
<p>ಈ ಫೋಟೋದಲ್ಲಿರೋ ಪುಟ್ಟ ಹುಡುಗ ಯಾರು ಗೊತ್ತಾ? ಮಾಜಿ ಉಪರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಈ ಹುಡುಗ ಈಗ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ. ಯಾರಿದು? ಕನ್ನಡ ಭಾಷೆಗೆ ಅವಮಾನಿಸಿ ಪೇಚಿಗೆ ಸಿಲುಕಿದ್ದ.!</p><img>ಸೆಲೆಬ್ರಿಟಿಗಳ ಹಳೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತವೆ. ಈಗ ವೈರಲ್ ಆಗ್ತಿರೋ ಫೋಟೋದಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಜೊತೆ ಒಬ್ಬ ಪುಟ್ಟ ಹುಡುಗ ಇದ್ದಾನೆ. ಈ ಹುಡುಗ ಈಗ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ.<img>ಫೋಟೋದಲ್ಲಿರೋ ಹುಡುಗ ಲೋಕನಾಯಕ ಕಮಲ್ ಹಾಸನ್. ಬಾಲನಟನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಕಮಲ್, ‘ಕಲತ್ತೂರ್ ಕಣ್ಣಮ್ಮ’ ಚಿತ್ರದಲ್ಲಿ ಸಾವಿತ್ರಿಯವರ ಮಗನಾಗಿ ನಟಿಸಿದ್ದರು.<img>’ಕಲತ್ತೂರ್ ಕಣ್ಣಮ್ಮ’ ಚಿತ್ರದ ಅಭಿನಯಕ್ಕಾಗಿ ಕಮಲ್‌ಗೆ ರಾಷ್ಟ್ರಪತಿ ಪದಕ ಲಭಿಸಿತು. ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.<img><p>ಬಾಲನಟನಾಗಿ ಪ್ರಶಸ್ತಿ ಪಡೆದ ಕಮಲ್, ಈಗ ಭಾರತೀಯ ಚಿತ್ರರಂಗದ ದಿಗ್ಗಜ ನಟರಾಗಿದ್ದಾರೆ. ಆದರೆ, ಇತ್ತೀಚೆಗೆ ಥಗ್‌ಲೈಫ್ ಸಿನಿಮಾ ಬಿಡುಗಡೆ ವೇಳೆ ಕನ್ನಡ ಭಾಷೆಗೆ ಅವಮಾನ (Insult to Kannada language) ಮಾಡಿ ಪೇಚಿಗೆ ಸಿಲುಕಿದ್ದರು. ಈ ಕೇಸ್ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು.</p><img><p>ಕಮಲ್ ಹಾಸನ್ 60 ವರ್ಷಗಳ ಸಿನಿಮಾ ಜೀವನವನ್ನು ಪೂರ್ಣಗೊಳಿಸಿದ್ದಾರೆ. ಇದೀದ ಇಂಡಿಯನ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.</p>
Source link
ಸರ್ವೇಪಲ್ಲಿ ರಾಧಾಕೃಷ್ಣನ್ ಜೊತೆಗಿರೋ ಪುಟ್ಟ ಹುಡುಗ, ಕನ್ನಡ ಭಾಷೆಗೆ ಅವಮಾನಿಸಿದ್ದು ನೆನಪಿದೆಯಾ? ಯಾರಿವರು ಗೆಸ್ ಮಾಡಿ!