
ಸೊಸೆ ನಾಪತ್ತೆಯಾಗಿದ್ದಾಳೆ ಎಂದು ಗಂಡನ ಮನೆಯವರು ಹೇಳಿದ 2 ತಿಂಗಳಲ್ಲಿ ಆಕೆಯ ಮೃತದೇಹ 10 ಅಡಿ ಆಳದಲ್ಲಿ ಹೂತಿಟ್ಟ ಘಟನೆಗೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸೊಸೆಯನ್ನು ಹತ್ಯೆ ಮಾಡುವ ಮೊದಲು ಆಕೆಯಯನ್ನು ಸ್ವತಃ ಮಾವನೇ ಹರಿದು ಮುಕ್ಕಿದ. ಈ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು.
ಫರಿದಾಬಾದ್ (ಜೂ.27) ಸೊಸೆ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಹರ್ಯಾಣದ ಫರೀದಾಬಾದ್‌ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಸೊಸೆಯ ಹತ್ಯೆ ಪ್ರಕರಣ ಕೇವಲ ಹತ್ಯೆಗೆ ಸೀಮಿತವಾಗಿಲ್ಲ. ಸೊಸೆ ನಾಪತ್ತೆಯಾಗಿದ್ದಾಳೆ, ಯಾರೊಂದಿಗೋ ಪರಾರಿಯಾಗಿದ್ದಾಳೆ ಎಂದು ಗಂಡನ ಮನೆಯರು ಪ್ರತಿ ದಿನ ಕತೆ ಕಟ್ಟಿದ್ದರು. ಆದರೆ ಅಸಲಿ ಕತೆ ಬೇರೆಯಾಗಿತ್ತು. ಹೀಗೆ ಹೇಳಿದ 2 ತಿಂಗಳಲ್ಲಿ ಸೊಸೆಯ ಮೃತದೇಹ ಗಂಡನ ಮನೆಯ ಪಕ್ಕದ 10 ಫೀಟ್ ಆಳದಲ್ಲಿ ಹೂತಿಟ್ಟಿದ್ದು ಬಯಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ಸೊಸೆಯನ್ನು ಹತ್ಯೆ ಮಾಡಿ ಹೂಳುವ ಮೊದಲು ಆಕೆಯ ಮೇಲೆ ಸ್ವತಃ ಮಾವನೇ ಎರಗಿದ್ದ. ಈ ಎಲ್ಲಾ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು ಅನ್ನೋ ಮಾಹಿತಿಯೂ ತನಿಖೆಯಲ್ಲಿ ಬಯಲಾಗಿದೆ.
ಸತ್ಯ ಒಪ್ಪಿಕೊಂಡ ಮಾವ
ಈ ಪ್ರಕರಣ ಸಂಬಂಧ ಮಾವ, ಅತ್ತೆ ಅರೆಸ್ಟ್ ಆಗಿದ್ದರೆ, ಪತಿ ಅರುಣ್ ಸಿಂಗ್ ನಾಪತ್ತೆಯಾಗಿದ್ದಾನೆ. ವಿಚಾರಣೆಯಲ್ಲಿ ಮಾವ ತನ್ನ ಕೃತ್ಯವನ್ನು ಬಯಲು ಮಾಡಿದ್ದಾನೆ. ಮೊದಲೇ ನಿರ್ಧರಿಸಿದಂತೆ ಹತ್ಯೆ ಮಾಡಲಾಗಿತ್ತು ಎಂದಿದ್ದಾನೆ. ಇಷ್ಟೇ ಅಲ್ಲ ಹತ್ಯೆಗೂ ಮೊದಲು ಸೊಸೆಯ ಮೇಲರಗಿ ಕಾಮ ತೃಷೆ ತೀರಿಸಿಕೊಳ್ಳಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಈ ಎಲ್ಲಾ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು ಅನ್ನೋದು ಮತ್ತೊಂದು ದುರಂತ. ಬಳಿಕ ಸೊಸೆ ಹತ್ಯೆ ಮಾಡಿ ಮನೆಯ ಪಕ್ಕದಲ್ಲೇ 10 ಅಡಿ ಗುಂಡಿ ತೋಡಿ ಮೃತೇದಹವನ್ನು ಹೂತಿಡಲಾಗಿತ್ತು.
ಏಪ್ರಿಲ್ 15ಕ್ಕೆ ಪ್ಲಾನ್ ಮಾಡಿದ್ದ ಅಪ್ಪ ಮಗ
ಎರಡು ವರ್ಷಗಳ ಹಿಂದೆ ಅರುಣ್ ಸಿಂಗ್ ಮದುವೆಯಾಗಿ ಫರೀದಾಬಾದ್‌ಗೆ ಬಂದಿದ್ದ ಈ ಈಕೆ ಇದೀಗ ದುರಂತ ಅಂತ್ಯಕಂಡಿದ್ದಾಳೆ. ಪತ್ನಿಯನ್ನು ಹತ್ಯೆ ಮಾಡಲು ಗಂಡ ಹಾಗೂ ತಂದೆ ಇಬ್ಬರು ಪ್ಲಾನ್ ಮಾಡಿದ್ದಾರೆ. ಏಪ್ರಿಲ್ 15ಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿತ್ತು. ಆದರೆ ಅಂದು ಸಾಧ್ಯವಾಗಲಿಲ್ಲ. ಏಪ್ರಿಲ್ 21ಕ್ಕೆ ಪತ್ನಿಗೆ ನಿದ್ದೆ ಮಾತ್ರೆಯನ್ನು ಆಹಾರದಲ್ಲಿ ಮಿಶ್ರಣ ಮಾಡಿ ನೀಡಲಾಗಿತ್ತು. ಆಕೆ ನಿದ್ದೆಗೆ ಜಾರುತ್ತಿದ್ದಂತೆ ಬೇರೆ ರೂಂನಲ್ಲಿ ಮಲಗಿಸಲಾಗಿತ್ತು.
ದುಪ್ಪಟ್ಟಾದಲ್ಲಿ ಹತ್ಯೆಗೆ ಹೋದ ಮಾಮನಿಂದ ಪೈಶಾಚಿಕ ಕೃತ್ಯ
ಪತ್ನಿಯನ್ನು ಮುಗಿಸಲು ಗಂಡನೇ ಪ್ಲಾನ್ ರೆಡಿ ಮಾಡಿದ್ದ. ಗಂಡನ ತಂದೆ ಮುಂಚೂಣಿಯಲ್ಲಿ ಪ್ಲಾನ್ ಕಾರ್ಯಪ್ರವೃತ್ತಗೊಳಿಸಲು ನಿಂತಿದ್ದ. ಬೇರೆ ಕೋಣೆಯಲ್ಲಿದ್ದ ಸೊಸೆಯನ್ನು ದುಪ್ಪಟ್ಟ ಬಳಸಿ ಹತ್ಯೆ ಮಾಡುವುದು ಪ್ಲಾನ್. ಹೀಗೆ ದುಪ್ಪಟ್ಟ ಹಿಡಿದು ಕೋಣೆಗೆ ತೆರಳಿದ ಮಾಮ ಮಲಗಿದ್ದ ಸೊಸೆಯನ್ನು ನೋಡಿ ಮೊದಲು ತನ್ನ ಬಯಕೆ ತೀರಿಸಿಕೊಂಡಿದ್ದಾನೆ. ನಿದ್ದೆ ಮಂಪರಿನಲ್ಲಿ ಈಕೆಗೆ ಪ್ರತಿರೋಧಿಸಲು ಸಾಧ್ಯವಾಗಿಲ್ಲ. ಬಯಕೆ ತೀರಿಸಿಕೊಂಡ ಬಳಿಕ ದುಪ್ಪಟ ಬಳಸಿ ಹತ್ಯೆ ಮಾಡಿದ್ದಾನೆ.
ಮನೆ ಪಕ್ಕದಲ್ಲೇ ರಾತ್ರಿ 10 ಅಡಿ ಗುಂಡಿ ತೋಡಿ ಮೃತದೇಹ ಹೂತಿಡಲಾಗಿತ್ತು. ಬಳಿಕ ಆಕೆಯ ಕಟುಂಬಸ್ಥರಿಗೆ ನಾಪತ್ತೆ ಎಂದು ಕತೆ ಕಟ್ಟಿದ್ದರು. ಮಹಿಳೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ವೇಳೆ ಪತಿ ಹಾಗೂ ಮಾವ ಜೊತೆಗೆ ಅತ್ತೆಯ ಕೃತ್ಯ ಬಯಲಾಗಿತ್ತು.