
ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಅಗಲಿ, ಒಂದೂವರೆ ವರ್ಷಗಳಾಗಿವೆ. ಸದ್ಯ ವಿಜಯ ರಾಘವೇಂದ್ರ ಅವರು ಒಂಟಿಯಾಗಿ ಮಗನನ್ನು ಸಾಕುತ್ತಿದ್ದಾರೆ. ಸದ್ಯ ಮಗನ ಪಾಲಿಗೆ ಅಪ್ಪ- ಅಮ್ಮ ಎಲ್ಲವೂ ಅವರೇ. ಅಷ್ಟಕ್ಕೂ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಗಣ್ಯರು, ಸೆಲೆಬ್ರಿಟಿಗಳೇ ಆಗಿದ್ದರೂ ಮಕ್ಕಳ ಪಾಲಿಗೆ ಅವರು ಕೇವಲ ಅಪ್ಪ- ಅಮ್ಮ ಅಷ್ಟೇ. ಮನೆಯಲ್ಲಿ ಕಾಲಿಗೊಬ್ಬ, ಕೈಗೊಬ್ಬ ಆಳು-ಕಾಳುಗಳು ಇದ್ದರೂ ಬಹುತೇಕ ಗಣ್ಯರು ಕೂಡ ತಮ್ಮ ಮಕ್ಕಳಿಗಾಗಿ ವೈಕ್ತಿಗತ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಕ್ಷಣದಲ್ಲಿ ಅಪ್ಪ-ಅಮ್ಮನ ಪಾತ್ರ ನಿಭಾಯಿಸುತ್ತಾರೆ. ಅದೇ ರೀತಿ ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ.