರು ಶೇಖರಿಸಬೇಡಿ
- ಹೆಚ್ಚು ಸಮಯ ನೆನೆಸಿ ಇಡುವದರಿಂದ ಹಣ್ಣು ತರಕಾರಿಗಳಲ್ಲಿರುವ ಪೋಷಕಾಂಶಗಳು ಕಳೆದುಹೋಗಬಹುದು.
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ
ಆಯುರ್ವೇದ ವೈದ್ಯರು, ಶಿರಸಿ – 581401
ದೂರವಾಣಿ: 08384-225836
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:10 pm, Fri, 27 June 25