Headlines

ಸೇನಾ ಸಮವಸ್ತ್ರದಲ್ಲೇ ಕೆಬಿಸಿಗೆ ಬಂದ ಕರ್ನಲ್‌ ಖುರೇಷಿ,ವ್ಯೋಮಿಕಾ, ಪ್ರೇರಣಾ! | Kbc Military Officers In Uniform Controversy San

ಸೇನಾ ಸಮವಸ್ತ್ರದಲ್ಲೇ ಕೆಬಿಸಿಗೆ ಬಂದ ಕರ್ನಲ್‌ ಖುರೇಷಿ,ವ್ಯೋಮಿಕಾ, ಪ್ರೇರಣಾ! | Kbc Military Officers In Uniform Controversy San



ಸೇನಾ ಸಮವಸ್ತ್ರದಲ್ಲೇ ಕೆಬಿಸಿಗೆ ಬಂದ ಕರ್ನಲ್‌ ಖುರೇಷಿ,ವ್ಯೋಮಿಕಾ, ಪ್ರೇರಣಾ! | Kbc Military Officers In Uniform Controversy San

ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಸೇನಾಧಿಕಾರಿಗಳ ಸಮವಸ್ತ್ರ ಧಾರಣೆ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಶಿವಸೇನೆ ಯುಬಿಟಿ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನವದೆಹಲಿ (ಆ.14): ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿಯ ಸ್ವಾತಂತ್ರ್ಯ ದಿನಾಚರಣೆ ವಿಶೇಷದಲ್ಲಿ ಆಪರೇಷನ್ ಸಿಂದೂರದ ಪತ್ರಿಕಾಗೋಷ್ಠಿ ನೇತೃತ್ವ ವಹಿಸಿದ್ದ ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ ಮತ್ತು ನೌಕಾ ಕಮಾಂಡರ್ ಪ್ರೇರಣಾ ಸೇನಾ ಸಮವಸ್ತ್ರ ದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದಕ್ಕೆ ವಿಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮನರಂಜನಾ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆ ಅಧಿಕಾರಿಗಳು ಸಮವಸ್ತ್ರ ಧರಿಸಿ ಭಾಗಿಯಾಗಿದ್ದಾರೆ. ಬಾಲಿವುಡ್ ನಟನಿಗೆ ಮಿಲಿಟರಿ ಕಾರ್ಯಾಚರಣೆ ಬಗ್ಗೆ ವಿವರಿಸುತ್ತಿದ್ದಾರೆ. ಯಾವುದೇ ಗಂಭೀರ ರಾಷ್ಟ್ರದಲ್ಲಿ ಈ ಬಗ್ಗೆ ಯೋಚಿಸಲಾಗದು. ಇದು ನರೇಂದ್ರ ಮೋದಿ ನೇತೃತ್ವದ ನವಭಾರತದ ದೃಶ್ಯ. ಸೇನೆಗೆ ಅವಮಾನ ಮಾಡಿದೆ’ ಎಂದಿದೆ.

ಶಿವಸೇನೆ ಯುಬಿಟಿ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವಿಟ್ ಮಾಡಿದ್ದು ‘ಆಪರೇಷನ್ ಸಿಂದೂರದ ಭಾಗವಾಗಿದ್ದಸೇನಾಧಿಕಾರಿಗಳು ಸಮವಸ್ತ್ರ ಧರಿಸಿಯೇ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ಮೂಲಕ ಖಾಸಗಿ ಚಾನೆಲ್ ಹಣ ಮಾಡಿಕೊಳ್ಳಲು ಯತ್ನಿಸುತ್ತಿದೆ’ ಎಂದಿದ್ದಾರೆ.

ನೆಟ್ಟಿಗರ ಕಿಡಿ: ಇನ್ನು ನೆಟ್ಟಿಗರು ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ ಈ ಮೂಲಕ ಒಂದು ರಾಷ್ಟ್ರೀಯವಾದಿ ಪಕ್ಷ ಕೆಲ ಮತಗಳನ್ನು ಪಡೆಯಲು ಬಯಸುತ್ತಿದೆ’ ಎಂದಿದ್ದಾರೆ. ಇನ್ನು ಕೆಲವರು, ‘ಮೋದಿಯವರು ಸೇನೆಯನ್ನು ತಮ್ಮ ಸಾರ್ವಜನಿಕ ಸಂಪರ್ಕ (ಪಿಆರ್) ರೀತಿ ರಾಜ ಕೀಯ ಸಾಧನವಾಗಿ ಬಳಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

 



Source link

Leave a Reply

Your email address will not be published. Required fields are marked *