ಧ್ರುವ ‘ಕೆಡಿ’ ಅಡ್ಡಾದಲ್ಲಿದೆ ಬಿಗ್ ಸರ್​ಪ್ರೈಸ್; ಬಿಗ್ ಸ್ಟಾರ್ಸ್ ಜೊತೆ ಕಿಚ್ಚನ ಸ್ಪೆಷಲ್ ರೋಲ್! | Sandalwood Star Kichcha Sudeep Acted In Dhruva Sarja Kd Movie

ಧ್ರುವ ‘ಕೆಡಿ’ ಅಡ್ಡಾದಲ್ಲಿದೆ ಬಿಗ್ ಸರ್​ಪ್ರೈಸ್; ಬಿಗ್ ಸ್ಟಾರ್ಸ್ ಜೊತೆ ಕಿಚ್ಚನ ಸ್ಪೆಷಲ್ ರೋಲ್! | Sandalwood Star Kichcha Sudeep Acted In Dhruva Sarja Kd Movie


ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ಅಂತಿಮ ಕೆಲಸಗಳು ನಡೀತಾ ಇವೆ. ಈ ಸಿನಿಮಾದಲ್ಲಿ ಹಲವು ಭಾಷೆಯ ಸ್ಟಾರ್ಸ್ ನಟಿಸಿರೋ ವಿಷ್ಯ ನಿಮಗೆ ಗೊತ್ತೇ ಇದೆ. ಅದೆಲ್ಲದರ ಜೊತೆಗೆ ಕೆಡಿ ಅಡ್ಡಾದಲ್ಲಿ ಮತ್ತೊಂದು ಮೆಗಾ ಸರ್​ಪ್ರೈಸ್ ಕೂಡ ಇದೆ.

ಆಕ್ಷನ್ ಪ್ರಿನ್ಸ್ ಧ್ರುವ ಅಂಡ್ ಶೋಮ್ಯಾನ್ ಪ್ರೇಮ್ ಜೋಡಿಯ ಕೆಡಿ ಸಿನಿಮಾ ಈಗಾಗ್ಲೇ ಪ್ಯಾನ್ ಇಂಡಿಯಾ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಕೆಡಿ ಅಡ್ಡಾದಿಂದ ಬಂದಿರೋ ನ್ಯೂಸ್ ಕೇಳಿದ್ರೆ ನೀವು ಮತ್ತಷ್ಟು ಥ್ರಿಲ್ ಆಗೋದು ಫಿಕ್ಸ್. ಹೌದು ಕೆಡಿ ಬಳಗದಲ್ಲಿ ಕಿಚ್ಚ ಸುದೀಪ್ (Kichcha Sudeep) ಕೂಡ ಇದ್ದಾರೆ.

ಕೆಡಿ ಸಿನಿಮಾದಲ್ಲಿರೋ ಸ್ಟಾರ್​ ಕಾಸ್ಟ್ ಕೇಳಿದ್ರೆ ಇದು ಇಂಡಿಯಾದ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಸಿನಿಮಾ ಅನ್ನಬಹುದು. ವಿ.ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ಸಂಜಯ್ ದತ್​​ ರಂಥಾ ದಿಗ್ಗಜರು ಈ ಸಿನಿಮಾದಲ್ಲಿದ್ದಾರೆ. ಈಗಾಗ್ಲೇ ಇವರೆಲ್ಲರ ಸಮ್ಮುಖದಲ್ಲಿ ಸಿನಿಮಾ ಟೀಸರ್ ಲಾಂಚ್ ಇವೆಂಟ್ ದೇಶದ ಪ್ರಮುಖ ನಗರಗಳಲ್ಲಿ ನಡೆದಿದೆ.

ಸೋ ಇಷ್ಟೆಲ್ಲಾ ದಿಗ್ಗಜರ ಜೊತೆಗೆ ಅಭಿನಯ ಚಕ್ರವರ್ತಿ ಸುದೀಪ್ ಬೇರೆ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಕೆಡಿ ಎರಡು ಭಾಗದ ಚಿತ್ರವಾಗಿದ್ದು ಪಾರ್ಟ್​​-1ನಲ್ಲಿ ಸುದೀಪ್​ರ ಸಣ್ಣ ಅಪೀಯರೆನ್ಸ್ ಇದೆಯಂತೆ. ಪಾರ್ಟ್​​-2 ಕಿಚ್ಚನಿಗೆ ದೊಡ್ಡ ಪಾತ್ರ ಇದೆ. ಈಗಾಗ್ಲೇ ಪಾರ್ಟ್​-1 ಗೆ ಬೇಕಾದ ದೃಶ್ಯಗಳ ಶೂಟ್ ಕೂಡ ನಡೆದಿದೆ.

ಸದ್ಯ ಕೆಡಿ ಸಿನಿಮಾದ ಅಂತಿಮ ಕೆಲಸಗಳು ನಡೀತಾ ಇದ್ದು, ಪ್ರೇಮ್ ಯುರೋಪ್​ನಲ್ಲಿ ಚಿತ್ರದ ರೀ ರೆಕಾರ್ಡಿಂಗ್ ವರ್ಕ್ ಮಾಡಿಸ್ತಾ ಇದ್ದಾರೆ. ಇದರ ನಡುವೆ ಕೆಡಿ ಅಡ್ಡಾದಲ್ಲಿ ಕಿಚ್ಚ ಇರುವ ವಿಷ್ಯ ಬೇರೆ ಗುಲ್ಲಾಗಿದ್ದು, ಕೆಡಿ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *