ಆಟೋ ಮೇಲಿನ ಸಾಲು ಚಿತ್ರದ ಕತೆಗೆ ಪ್ರೇರಣೆಯಾಯಿತು: ರಾಜವರ್ಧನ್‌

ಆಟೋ ಮೇಲಿನ ಸಾಲು ಚಿತ್ರದ ಕತೆಗೆ ಪ್ರೇರಣೆಯಾಯಿತು: ರಾಜವರ್ಧನ್‌

ಆಟೋ ಮೇಲಿನ ಸಾಲು ಚಿತ್ರದ ಕತೆಗೆ ಪ್ರೇರಣೆಯಾಯಿತು: ರಾಜವರ್ಧನ್‌

ನಾನು ಆಟೋ ಮೇಲೆ ನೋಡಿದ ಒಂದು ಸಾಲು ಈ ಚಿತ್ರಕ್ಕೆ ಪ್ರೇರಣೆ ಆಗಿದೆ. ನಿರ್ಮಾಣ ಹಾಗೂ ಕ್ರಿಯೇಟಿವ್‌ ಹೆಡ್‌ ಆಗಿ ನನಗೆ ಇದು ಹೊಸ ಅನುಭವ ಎಂದರು ರಾಜವರ್ಧನ್‌.

ಸಚಿನ್ ಚಲುವರಾಯ ಸ್ವಾಮಿ, ಸಂಗೀತ ಭಟ್‌ ಜೋಡಿಯಾಗಿ ನಟಿಸಿರುವ ‘ಕಮಲ್‌ ಶ್ರೀದೇವಿ’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಮರ್ಡರ್ ಮಿಸ್ಟ್ರಿ ಕತೆ ಇದಾಗಿದ್ದು, ವಿಎ ಸುನೀಲ್‌ ನಿರ್ದೇಶನ ಮಾಡಿದ್ದಾರೆ.

ರಾಜವರ್ಧನ್‌ ಸಹ ನಿರ್ಮಾಣದ ಜತೆಗೆ ಕ್ರಿಯೇಟಿವ್‌ ಹೆಡ್‌ ಆಗಿದ್ದಾರೆ. ಸೆ.19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಸಚಿನ್ ಚಲುವರಾಯ ಸ್ವಾಮಿ, ‘ಹಾಡಿನ ಹಿನ್ನೆಲೆಯಲ್ಲಿ ಟೀಸರ್‌ ಮಾಡಿದ್ದೇವೆ.

ಹೊಸ ರೀತಿಯ ಪ್ರಯತ್ನದಿಂದ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರ ಒಳಗೊಂಡಿರುವ ಕತೆ ಪ್ರಸ್ತುತ ಘಟನೆಗಳನ್ನು ನೆನಪಿಸುತ್ತದೆ. ತುಂಬಾ ರಿಯಲಿಸ್ಟಿಕ್‌ ಆಗಿ ಮೂಡಿ ಬಂದಿದೆ. ನಾನು ಈ ಚಿತ್ರದಲ್ಲಿ ಫಿಲಂ ಡೈರೆಕ್ಟರ್ ಪಾತ್ರ ಮಾಡಿದ್ದೇನೆ’ ಎಂದರು.

ರಾಜವರ್ಧನ್‌, ‘ನಾನು ಆಟೋ ಮೇಲೆ ನೋಡಿದ ಒಂದು ಸಾಲು ಈ ಚಿತ್ರಕ್ಕೆ ಪ್ರೇರಣೆ ಆಗಿದೆ. ನಿರ್ಮಾಣ ಹಾಗೂ ಕ್ರಿಯೇಟಿವ್‌ ಹೆಡ್‌ ಆಗಿ ನನಗೆ ಇದು ಹೊಸ ಅನುಭವ’ ಎಂದರು. ನಿರ್ದೇಶಕ ಸುನೀಲ್‌, ದುನಿಯಾ ಕಿಶೋರ್‌, ನಾಯಕಿ ಸಂಗೀತಾ ಭಟ್‌, ಹಿರಿಯ ನಟ ಎಂಎಸ್‌ ಉಮೇಶ್‌ ಹಾಜರಿದ್ದರು.

ಟೀಸರ್ ನೋಡಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು ನಟ ಸಚಿನ್ ಚೆಲುವರಾಯಸ್ವಾಮಿ ಮತ್ತು ಪ್ರತಿಭಾವಂತ ನಟಿ ಸಂಗೀತಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಮತ್ತು ಸಚಿನ್ ಅವರ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Source link

Leave a Reply

Your email address will not be published. Required fields are marked *