ಟೆರೆಸ್ ಮೇಲೆಯೇ ಬ್ಯುಸಿನೆಸ್ ಪ್ರಾರಂಭ; ಮಿಲೆಟ್ಸ್‌ನಿಂದ ಲಕ್ಷ ಲಕ್ಷ ಸಂಪಾದಿಸಿದ 26 ವರ್ಷದ ಯುವತಿ! | 26 Year Old Built A Rs 3 Lakh Month Millet Business From Her Terrace Kitchen

ಟೆರೆಸ್ ಮೇಲೆಯೇ ಬ್ಯುಸಿನೆಸ್ ಪ್ರಾರಂಭ; ಮಿಲೆಟ್ಸ್‌ನಿಂದ ಲಕ್ಷ ಲಕ್ಷ ಸಂಪಾದಿಸಿದ 26 ವರ್ಷದ ಯುವತಿ! | 26 Year Old Built A Rs 3 Lakh Month Millet Business From Her Terrace Kitchen



ಟೆರೆಸ್ ಮೇಲೆಯೇ ಬ್ಯುಸಿನೆಸ್ ಪ್ರಾರಂಭ; ಮಿಲೆಟ್ಸ್‌ನಿಂದ ಲಕ್ಷ ಲಕ್ಷ ಸಂಪಾದಿಸಿದ 26 ವರ್ಷದ ಯುವತಿ! | 26 Year Old Built A Rs 3 Lakh Month Millet Business From Her Terrace Kitchen

ಪಾಲಕ್ ತಮ್ಮ ಮನೆಯ ಛಾವಣಿಯ ಮೇಲೆ ಈ ವ್ಯವಹಾರ ಪ್ರಾರಂಭಿಸಿದರು. ಈಗ ಅದು ಫರಿದಾಬಾದ್‌ನಲ್ಲಿ ಕಂಪ್ಲೀಟ್ ಪ್ರೊಡಕ್ಷನ್ ಯೂನಿಟ್ ಹೊಂದಿದೆ.

ಬ್ಯುಸಿನೆಸ್ ಪ್ರಾರಂಭಿಸುವ ವಿಷಯಕ್ಕೆ ಬಂದಾಗ ಹೆಚ್ಚು ಹಣ ಅಥವಾ ಸ್ಥಳಾವಕಾಶದ ಅಗತ್ಯವೇ ಇಲ್ಲ ಅಂತಾರೆ ಅನುಭವಿಗಳು. ಬೇಕಾಗಿರುವುದು ಇಚ್ಛಾಶಕ್ತಿ. 26 ವರ್ಷದ ಪಾಲಕ್ ಅರೋರಾ ಕೂಡ ಈಗ ಇದೇ ರೀತಿ ನಡೆದುಕೊಂಡಿದ್ದಾರೆ. ಪಾಲಕ್ ಅವರ ಪರಿಚಯ ಮಾಡಿಕೊಡುವುದಾದರೆ ಪಾಲಕ್ ಓರ್ವ ಆಹಾರ ಎಂಜಿನಿಯರ್(Food Engineer). ಇವರು ಮಿಲೆಟ್ಸ್‌ ಅಥವಾ ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳನ್ನ ಮಾರಾಟ ಮಾಡ್ತಾರೆ. ಈ ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಅನೇಕ ರೈತರು ಇವರ ಬ್ಯುಸಿನೆಸ್‌ಗೆ ಕೈ ಜೋಡಿಸಿರುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತಿದೆ.

ಇಂದು ಪಾಲಕ್ ‘Millium’ಎಂಬ ಫುಡ್ ಬ್ರಾಂಡ್ ನಡೆಸುತ್ತಿದ್ದು, ಈ ಮೊದಲೇ ಹೇಳಿದ ಹಾಗೆ ಮಿಲೆಟ್ಸ್‌ನಿಂದ ತಯಾರಿಸಿದ ಆರೋಗ್ಯಕರ ಉತ್ಪನ್ನಗಳನ್ನ ಮಾರಾಟ ಮಾಡ್ತಾರೆ. ಅಂದಹಾಗೆ ಪಾಲಕ್ ತಮ್ಮ ಮನೆಯ ಛಾವಣಿಯ ಮೇಲೆ ಈ ವ್ಯವಹಾರ ಪ್ರಾರಂಭಿಸಿದರು. ಈಗ ಅದು ಫರಿದಾಬಾದ್‌ನಲ್ಲಿ ಕಂಪ್ಲೀಟ್ ಪ್ರೊಡಕ್ಷನ್ ಯೂನಿಟ್ ಹೊಂದಿದೆ.

ಕೊರೊನಾದಲ್ಲಿ ಪ್ರಾರಂಭ
ಪಾಲಕ್ ಅವರ ಜರ್ನಿ ಹಿಂತಿರುಗಿ ನೋಡಿದರೆ ಈ ಬ್ಯುಸಿನೆಸ್ ಅನ್ನು ದೊಡ್ಡ ಮಟ್ಟದಲ್ಲಿ ಪ್ರಾರಂಭ ಮಾಡಲಿಲ್ಲ. ಇದು 2020 ರಲ್ಲಿ COVID-19 ಲಾಕ್‌ಡೌನ್ ಸಮಯದಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ಅವರು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯಲ್ಲಿ (NIFTEM) ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದರು. ತಮ್ಮ ಆರೋಗ್ಯಕ್ಕೆ ಉತ್ತಮ ಆಹಾರವನ್ನು ಹುಡುಕುತ್ತಿದ್ದಾಗ ಇದೆಲ್ಲವೂ ಪ್ರಾರಂಭವಾಯಿತು. ಕ್ರಮೇಣ ಅದು ಆಹಾರ ವ್ಯವಸ್ಥೆ ಮತ್ತು ಹಳ್ಳಿಯ ಜನರ ಜೀವನವನ್ನು ಸುಧಾರಿಸುವ ಧ್ಯೇಯವಾಯಿತು.

ಪಾಲಕ್ , ‘ನಾನು ಆನ್‌ಲೈನ್‌ನಲ್ಲಿ ತಯಾರಿಸಲು ಸುಲಭವಾದ ಮತ್ತು ಆರೋಗ್ಯಕ್ಕೆ ಉತ್ತಮವಾದ ಆಹಾರ ಹುಡುಕುತ್ತಿದ್ದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ತಿನ್ನಲು ಬಯಸಿದ್ದೆ. ಅಲ್ಲಿ ಹಸಿ ಮಿಲೆಟ್ಸ್‌ ಅಥವಾ ಒರಟಾದ ಹಿಟ್ಟು ಮಾತ್ರ ಸಿಕ್ಕಿತೇ ಹೊರತು ಅಡುಗೆ ಮಾಡಲು ಬೇಕಾದ ಅಥವಾ ರೆಡಿ ಟು ಈಟ್ ಉತ್ಪನ್ನ ಸಿಗಲಿಲ್ಲ. ಮಿಲೆಟ್ಸ್‌ ಪೌಷ್ಟಿಕ ಎಂದು ಎಲ್ಲರಿಗೂ ತಿಳಿದಿತ್ತು, ಆದರೆ ಯಾರೂ ಅದನ್ನು ಇಷ್ಟು ಈಸಿಯಾಗಿ ಸಿಗುವ ಹಾಗೆ ಮಾಡಿರಲಿಲ್ಲ’ ಎಂದು ತಿಳಿಸಿದ್ದಾರೆ.

ಪಾಲಕ್‌ಗೆ ಆಹಾರ ತಂತ್ರಜ್ಞಾನದ ಬಗ್ಗೆ ಉತ್ತಮ ಜ್ಞಾನವಿದ್ದು, FSSC 22000 ಲೀಡ್ ಆಡಿಟರ್ ಪ್ರಮಾಣೀಕರಣವನ್ನೂ ಹೊಂದಿದ್ದಾರೆ. ಆದ್ದರಿಂದ ಮಿಲೆಟ್ಸ್‌ ಅನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸಬೇಕೆಂದು ತಿಳಿದಿದೆ.

ಗೋಧಿಯನ್ನು ಸುಲಭವಾಗಿ ಹಿಟ್ಟಾಗಿ ಪರಿವರ್ತಿಸಿ ಬಳಸಬಹುದು, ಆದರೆ ಮಿಲೆಟ್ಸ್‌ ವಿಷಯದಲ್ಲಿ ಹಾಗಲ್ಲ. ನೆನೆಸಿ, ಮೊಳಕೆಯೊಡೆಸಿ, ಒಣಗಿಸಿ ಅಥವಾ ಹುರಿಯಬೇಕು. ಇದು ಮಿಲೆಟ್ಸ್‌ನಲ್ಲಿರುವ ಪೋಷಕಾಂಶ ವಿರೋಧಿ ಅಂಶಗಳನ್ನು ನಾಶಪಡಿಸುತ್ತದೆ ಮತ್ತು ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಬಹುತೇಕ ನಡೆಯುತ್ತಿರಲಿಲ್ಲ. ಆದ್ದರಿಂದ ಜನರು ಕಚ್ಚಾ ಮಿಲೆಟ್ಸ್‌ ಅಥವಾ ಸಂಸ್ಕರಿಸದ ಹಿಟ್ಟನ್ನು ಖರೀದಿಸುತ್ತಿದ್ದರು. ಆದರೆ ಅದನ್ನು ಬಳಸಲು ಕಷ್ಟಕರವಾಗಿತ್ತು.

ತಂದೆಗೆ ಬಂತು ಕಾಯಿಲೆ
ಪಾಲಕ್ ಅವರ ತಂದೆಗೆ ಮೂತ್ರಪಿಂಡ ಕಾಯಿಲೆ ಬಂದಾಗ ಈ ಕೆಲಸ ಅವರಿಗೆ ಇನ್ನಷ್ಟು ಮುಖ್ಯವಾಯಿತು . ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದರು. ಇದಾದ ನಂತರ, ಆಹಾರ ಮತ್ತು ಆರೋಗ್ಯದ ಬಗ್ಗೆ ಅವರ ಕುಟುಂಬದ ಮನೋಭಾವ ಬದಲಾಯಿತು. ‘ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಿದೆ. ಪೌಷ್ಟಿಕ ಮತ್ತು ತಯಾರಿಸಲು ಸುಲಭವಾದ ಆಹಾರ ಮಾಡುವುದನ್ನು ಬಯಸಿದ್ದೆ. ಇದರಿಂದ ನನ್ನಂತಹ ಕುಟುಂಬಗಳು ಬ್ಯುಸಿ ಲೈಫ್‌ಸ್ಟೈಲ್ ಅಥವಾ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಚೆನ್ನಾಗಿ ತಿನ್ನಬಹುದು’ ಎಂದಿದ್ದಾರೆ ಪಾಲಕ್.

ಲಾಕ್‌ಡೌನ್ ಸಮಯದಲ್ಲಿ ಕಾಲೇಜು ಪ್ರಯೋಗಾಲಯವನ್ನು ಮುಚ್ಚಲಾಗಿತ್ತು. ಆದ್ದರಿಂದ ಅವರು ತಮ್ಮ ಕುಟುಂಬದ ಛಾವಣಿ ಬಳಸಿಕೊಂಡರು. ಇದು ಫರಿದಾಬಾದ್‌ನಲ್ಲಿತ್ತು. ಅವರು ಮನೆಯಲ್ಲಿಯೇ ಆಹಾರ ಸಂಸ್ಕರಣೆಯ ವಿಧಾನ ಅಳವಡಿಸಿಕೊಂಡರು. ಆಹಾರವನ್ನು ನಿಧಾನವಾಗಿ ಒಣಗಿಸಲು ಮತ್ತು ಅದರ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸೌರ ಡ್ರೈಯರ್‌ಗಳನ್ನು ಖರೀದಿಸಿದರು. ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಲು ಬ್ಲೆಂಡರ್‌ಗಳನ್ನೂ ಖರೀದಿಸಿದರು. ಜೊತೆಗೆ ಪುಡಿಮಾಡುವ ಯಂತ್ರಗಳನ್ನೂ ಖರೀದಿಸಿದರು. ತಾಯಿ ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡಿದರು.

ಪಾಲಕ್ ಆರೋಗ್ಯಕರ ಮತ್ತು 10 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಬೇಯಿಸಬಹುದಾದ ಮಿಲೆಟ್ಸ್‌ ಊಟ ಮಾಡಲು ಬಯಸಿದ್ದರು. ಮೊದಲು ಮೊಳಕೆಯೊಡೆದ ಮಿಲೆಟ್ಸ್‌ ಗಂಜಿ, ತರಕಾರಿ ತುಂಬಿದ ಇಡ್ಲಿಗಳು ಮತ್ತು ಪಂಜಾಬಿ ಶೈಲಿಯ ಚಿಲ್ಲಾಗಳು (ಖಾರದ ಪ್ಯಾನ್‌ಕೇಕ್‌ಗಳು) ಮಾಡಿದರು. ರುಚಿ, ಪೋಷಣೆಗಾಗಿ ಪ್ರತಿಯೊಂದು ಪಾಕವಿಧಾನವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೂರಕ್ಕೂ ಹೆಚ್ಚು ಬಾರಿ ಪರೀಕ್ಷಿಸಲಾಯಿತು. ಜೂನ್ 2022 ರ ಹೊತ್ತಿಗೆ ಪಾಲಕ್ ಮಿಲಿಯಮ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದರು.

ಎಷ್ಟಿದೆ ಸಂಪಾದನೆ?
ಪಾಲಕ್ ಅವರ ಮಿಲಿಯಮ್‌ ಈಗ ಮಿಲೆಟ್ಸ್‌ ಸೂಪ್, ಮಿಲೆಟ್ಸ್‌ ನೂಡಲ್ಸ್ ಮತ್ತು ಪಾಸ್ತಾ, ಮಿಲೆಟ್ಸ್‌ ಪೋಹಾ ಮತ್ತು ಪ್ಯಾನ್‌ಕೇಕ್ ಮಿಶ್ರಣದಂತಹ 15 ಕ್ಕೂ ಹೆಚ್ಚು ಉತ್ಪನ್ನಗಳನ್ನು ಒಳಗೊಂಡಿದೆ. ಅವುಗಳ ಬೆಲೆ 55 ರಿಂದ 640 ರೂ. ಆದ್ದರಿಂದ ಮಿಲಿಯಮ್ ಎಲ್ಲಾ ರೀತಿಯ ಜನರಿಗೆ ಲಭ್ಯವಿದೆ. ಇಂದು ಪಾಲಕ್‌ ಮಿಲೆಟ್ಸ್‌ ಬ್ಯುಸಿನೆಸ್‌ನಲ್ಲಿ ಪ್ರತಿ ತಿಂಗಳು 3 ಲಕ್ಷ ರೂ.ಗಳಿಸುತ್ತಾರೆ. ಹಳೆಯ ವಿಧಾನ ಮತ್ತು ಹೊಸ ವಿಜ್ಞಾನವನ್ನು ಸಂಯೋಜಿಸುವ ಮೂಲಕ ಕೆಲಸ ಮಾಡುತ್ತಿದ್ದಾರೆ. ಇದು ಮಿಲೆಟ್ಸ್‌ ಕೃಷಿಯನ್ನು ಬಹುತೇಕ ತ್ಯಜಿಸಿದ್ದ ರೈತರಿಗೆ ಸಹ ಪ್ರಯೋಜನ ನೀಡುತ್ತಿದೆ.



Source link

Leave a Reply

Your email address will not be published. Required fields are marked *