5 ಸಿಕ್ಸರ್, 3 ಬೌಂಡರಿ.. ಇಂಗ್ಲೆಂಡ್‌ ವಿರುದ್ಧ ರನ್​ಗಳ ಮಳೆಗರೆದ ವೈಭವ್ ಸೂರ್ಯವಂಶಿ

5 ಸಿಕ್ಸರ್, 3 ಬೌಂಡರಿ.. ಇಂಗ್ಲೆಂಡ್‌ ವಿರುದ್ಧ ರನ್​ಗಳ ಮಳೆಗರೆದ ವೈಭವ್ ಸೂರ್ಯವಂಶಿ


ಐಪಿಎಲ್​ನಲ್ಲಿ (IPL 2025) ಅಬ್ಬರದ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಇದೀಗ ಇಂಗ್ಲೆಂಡ್‌ ನೆಲದಲ್ಲೂ ಬೌಂಡರಿ ಸಿಕ್ಸರ್​ಗಳ ಮಳೆಗರೆದಿದ್ದಾರೆ. ವಾಸ್ತವವಾಗಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ 19 ವರ್ಷದೊಳಗಿನವರ ಯೂತ್ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ, ಭಾರತದ ಯುವ ಓಪನರ್ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆಯುವ ಮೂಲಕ ಆತಿಥೇಯ ತಂಡದ ಬೌಲರ್‌ಗಳ ಬೆವರಿಳಿಸಿದರು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಕೇವಲ 19 ಎಸೆತಗಳ 48 ರನ್‌ ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿದರು.

19 ಎಸೆತಗಳಲ್ಲಿ 48 ರನ್

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ಇಂಗ್ಲೆಂಡ್‌ ತಂಡ 175 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಪವರ್ ಪ್ಲೇ ಮುಗಿಯುವುದಕ್ಕೂ ಮುನ್ನವೇ ತಂಡದ ಗೆಲುವನ್ನು ಖಚಿತಪಡಿಸಿದರು. ಅದರಲ್ಲೂ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ವೈಭವ್ ಸಿಕ್ಸರ್​ಗಳ ಸುನಾಮಿ ಎಬ್ಬಿಸಿದರು. ಆದಾಗ್ಯೂ ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಕೇವಲ 19 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ, ಅವರು 5 ಸಿಕ್ಸರ್‌ ಮತ್ತು 3 ಬೌಂಡರಿಗಳನ್ನು ಬಾರಿಸಿದರು. ಅಂದರೆ ಅವರು ಸಿಕ್ಸರ್‌ಗಳು ಮತ್ತು ಬೌಂಡರಿಗಳಿಂದಲೇ 42 ರನ್ ಗಳಿಸಿದರು.

ಒಂದೇ ಓವರ್​ನಲ್ಲಿ 3 ಸಿಕ್ಸರ್

ಅದರಲ್ಲೂ ವೈಭವ್ ಬಾರಿಸಿದ 5 ಸಿಕ್ಸರ್‌ಗಳು ಕೂಡ ಮೈದಾನದಿಂದ ಹೊರಬಿದ್ದಿದ್ದು, ಅವರ ಪವರ್​ಫುಲ್​ ಆಟಕ್ಕೆ ಸಾಕ್ಷಿಯಾಗಿದ್ದವು. ವೈಭವ್ ಬಾರಿಸಿದ ಮೊದಲ ಸಿಕ್ಸರ್ ಕ್ರೀಡಾಂಗಣದ ಹೊರಗಿರುವ ಮನೆಯೊಳಗೆ ಹೋಯಿತು. ಹೀಗಾಗಿ ಅಂಪೈರ್, ಬೇರೆ ಚೆಂಡನ್ನು ತರಿಸಬೇಕಾಯಿತು. ಇದಾದ ನಂತರ ವೈಭವ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ ರನ್ ಗಳಿಸುವುದನ್ನು ಮುಂದುವರೆಸಿದರು. ವಿಶೇಷವಾಗಿ ಆರನೇ ಓವರ್ ಬೌಲಿಂಗ್ ಮಾಡಲು ಬಂದ ವೇಗಿ ಜ್ಯಾಕ್ ಹೋಮ್ ಓವರ್‌ನಲ್ಲಿ ವೈಭವ್ 3 ಲಾಂಗ್ ಸಿಕ್ಸರ್‌ಗಳನ್ನು ಬಾರಿಸಿದರು, ಅದರಲ್ಲಿ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸತತ 2 ಸಿಕ್ಸರ್‌ಗಳು ಸಿಡಿದವು.

90 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ

ಬೌಂಡರಿಗಳಿಂದಲೇ 42 ರನ್

ಆದರೆ ಅರ್ಧಶತಕದ ಹೊಸ್ತಿಲಿನಲ್ಲಿದ್ದ ವೈಭವ್, ಎಂಟನೇ ಓವರ್‌ನಲ್ಲಿ ಸ್ಪಿನ್ನರ್ ವಿರುದ್ಧ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುವಾಗ ಕ್ಯಾಚಿತ್ತು ಔಟಾದರು. ಆದರೆ ಆ ಹೊತ್ತಿಗೆ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದ ವೈಭವ್ ಕೇವಲ 19 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸುವ ಮೂಲಕ 48 ರನ್ ಗಳಿಸಿದರು. ಅಂದರೆ, ಅವರು ಕೇವಲ ಬೌಂಡರಿಗಳಿಂದಲೇ 42 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:43 pm, Fri, 27 June 25



Source link

Leave a Reply

Your email address will not be published. Required fields are marked *