Headlines

ವಾಹನದಿಂದ ಇಳಿದವನ ನಡುರಸ್ತೆಯಲ್ಲೇ ತುಳಿದ ಆನೆ: ಬಂಡೀಪುರದ ವೀಡಿಯೋ ವೈರಲ್ | Wild Elephant Attack In Bandipur Charges At Tourist Leaves Him Injured

ವಾಹನದಿಂದ ಇಳಿದವನ ನಡುರಸ್ತೆಯಲ್ಲೇ ತುಳಿದ ಆನೆ: ಬಂಡೀಪುರದ ವೀಡಿಯೋ ವೈರಲ್ | Wild Elephant Attack In Bandipur Charges At Tourist Leaves Him Injured



ವಾಹನದಿಂದ ಇಳಿದವನ ನಡುರಸ್ತೆಯಲ್ಲೇ ತುಳಿದ ಆನೆ: ಬಂಡೀಪುರದ ವೀಡಿಯೋ ವೈರಲ್ | Wild Elephant Attack In Bandipur Charges At Tourist Leaves Him Injured

ಬಂಡೀಪುರದಲ್ಲಿ ವಾಹನದಿಂದ ಇಳಿದ ವ್ಯಕ್ತಿಯ ಮೇಲೆ ಆನೆಯೊಂದು ದಾಳಿ ಮಾಡಿದ ಘಟನೆ ನಡೆದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಡು ಪ್ರಾಣಿಗಳು ಓಡಾಡುವ ಪ್ರದೇಶಗಳಲ್ಲಿ ವಾಹನಗಳಿಂದ ಇಳಯಬಾರದು. ಕಾಡುಪ್ರಾಣಿಗಳನ್ನು ಕೆರಳಿಸಬಾರದು ಎಂದು ಅರಣ್ಯ ಇಲಾಖೆ ರಕ್ಷಿತಾರಣ್ಯದ ನಡುವೆ ಸಾಗುವ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಮಾರ್ಗಸೂಚಿ ಹಾಗೂ ಫಲಕಗಳನ್ನು ಸ್ಥಳೀಯ ಹಾಗೂ ಆಂಗ್ಲ ಭಾಷೆಗಳಲ್ಲಿ ಹಾಕಿರುತ್ತದೆ. ಆದರೂ ಜನರು ಮಾತ್ರ ಬುದ್ದಿ ಕಲಿಯುವುದೇ ಇಲ್ಲ. ಬೇಕಾಬಿಟ್ಟಿ ಅರಣ್ಯ ಪ್ರದೇಶದಲ್ಲಿ ಮಧ್ಯೆ ಇಳಿಯುವ ಜೊತೆಗೆ ಪ್ರಾಣಿಗಳಿಗೂ ಸಂಚಾಕಾರ ತರುವುದಲ್ಲದೇ ತಮ್ಮ ಜೀವಕ್ಕೂ ಅಪಾಯ ತಂದುಕೊಳ್ಳುತ್ತಾರೆ. ಅದೇ ರೀತಿ ಈಗ ಬಂಡೀಪುರದಲ್ಲಿ ಹಾದು ಹೋಗುವ ಮೈಸೂರು ತಮಿಳುನಾಡು ಹೆದ್ದಾರಿಯಲ್ಲಿ ಆನೆಯೊಂದು ವಾಹನದಿಂದ ಇಳಿದ ವ್ಯಕ್ತಿಯೊಬ್ಬರನ್ನು ಓಡಿಸಿಕೊಂಡು ಹೋಗಿ ನಡುರಸ್ತೆಯಲ್ಲಿ ತುಳಿದು ಹಾಕಿದ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗಿದೆ.

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ parisaraparivara and hoysalasanjay ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಬಂಡೀಪುರ ಹೆದ್ದಾರಿಯಲ್ಲಿ ವಾಹನಗಳನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಜನ ಫೋಟೋ ತಮ್ಮ ಫೋನ್‌ನಲ್ಲಿ ವೀಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ಹಲವು ವಾಹನ ಹಾಗೂ ಜನರನ್ನು ನೋಡಿ ಕೆರಳಿದ ಆನೆ ವ್ಯಕ್ತಿಯೊಬ್ಬರನ್ನು ಓಡಿಸಿಕೊಂಡು ಹೋಗಿದ್ದು, ಈ ವೇಳೆ ಆನೆಯ ಕಾಲ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ, ಓಡುವ ವೇಳೆಯೇ ರಸ್ತೆ ಮಧ್ಯೆ ಆನೆಯ ಮುಂದೆಯೇ ಬಿದ್ದ ಅವರನ್ನು ಆನೆ ತುಳಿದು ಹಾಕಿ ಮುಂದೆ ಹೋಗಿದೆ. ಘಟನೆಯಲ್ಲಿ ಆ ವ್ಯಕ್ತಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಸಂಜಯ್ ಹೊಯ್ಸಳ ಎಂಬುವವರು ವೀಡಿಯೋ ಹಂಚಿಕೊಂಡು ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಿಶ್ವ ಆನೆ ದಿನಕ್ಕೆ ಒಂದು ದಿನ ಇರುವಾಗ ಮಾನವ ಸಮಾಜಕ್ಕೆ ಆನೆ ಕುರಿತ ಒಂದು ಒಳ್ಳೆ‌ಯ ಎಚ್ಚರಿಕೆ ಸಂದೇಶ, ಅದೂ ಸ್ವತಃ ಆನೆಯಿಂದಲೇ! ಮೂಲ ವಿಡಿಯೋ ಗ್ರಾಹಕರ ಪ್ರಕಾರ, ಅವರು ತಮಿಳುನಾಡಿನಿಂದ ಮೈಸೂರು ಕಡೆ ಬರುವಾಗ ಬಂಡೀಪುರದಲ್ಲಿ ಈ‌ ಘಟನೆ ನಡೆದಿದೆ. ಬಂಡೀಪುರದಲ್ಲಿ ಹಾದು ಹೋಗುವ ಎರಡು ರಸ್ತೆಗಳಲ್ಲಿ ಒಂದು ಮೈಸೂರು- ತಮಿಳುನಾಡು ಮುಖ್ಯರಸ್ತೆಯಾದರೆ, ಮತ್ತೊಂದು ಮೈಸೂರು- ಕೇರಳ ಮುಖ್ಯ ರಸ್ತೆ. ಹಾಗಾಗಿ ಎರಡು ಮಾರ್ಗಗಳಲ್ಲಿ ವಾಹನ ಸಂಚಾರ ಅಧಿಕ.‌ ಅದರಲ್ಲೂ ಕೇರಳ ಮಾರ್ಗಕ್ಕೆ ಬದಲಿ ಮಾರ್ಗ ದೂರ ಇರುವ ಕಾರಣ ಅವರೂ ಅಲ್ಲಿ ರಾತ್ರಿ ಸಂಚಾರಕ್ಕೂ ಆಗಾಗ ಲಾಭಿ ಮಾಡುತ್ತಿರುತ್ತಾರೆ. (ಈ ಎರಡೂ ಮಾರ್ಗಗಳಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧವಿದೆ)

ಈ ಎರಡೂ ರಸ್ತೆಗಳಲ್ಲಿ ಅಲ್ಲಲ್ಲೆ ವಾಹನ ಸವಾರರೂ ಪಾಲಿಸಬೇಕಾದ ನಿಯಮಗಳನ್ನು ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸ್ವಷ್ಟವಾಗಿ ಬರೆದಿರುವ ಸಾಕಷ್ಟು ಸಂದೇಶ ಫಲಕಗಳಿವೆ. ಅದರಲ್ಲಿ ಮುಖ್ಯವಾಗಿ ‘ರಸ್ತೆ ಮಧ್ಯೆ ಎಲ್ಲೂ ಪಾರ್ಕಿಂಗ್ ಮಾಡಬಾರದು, ವಾಹನದಿಂದ ಕೆಳಗಿಳಿಯಬಾರದು, ಅರಣ್ಯವನ್ನು ಪ್ರವೇಶಿಸುವುದು ಅನಧಿಕೃತ (Trespass), ವನ್ಯಜೀವಿಗಳಿಗೆ ಆಹಾರ ನೀಡಬಾರದು’ ಮುಂತಾದ ಎಚ್ಚರಿಕೆಗಳಿವೆ.

ಮೊದಲಿಗೆ ಇಂತಹ ಘಟನೆಗಳಲ್ಲಿ ಆನೆಗಳು ಹೆಚ್ಚಾಗಿ ರಸ್ತೆಗೆ ಬರಲು, ಬಂದು ಅಲ್ಲೆ ನಿಲ್ಲಲು ಅಲ್ಲಿನ ವಾಹನ ಸವಾರರಲ್ಲಿ ಸಾಕಷ್ಟು ಜನ ಆಗಾಗ್ಗೆ ಅವುಗಳಿವೆ ನೀಡುವ ಆಹಾರ ಕಾರಣ (ಈ ವಿಡಿಯೋದಲ್ಲೂ ಅದು ಕಾಣುತ್ತದೆ), ಹೊರಗಿನ ಆಹಾರಕ್ಕೆ ಅಭ್ಯಾಸವಾದ ಪ್ರಾಣಿಗಳು ಆಗಾಗ್ಗೆ ರಸ್ತೆ ಬದಿಗೆ ಬರುತ್ತವೆ. ಎರಡನೆಯದ್ದು ವ್ಯಕ್ತಿ ವಾಹನದಿಂದ ಕೆಳಗಿಳಿಯದೆ ಇದ್ದಿದ್ದರೆ ಅವನ ಮೇಲೆ ಈ ರೀತಿಯ ಭಯಾನಕ ದಾಳಿ ಆಗುತ್ತಿರಲಿಲ್ಲ. ಮೂರನೆಯದು ಜನ ಆನೆಯನ್ನು ನೋಡಲು, ನೋಡಿ ವಿಡಿಯೋ ಮಾಡಿಕೊಳ್ಳಲು ವಾಹನಗಳ‌್ನು ಪಾರ್ಕಿಂಗ್ ಮಾಡಿರುವುದು ಆನೆ ಕೆರಳಲು ಮುಖ್ಯ ಕಾರಣಗಳಲ್ಲೊಂದು… ಇವೆಲ್ಲಾ ಅಲ್ಲಿನ ಅರಣ್ಯ ನಿಯಮಗಳಿಗೆ ವಿರುದ್ಧವಾಗಿರುವವು. ಆ ನಿಯಮಗಳು ವನ್ಯಜೀವಿಗಳ ಸಂರಕ್ಷಣೆ ಉದ್ದೇಶದ ಜೊತೆಜೊತೆಗೆ ಅಲ್ಲಿ ಸಂಚರಿಸುವ ಜನರ ರಕ್ಷಣೆಯ ಉದ್ದೇಶವನ್ನೂ ಸಹ ಹೊಂದಿವೆ. ಜನರು ಅದನ್ನು ಅರ್ಥ ಮಾಡಿಕೊಂಡು ಜವಾಬ್ದಾರಿಯುತ ನಾಗರೀಕತ ಪ್ರದರ್ಶಿಸಬೇಕು.

ಆನೆ ಕಂಡ್ರೆ ನಿಲ್ಬಾರ್ದು; ಹುಲಿ ಕಂದ್ರೆ ಓಡ್ಬಾರ್ದು ಅನ್ನೋದು ಆನೆಗಳಿರುವ ಕಾಡುಗಳ ಕಾಡಂಚಿನ ಗ್ರಾಮಗಳ ಜನಪ್ರಿಯ ಗಾದೆ. ಯಾವುದಾದರೂ ವನ್ಯಜೀವಿ ಮನುಷ್ಯನನ್ನು ಕಂಡು ದೂರದಿಂದ ಓಡಿಸಿಕೊಂಡು ಬರುತ್ತದೆ (ಚಾರ್ಜ್ ಮಾಡುವುದು) ಎಂದರೆ ಅದು ಆನೆ ಮಾತ್ರ ಎನ್ನಬಹುದು. ಹಾಗಾಗಿ ಆನೆಗಳು ಕಂಡಾಗ ಆದಷ್ಟು ಅವುಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು. ಇಂತಹ ಪರಿಸ್ಥಿತಿಗಳಲ್ಲಿ ಗುಂಪುಗೂಡಬಾರದು. ಅದೆಲ್ಲಾ ಬಿಟ್ಟು ಈ ರೀತಿ ಅರಣ್ಯ ನಿಯಮಗಳನ್ನು ಗಾಳಿಗೆ ತೂರಲು ಹೋದರೆ, ಅರಣ್ಯಾಧಿಕಾರಿಗಳ ಕಣ್ತಪ್ಪಿಸಬಹುದು, ವನ್ಯಜೀವಿಗಳ ತಣ್ತಿಪ್ಪಿಸುವುದು ಕಷ್ಟ ಎಂದು ಸಂಜಯ್ ಹೊಯ್ಸಳ ಅವರು ಇನ್ಸ್ಟಾದಲ್ಲಿ ಬರೆದು ಈ ವೀಡಿಯೋ ಪೋಸ್ಟ್ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
 

 

 



Source link

Leave a Reply

Your email address will not be published. Required fields are marked *