ಬೆಂಗಳೂರು, ಜೂನ್ 27: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅಸಲೀ ವಿಷಯವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಪಟ್ಟರೂ ಅನಿವಾರ್ಯತೆಯನ್ನು ಮುಂದೂಡಲು, ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಅವರ ಬಾಡಿ ಲ್ಯಾಂಗ್ವೇಜ್ ನಿಂದ ಸಭೆಯಲ್ಲಿ ನಡೆದ ಚರ್ಚೆಯೇನು ಅನ್ನೋದನ್ನು ಊಹಿಸಬಹದು. ಇವತ್ತು ಮಲ್ಲೇಶ್ವರಂ ಶಾಸಕ ಡಾ ಸಿಎನ್ ಆಶ್ವಥ್ ನಾರಾಯಣ ಮನೆಯಲ್ಲಿ ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಸಭೆ ಸೇರಿದ್ದರು. ವಿರೋಧ ಪಕ್ಷದ ನಾಯಕ ಅರ್ ಅಶೋಕ ದೆಹಲಿಗೆ ಹೋಗಿದ್ದಾರೆ. ವಿಜಯೇಂದ್ರ ಕೂಡ ಹೋಗಿದ್ದರು, ಇವರು ವಾಪಸ್ಸು ಬಂದರೆ ಆಶೋಕ ಅಲ್ಲೇ ಉಳಿದಿದ್ದಾರೆ. ಅಶೋಕ ಅನುಪಸ್ಥಿತಿಯಲ್ಲಿ ಸಭೆ ನಡೆದಿದೆ ಅಂದರೆ ಅದರ ಅರ್ಜೆನ್ಸಿಯನ್ನು ಊಹಿಸಬಹುದು. ಪ್ರಾಯಶಃ ದೆಹಲಿಯಿಂದ ಅಶೋಕ ಅವರು ಅಶ್ವಥ್ ನಾರಾಯಣ ಅವರಿಗೆ ಫೋನ್ ಮಾಡಿರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾಯಿಸಿ: ಜೆಪಿ ನಡ್ಡಾಗೆ ಅರವಿಂದ ಲಿಂಬಾವಳಿ ಮನವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ