ನೆಟ್‌ಫ್ಲಿಕ್ಸ್ ಮೂಲ ಚಂದಾದಾರಿಕೆಯ ಜೊತೆಗೆ, ವಿ ಪೋಸ್ಟ್‌ಪೇಯ್ಡ್ ಬಳಕೆದಾರರು ತಮ್ಮ ಮೊಬೈಲ್ ಅಥವಾ ಟೆಲಿವಿಷನ್‌ನಲ್ಲಿ ಜಾಗತಿಕ ಗುಣಮಟ್ಟದ ಮನರಂಜನೆ ಆನಂದಿಸಲು ಸಾಧ್ಯವಾಗಲಿದೆ. ಈ ಪ್ಲ್ಯಾನ್‌ನಲ್ಲಿ ಇರುವ ಗ್ರಾಹಕರು ನೆಟ್‌ಫ್ಲಿಕ್ಸ್‌ನಿಂದ ವಿವಿಧ ಪ್ರಕಾರಗಳು ಮತ್ತು ವಿಭಾಗಗಳಲ್ಲಿ ವ್ಯಾಪಿಸಿರುವ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇದರಲ್ಲಿ ವಿಶ್ವದಾದ್ಯಂತ ಜನಪ್ರಿಯವಾಗಿರುವ ಜಾಗತಿಕ ಕಾರ್ಯಕ್ರಮಗಳಾದ ಸ್ಕ್ವಿಡ್ ಗೇಮ್, ವೆಡನ್ಸ್‌ಡೆ, ಸ್ಟ್ರೇಂಜರ್ ಥಿಂಗ್ಸ್, ಲಾಪತಾ ಲೇಡೀಸ್, ಪುಷ್ಪಾ 2, ಜವಾನ್, ಛಾವಾ, ಸಿಕಂದರ್ ಸೇರಿದಂತೆ ಇನ್ನೂ ಅನೇಕ ಚಿತ್ರ ಶೀರ್ಷಿಕೆಗಳು, ಸಿನಿಮಾ, ಪ್ರಾದೇಶಿಕ ಚಲನಚಿತ್ರಗಳು ಮತ್ತು ಕಪಿಲ್ ಶರ್ಮಾ ಷೋ, ಟೆಸ್ಟ್, ಜ್ಯುವೆಲ್ ಥೀಫ್, ದಿ ರಾಯಲ್ಸ್, ಖಾಕಿ: ದಿ ಬೆಂಗಾಲ್ ಚಾಪ್ಟರ್, ಬ್ಲ್ಯಾಕ್ ವಾರಂಟ್, ಹೀರಾಮಂಡಿ, ರಾಣಾ ನಾಯ್ಡು ಮುಂತಾದ ಸರಣಿಗಳೂ ಇದರಲ್ಲಿ ಸೇರಿವೆ.