Dharmasthala Case | ಧರ್ಮಸ್ಥಳ ಪ್ರಕರಣ: ಮಂಡ್ಯದಲ್ಲೊಬ್ಬ ಮುಸುಕುಧಾರಿ ಭೀಮ ಪ್ರತ್ಯಕ್ಷ! | Dharmasthala Case A Mask Man Bhima Spotted In Mandya Rav

Dharmasthala Case | ಧರ್ಮಸ್ಥಳ ಪ್ರಕರಣ: ಮಂಡ್ಯದಲ್ಲೊಬ್ಬ ಮುಸುಕುಧಾರಿ ಭೀಮ ಪ್ರತ್ಯಕ್ಷ! | Dharmasthala Case A Mask Man Bhima Spotted In Mandya Rav



Dharmasthala Case | ಧರ್ಮಸ್ಥಳ ಪ್ರಕರಣ: ಮಂಡ್ಯದಲ್ಲೊಬ್ಬ ಮುಸುಕುಧಾರಿ ಭೀಮ ಪ್ರತ್ಯಕ್ಷ! | Dharmasthala Case A Mask Man Bhima Spotted In Mandya Rav

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ಉತ್ಖನನವನ್ನು ವಿರೋಧಿಸಿ ಮಂಡ್ಯದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮುಸುಕುಧಾರಿ ವ್ಯಕ್ತಿಯೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕುತೂಹಲ ಮೂಡಿಸಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಎನ್‌ಐಎ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಲಾಗಿದೆ.

ಮಂಡ್ಯ (ಆ.14): ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಎಸ್‌ಐಟಿ ಉತ್ಖನನ ಪ್ರಕರಣವನ್ನು ಖಂಡಿಸಿ ಮಂಡ್ಯದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮುಸುಕುಧಾರಿ ಪ್ರತ್ಯಕ್ಷನಾಗಿದ್ದಾನೆ. ಅಂದಹಾಗೆ ಈ ಭೀಮ ಹೆಣ ಹೂತವನಲ್ಲ, ಬದಲಾಗಿ ಧರ್ಮಸ್ಥಳ ಪರ ನಿಂತವನು.

ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಎಸ್‌ಐಟಿ ಉತ್ಖನನ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರೊಂದಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದು ಗಮನ ಸೆಳೆದಿದೆ.

ಹಿಂದೂ ಮುಖಂಡ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಧರ್ಮಸ್ಥಳದ ನಂಬಿಕೆ ಮತ್ತು ಭಕ್ತಿಯನ್ನು ಕಾಪಾಡುವಂತೆ ಆಗ್ರಹಿಸಲಾಯಿತು. ಧರ್ಮಸ್ಥಳ, ಹಿಂದೂಗಳ ಆಸ್ಥೆಯ ಕೇಂದ್ರವಾಗಿದ್ದು, ಇದರ ಪಾವಿತ್ರ್ಯತೆಯನ್ನು ಕೆಲವರು ಉತ್ಖನನದ ಹೆಸರಿನಲ್ಲಿ ಹಾಳುಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದನ್ನೂ ಓದಿ: ಧರ್ಮಸ್ಥಳ ಕೇಸ್‌ ಅನಾಮಿಕ ಹಿಂದೆಯಾರ ಕೈವಾಡವಿದೆ ಅನ್ನೋದು ತನಿಖೆ ನಡೆಸಬೇಕಿದೆ: ದಿನೇಶ್‌ ಗುಂಡೂರಾವ್

ಈ ಎಲ್ಲ ಷಡ್ಯಂತ್ರದ ಹಿಂದೆ ಕೇರಳದ ಕಮ್ಯುನಿಸ್ಟ್ ಪಕ್ಷದ ಕೈವಾಡ ಎಂದು ದೂರಿದ ಹಿಂದೂ ಸಂಘಟನೆಗಳು. ಪ್ರಸ್ತುತ ಸರ್ಕಾರ ನಡೆಸುತ್ತಿರುವ ಎಸ್‌ಐಟಿ ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸಿ ಎನ್‌ಐಎ ತನಿಖೆಗೆ ಆದೇಶಿಸಬೇಕು. ಧರ್ಮಸ್ಥಳದ ದೇಗುಲಕ್ಕೆ ನ್ಯಾಯ ಒದಗಿಸಬೇಕು. ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಗೃಹ ಸಚಿವರನ್ನ ಭೇಟಿಯಾದ ದ.ಕ. ಕಾಂಗ್ರೆಸ್ ನಾಯಕರ ನಿಯೋಗ, ಚರ್ಚಿಸಿದ್ದೇನು?

ಮಂಡ್ಯ ಡಿಸಿ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧರ್ಮಸ್ಥಳ ಪ್ರಕರಣ ಸಂಬಂಧ ಪತ್ರ ಸಲ್ಲಿಸಿದ ಕಾರ್ಯಕರ್ತರು. ರಕ್ತದ ಮೂಲಕ ಪತ್ರ ಬರೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಿನೂತನ ಪ್ರತಿಭಟನೆಯಲ್ಲಿ ಮುಸುಕುದಾರಿಯ ಉಪಸ್ಥಿತಿ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಈ ಘಟನೆಯು ಧರ್ಮಸ್ಥಳದ ಧಾರ್ಮಿಕ ಮಹತ್ವವನ್ನು ಕಾಪಾಡುವ ಸಂದರ್ಭದಲ್ಲಿ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಭದ್ರತೆಯನ್ನು ಒದಗಿಸಿದ್ದು, ತನಿಖೆಯ ಮುಂದಿನ ಹಂತಕ್ಕಾಗಿ ಕಾಯಲಾಗುತ್ತಿದೆ.



Source link

Leave a Reply

Your email address will not be published. Required fields are marked *