
ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಸೆಪ್ಟೆಂಬರ್ 30 ರಂದು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತಮ್ಮ ಮೊದಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಪ್ರಯತ್ನವನ್ನು ಪ್ರಾರಂಭಿಸಲಿದೆ. ಮಹಿಳಾ ವಿಶ್ವಕಪ್ 2025 ಅನ್ನು ಭಾರತ ಆಯೋಜಿಸಲಿದ್ದು, ಎಂಟು ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸ್ಪರ್ಧಿಸಲಿವೆ.
ಭಾರತ ನಾಲ್ಕನೇ ಬಾರಿಗೆ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಶ್ರೀಲಂಕಾದ ಕೊಲಂಬೊದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಸಹ-ಆಯೋಜಿಸುತ್ತಿದೆ. ಹಿಂದೆ, ಭಾರತ 1978, 1997 ಮತ್ತು 2013 ರ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಮಹಿಳಾ ಏಕದಿನ ವಿಶ್ವಕಪ್ನ ನಾಲ್ಕು ಆವೃತ್ತಿಗಳನ್ನು ಆಯೋಜಿಸಿದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಭಾರತ ಮಹಿಳಾ ವಿಶ್ವಕಪ್ ಆಯೋಜಿಸಲು ಸಿದ್ಧವಾಗುತ್ತಿರುವಾಗ, ಹಿಂದಿನ ಮೂರು ಆವೃತ್ತಿಗಳಲ್ಲಿ ಮಹಿಳಾ ತಂಡ ತವರಿನಲ್ಲಿ ಹೇಗೆ ಪ್ರದರ್ಶನ ನೀಡಿತು ಎಂಬುದನ್ನು ನೋಡೋಣ.