ಇದೇ ಮೊದಲ ಬಾರಿಗೆ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಜೇಮ್ಸ್ ವೆಬ್ ಟೆಲಿಸ್ಕೋಪ್ | Ground Breaking Discovery James Webb Space Telescope Finds Its First Alien Planet

ಇದೇ ಮೊದಲ ಬಾರಿಗೆ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದ ಜೇಮ್ಸ್ ವೆಬ್ ಟೆಲಿಸ್ಕೋಪ್ | Ground Breaking Discovery James Webb Space Telescope Finds Its First Alien Planet



ಏಲಿಯನ್ ಇದೆಯಾ? ಇದ್ದರೆ ಎಲ್ಲಿ ವಾಸ? ಈ ಪ್ರಶ್ನೆಗಳಿಗೆ ಉತ್ತರ ಹುಡುಕು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.ಇದರ ನಡುವೆ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇದೇ ಮೊದಲ ಬಾರಿ ಏಲಿಯನ್ ಪ್ಲಾನೆಟ್ ಪತ್ತೆ ಹಚ್ಚಿದೆ. 

ಪ್ಯಾರಿಸ್ (ಜೂ.27) ಏಲಿಯನ್ ಕುರಿತು ಹಲವು ಕುತೂಹಲ, ಆತಂಕ ಜಗತ್ತಿನಾದ್ಯಂತ ಇದೆ. ಏಲಿಯನ್ ವಿಮಾನ ಪತ್ತೆ, ಏಲಿಯನ್ ಕುರುಹು ಪತ್ತೆ ಅನ್ನೋ ವಿಡಿಯೋ ಸೇರಿದಂತೆ ಮಾಹಿತಿಗಳು ಜನರನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿತ್ತು. ಇತ್ತ ವಿಜ್ಞಾನಿಗಳು ಅನ್ಯಗ್ರಹ ಜೀವಿಗಳ ಇರುವಿಕೆ ಪತ್ತೆ ಹಚ್ಚಲು ನಿರಂತರ ಅಧ್ಯಯನ ಮಾಡುತ್ತಿದ್ದಾರೆ. ಇದರ ನಡುವೆ ವಿಜ್ಞಾನಿಗಳ ಸಂಶೋಧನೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇದೇ ಮೊದಲ ಬಾರಿಗೆ ಏಲಿಯನ್ ಗ್ರಹ ಪತ್ತೆಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಈ ಎಲಿಯನ್ ಪ್ಲಾನೆಟ್ ಹಚ್ಚಿದೆ ಎಂದು CNRS ಸಂಶೋಧನಾ ಕೇಂದ್ರ ಹೇಳಿದೆ. ಈ ಅಧ್ಯಯನ ವರದಿ ಭೂಮಿಯ ಹೊರಗಿನ ಗ್ರಹ ಕುರಿತು ಮತ್ತಷ್ಟು ಬೆಳಕು ಚೆಲ್ಲಿದೆ.

TWA 7b ಪ್ಲಾನೆಟ್ ಎಂದು ಹೆಸರಿಡಲಾದ ಈ ಗ್ರಹದ ಕುರಿತು ಕೆಲ ರೋಚಕ ಮಾಹಿತಿಯನ್ನು CNRS ಸಂಶೋಧನಾ ಕೇಂದ್ರ ಹೇಳಿದೆ. ಈ ಗ್ರಹ ಭೂಮಿಯಿಂದ ನೂರು ಜ್ಯೋತಿವರ್ಷಗಳಷ್ಟು ದೂರದಲ್ಲಿದೆ. ಆದರೆ ಬ್ರಹ್ಮಾಂಡದಲ್ಲಿ ಇದು ದೂರದ ಗ್ರಹವಲ್ಲ. ಸರಿಸುಮಾರು 6.4 ಮಿಲಿಯನ್ ವರ್ಷಗಳಷ್ಟು ಹಳೆಯ ಈ ಗ್ರಹವಾಗಿದೆ. ಸೂರ್ಯನಿಗೆ ಹೋಲಿಸಿದರೆ ಈ ಗ್ರಹ ಶಿಶು. ಕಾರಣ ಸೂರ್ಯ 4.5 ಶತಕೋಟಿ ವರ್ಷಗಳಷ್ಟು ಹಳೆಯದು. ಈ ಗ್ರಹ ಅನಿಲ ಹಾಗೂ ಧೂಳಿನಿಂದ ಆವೃತ್ತವಾಗಿದೆ ಎಂದಿದ್ದಾರೆ. ಈ ಗ್ರಹ ಇತರ ಎಕ್ಸೋಪ್ಲಾನೆಟ್‌ಗಿಂತ 10 ಪಟ್ಟು ಹಗುರ ದ್ರವ್ಯರಾಶಿ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ಯಾರಿಸ್‌ನ CNRS ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಖಗೋಳದ ನಿರಂತರ ಅಧ್ಯಯನ ನಡೆಸುತ್ತಿದ್ದಾರೆ. ಈ ವೇಳೆ ಭೂಮಿಯ ಹೂರಗಿನ ಗ್ರಹವನ್ನು ಪತ್ತೆ ಹಚ್ಚಿದ್ದಾರೆ. ಇದು TWA 7b ಹೊಸ ಪ್ಲಾನೆಟ್ ಎಂದು ಜನರಲ್ ನೇಚರ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಗ್ರಹಗಳ ಚಿತ್ರ ಸೆರೆ ಹಿಡಿಯುವು ಅತ್ಯಂತ ಸವಾಲಿನ ಕೆಲಸವಾಗಿದೆ. ಕಾರಣ ಅಲ್ಲಿ ತಿರುಗುತ್ತಿರುವ ನಕ್ಷತ್ರ ಬೆಳಕಿನಿಂದ ಚಿತ್ರ ಸೆರೆ ಹಿಡಿಯುವುದು ಕಷ್ಟ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಈ ಗ್ರಹ ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ. ಹೀಗಾಗಿ ಇದು ಎಲಿಯನ್ ಪ್ಲಾನೆಟ್ ಎಂದು ವಿಜ್ಞಾನಿಗಳು ಕರೆದಿದ್ದಾರೆ. ಈ ಗ್ರಹ ಬಾಹ್ಯಾಕಾಶದಲ್ಲಿರುವ ಇತರ ಹಲವು ಗ್ರಹಗಳ ರೀತಿಯಲ್ಲಿ ಇರುವ ಮತ್ತೊಂದು ಗ್ರಹವೇ? ಅಥವಾ ಈ ಗ್ರಹದಲ್ಲಿ ವಿಶೇಷತೆಗಳಿದೆಯಾ ಅನ್ನೋದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇದುವರೆಗೂ ಪತ್ತೆಯಾಗದೇ ಇದೀಗ ವಿಜ್ಞಾನಿಗಳ ಕಣ್ಣಿಗೆ ಬಿದ್ದ ಕಾರಣಕ್ಕೆ ಇದನ್ನು ಏಲಿಯನ್ ಪ್ಲಾನೆಟ್ ಎಂದು ಕರೆಯಲಾಗಿದೆ.

 



Source link

Leave a Reply

Your email address will not be published. Required fields are marked *