ಕಾನ್ಪುರದ ಶಿವ ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಕಾನ್ಪುರ: ಉತ್ತರ ಪ್ರದೇಶದ ಕಲ್ಯಾಣಪುರ ಪ್ರದೇಶದಲ್ಲಿನ ಶಿವನ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಕೋಮು ಸಾಮರಸ್ಯ ಬಿಂಬಿಸುತ್ತಿದೆ.
ಕಲ್ಯಾಣಪುರದ ಅವಂತಿಪುರಂನಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಆ ಮಹಿಳೆ ದೇವರ ಮುಂದೆ ಆಚರಣೆಗಳನ್ನು ಮಾಡುತ್ತಿರುವ ವಿಡಿಯೋ ಸೆರೆಯಾಗಿದೆ. ಆಕೆಯ ಕುಟುಂಬ ಸದಸ್ಯರೊಬ್ಬರು ತೀವ್ರ ಅಸ್ವಸ್ಥರಾಗಿ ಹತ್ತಿರದ ನರ್ಸಿಂಗ್ ಹೋಂಗೆ ದಾಖಲಾಗಿದ್ದಾಗ ಆಕೆ ಅವರು ಹುಷಾರಾಗಿ ಬಂದರೆ ಸೇವೆ ನೀಡುವುದಾಗಿ ಶಿವನಿಗೆ ಪ್ರತಿಜ್ಞೆ ಮಾಡಿದ್ದಳು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಮಂಧನಾ ಪ್ರದೇಶದ ನಿವಾಸಿಯಾಗಿರುವ ಮಹಿಳೆಯ ಪ್ರಕಾರ, ಅವರು ತನ್ನ ಸಂಬಂಧಿಕರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾಗಿ ಹೇಳಿದ್ದಾರೆ. ತಾನು ತನ್ನ ಸಂಬಂಧಿಯ ಚೇತರಿಕೆಗೆ ಪ್ರಾರ್ಥಿಸಿದ್ದೆ. ಈಗ ನನ್ನ ಪ್ರೀತಿಪಾತ್ರರು ಆರೋಗ್ಯವಾಗಿರುವುದರಿಂದ, ಸಾಂಪ್ರದಾಯಿಕ ಪೂಜೆ (ಧಾರ್ಮಿಕ ಪೂಜೆ) ಮಾಡುವ ಮೂಲಕ ಕೃತಜ್ಞತೆಯ ಪ್ರತಿಜ್ಞೆಯನ್ನು ಪೂರೈಸಲು ತಾನು ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಅವರು ದೇವಾಲಯದಲ್ಲಿ ಪೂರ್ಣ ಭಕ್ತಿಯಿಂದ ಪೂಜೆಯಲ್ಲಿ ತೊಡಗಿಸಿಕೊಳ್ಳುವುದನ್ನು ಕಾಣಬಹುದು. ಇದು ಧರ್ಮ ಯಾವುದಾದರೂ ಅಂತರ್ಧರ್ಮೀಯ ಗೌರವ ನೀಡುವುದರ ಮತ್ತು ಜೊತೆ ವ್ಯಕ್ತಿಯೊಬ್ಬನ ನಂಬಿಕೆಯ ಮುಂದೆ ಎಲ್ಲವೂ ಶೂನ್ಯ ಎಂಬುವುದನ್ನು ತೋರಿಸುತ್ತಿದೆ. ವೀಡಿಯೋ ನೋಡಿದ ಅನೇಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದು ನಮ್ಮ ಭಾರತ, ಇದು ಭಾರತದ ವೈವಿಧ್ಯ ಸಂಸ್ಕೃತಿಗೆ ಸಾಕ್ಷಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಕೆಲವರು ಈ ವೀಡಿಯೋಗೆ ಹಾಗೂ ಮಹಿಳೆಯ ನಂಬಿಕೆಯನ್ನು ಟೀಕೆ ಮಾಡಿದರು ಬಹುತೇಕರು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬುರ್ಕಾ ಧರಿಸಿದ ಕೂಡಲೇ ಎಲ್ಲರೂ ಮುಸಲ್ಮಾನರು ಆಗುವುದಿಲ್ಲ ಎಂದು ಒಬ್ಬರು ಮಹಿಳೆಯ ಕ್ರಮಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.
Scroll to load tweet…