ಒಬ್ಬಟ್ಟು- ರೊಟ್ಟಿ ಒಂದೇ ಎನ್ನೋದ್ಯಾಕೆ? ಸಮಾಜಕ್ಕೆ ನಾನು… Su From Soಗೆ ಯಶ್​ ಅಮ್ಮನ ಪ್ರತಿಕ್ರಿಯೆ ಏನು? | Yashs Mother Pushpa Arunkumar Reaction To Su From So Film Suc

ಒಬ್ಬಟ್ಟು- ರೊಟ್ಟಿ ಒಂದೇ ಎನ್ನೋದ್ಯಾಕೆ? ಸಮಾಜಕ್ಕೆ ನಾನು… Su From Soಗೆ ಯಶ್​ ಅಮ್ಮನ ಪ್ರತಿಕ್ರಿಯೆ ಏನು? | Yashs Mother Pushpa Arunkumar Reaction To Su From So Film Suc



ಒಬ್ಬಟ್ಟು- ರೊಟ್ಟಿ ಒಂದೇ ಎನ್ನೋದ್ಯಾಕೆ? ಸಮಾಜಕ್ಕೆ ನಾನು… Su From Soಗೆ ಯಶ್​ ಅಮ್ಮನ ಪ್ರತಿಕ್ರಿಯೆ ಏನು? | Yashs Mother Pushpa Arunkumar Reaction To Su From So Film Suc

ಒಂದೆಡೆ ನಾಗಾಲೋಟದತ್ತ ಸು ಫ್ರಮ್​ ಸೋ ಚಿತ್ರ ಮುನ್ನುಗ್ಗುತ್ತಿದ್ದರೆ, ಯಶ್​ ತಾಯಿ ಪುಷ್ಪಾ ಅರುಣ್​ ಕುಮಾರ್​ ಅವರ ಕೊತ್ತಲವಾಡಿ ನಿರೀಕ್ಷೆಯ ಹಂತವನ್ನು ತಲುಪಲಿಲ್ಲ. ಇದೀಗ Su From Soಗೆ ಅವರು ಏನಂದ್ರು ಕೇಳಿ… 

ಕೆಜಿಎಫ್​ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಬಹುನಿರೀಕ್ಷಿತ ಕೊತ್ತಲವಾಡಿ ಚಿತ್ರ ಆಗಸ್ಟ್​1ರಂದು ತೆರೆ ಕಂಡಿದ್ದು, ಬಾಕ್ಸ್​ ಆಫೀಸ್​​​ ನಿರೀಕ್ಷೆಗಳನ್ನು ತಲುಪುವಲ್ಲಿ ಹಿನ್ನೆಡೆ ಕಂಡಿದೆ ಎಂದು ಹೇಳಲಾಗುತ್ತಿದೆ. ಯಶ್​ ಅವರ ಅಮ್ಮನಾಗಿರುವ ಕಾರಣ, ಜನರು ಸಹಜವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ ಎಂದುಕೊಳ್ಳಲಾಗಿತ್ತು. ‘ಕೊತ್ತಲವಾಡಿ’ ಬಿಡುಗಡೆಗೂ ಮುನ್ನ ಕ್ರೇಜ್​​ ಕ್ರಿಯೇಟ್​ ಮಾಡಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಸಕ್ಸಸ್​ ಕಂಡಿಲ್ಲ ಎಂದು ತಿಳಿದುಬಂದಿದೆ. ಅದೇ ಇನ್ನೊಂದೆಡೆ, ರಾಜ್​ ಬಿ.ಶೆಟ್ಟಿ ಅವರ ಸು ಫ್ರಮ್ ಸೋ (Su From So) ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳದ ಎಷ್ಟೋ ಪಟ್ಟು ಹಣ ವಾಪಸ್​ ಬಂದಿದೆ. ರಾಜ್ ಬಿ ಶೆಟ್ಟಿ ಮತ್ತು ತಂಡ ನಿರ್ಮಾಣ ಮಾಡಿರುವ, ಜೆಪಿ ತುಮಿನಾಡು ನಟಿಸಿ, ಕತೆ ಬರೆದು, ನಿರ್ದೇಶನ ಮಾಡಿರುವ ಚಿತ್ರ ತನ್ನ ಕಂಟೆಂಟ್ ಮೂಲಕವೇ ಗೆದ್ದಿದೆ. ಜೊತೆಗೆ ಪ್ರತಿಯೊಂದು ಪಾತ್ರಗಳು ಸಹ ನೆನಪಿನಲ್ಲಿ ಉಳಿಯುವಂತಿದೆ. ಈ ಸಿನಿಮಾದಲ್ಲಿನ ಪ್ರತಿಯೊಂದು ಪಾತ್ರಗಳು ಸಹ ಚಿತ್ರಕ್ಕೆ ಜೀವ ತುಂಬಿವೆ. ಅದು ರವಿ ಅಣ್ಣ ಇರಬಹುದು, ಅಶೋಕ, ಭಾವ ಹೀಗೆ ಪ್ರತಿಯೊಬ್ಬರು ಅಚ್ಚುಕಟ್ಟಾಗಿ ನಟಿಸಿದ್ದಾರೆ. ಅದರಲ್ಲೂ ಭಾನು ಪಾತ್ರಧಾರಿ ಒಂದು ಕ್ಷಣ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡುತ್ತಾರೆ.

ಹೀಗೆ ಸು ಫ್ರಂ ಸೋ ಅಬ್ಬರ ಹೆಚ್ಚಾಗುತ್ತಿದ್ದಾಗ, ನಟ ಯಶ್​ ಅವರ ಅಮ್ಮ ಪುಷ್ಪಾ ಅರುಣ್​ ಕುಮಾರ್​ ಅವರಿಗೆ ಇದರ ಪ್ರಶ್ನೆ ಕೇಳಿದಾಗ ಸಹಜವಾಗಿಯೇ ಅಸಮಾಧಾನ ಮೂಡಿದೆ. ನೀವು ಎರಡೂ ಚಿತ್ರಗಳನ್ನು ಕಂಪೇರ್​ ಮಾಡಬೇಡಿ. ಒಬ್ಬಟ್ಟು ಮತ್ತು ರೊಟ್ಟಿ ಬೇರೆ. ಎರಡನ್ನೂ ಹೋಲಿಕೆ ಮಾಡುವುದು ಸರಿಯಲ್ಲ. ಅವರದ್ದು ಕಾಮಿಡಿ ಸಿನಿಮಾ, ನಮ್ಮದು ಸೀರಿಯಸ್​ ಸಿನಿಮಾ. ಮುಂದಿನ ದಿನಗಳಲ್ಲಿ ನಾನೂ ಕಾಮಿಡಿ ಸಿನಿಮಾ ನಾನೂ ಮಾಡಬಹುದು. ಆದರೆ ನನ್ನ ಬ್ಯಾನರ್​ನಿಂದ ಸೀರಿಯಸ್​ ಸಿನಿಮಾ. ಬರೀ ಕಾಮಿಡಿ ಮಾಡ್ತೇನೆ ಎಂದುಕೊಳ್ಳಬೇಡಿ. ನನಗೆ ನನ್ನದೇ ಆದ ಜವಾಬ್ದಾರಿ ಇದೆ. ಸಮಾಜಕ್ಕೆ ಬೇಕಾಗಿರೋ ಉತ್ತಮ ಸಂದೇಶ ಕೊಡುತ್ತೇನೆ ಎಂದಿದ್ದಾರೆ.

ಸಿನಿಮಾದಲ್ಲಿ ನಾನೂ ಕಾಮಿಡಿ ತರಬಹುದು

ಸಿನಿಮಾದಲ್ಲಿ ನಾನೂ ಕಾಮಿಡಿ ತರಬಹುದು. ಆದರೆ ಇಡೀ ಸಿನಿಮಾ ಅಲ್ಲ. ಆ ಸಿನಿಮಾ ಚೆನ್ನಾಗಿದೆ ಎಂದು ಕೇಳಲ್ಪಟ್ಟೆ. ಆಡಿಯೆನ್ಸ್​ ಅದನ್ನು ಇಷ್ಟಪಟ್ಟರು ಎನ್ನುವುದು ತಿಳಿಯಿತು. ಅವರದ್ದು ಅವರು ಮಾಡಲಿ ಬಿಡಿ, ನಮ್ಮ ಚಿತ್ರಕ್ಕೂ ತುಂಬಾ ಒಳ್ಳೆಯ ರೆಸ್​ಪಾನ್ಸ್​ ಇದೆ ಎಂದು ಪುಷ್ಪಾ ಹೇಳಿದ್ದಾರೆ. ಎಫ್​ಡಿಎಫ್​ಎಸ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಈ ಹಿಂದೆ ಜನರ ವಿರುದ್ಧ ಪುಷ್ಪಾ ಅವರು ಗರಂ ಆಗಿದ್ದರು. ಯಶ್​ ಇಷ್ಟೊಂದು ದುಡ್ಡು ಹಾಕ್ತಿದ್ದಾರೆ, ಮಗನನ್ನು ಅಲ್ಲಿ ಬಿಟ್ಟಿದ್ದಾರೆ ಎಂದು ಹೇಳ್ತಿರೋ ವಿರುದ್ಧ ಕಿಡಿ ಕಾರಿರೋ ಅವರು, ಯಶ್​ ಸಾಮಾನ್ಯ ಸರ್ಕಾರಿ ನೌಕರ ಆಗಿ ರೋಡ್​ನಲ್ಲಿ ಇದ್ದಿದ್ದರೆ ಈ ಮಾತು ಹೇಳಿದ್ರೆ ಸರಿ. ಆದರೆ ಯಶ್​ಗೆ ಇರೋ ಕ್ರೇಜ್​ ಎಷ್ಟು ಎಂದು ಗೊತ್ತಲ್ಲ, ಒಂದು ಕಡೆ ಫಂಕ್ಷನ್​ಗೆ ಹೋದ್ರೆ ಹತ್ತಾರು ಬಾಡಿಗಾರ್ಡ್​ಗಳು ಬೇಕು, ಅಂಥ ಯಶ್​ಗೆ ಕಡಿಮೆ ಬಜೆಟ್​ನ ನನ್ನ ಸಿನಿಮಾದಲ್ಲಿ ಚಾನ್ಸ್​ ಕೊಡಬೇಕು ಎಂದ್ರೆ ಹೇಗೆ ಎಂದು ಪ್ರಶ್ನಿಸಿದ್ದರು.

ಅಷ್ಟೇ ಅಲ್ಲದೇ ಪ್ರಮೋಷನ್​ ಸಮಯದಲ್ಲಿ ಕೂಡ ಕಿಡಿ ಕಾರಿದ್ದರು. ಅವರಿಗೆ ಸಹಜವಾಗೇ ನಿಮ್ಮ ಮಗನಿಗೆ ಕೊತ್ತಲವಾಡಿ ಸಿನಿಮಾ ತೋರಿಸಿದ್ರಾ., ರಾಕಿಂಗ್ ಸ್ಟಾರ್ (Rocking Star) ನಿಮ್ಮ ಸಿನಿಮಾ ನೋಡಿ ಏನಂದ್ರು ಅನ್ನೋ ಪ್ರಶ್ನೆ ತೂರಿಬಂದಿತ್ತು. ಆಗ ಯಶ್ ತಾಯಿ ಮಾರ್ಮಿಕವಾದ ಉತ್ತರ ಕೊಟ್ಟಿದ್ದರು. ಯಶ್ ನೋಡಿದ ಮಾತ್ರಕ್ಕೆ ಸಿನಿಮಾ ಓಡಲ್ಲ…ಹಣ ಬರಲ್ಲ.. ಜನ ಬಂದು ನೋಡಿದ್ರೇನೆ ಸಿನಿಮಾ ಗೆಲ್ಲೋದು ಅಂದಿದ್ದಾರೆ. ಮಗನ ಅನಿಸಿಕೆ ಬೇಕಾಗಿಲ್ಲ. ಈ ಸಿನಿಮಾ ಮಾಡಿರೋದು ಜನಕ್ಕೆ ಅಂದಿದ್ದರು. ಅವರ ನಟನೆ ನಿರ್ಮಾಣದ ರಾಮಾಯಣದ ಬಗ್ಗೆ ನನಗೇನೂ ಕೇಳಬೇಡಿ ಅಂತಿದ್ದರು.

 

 



Source link

Leave a Reply

Your email address will not be published. Required fields are marked *