ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. | Solar Panels Installed Between Railway Tracks For Trial

ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.

ನವದೆಹಲಿ: ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.

ವಾರಾಣಸಿಯ ಬನಾರಸ್‌ ಲೋಕೋಮೋಟಿವ್ ವರ್ಕ್ಸ್‌ ಉತ್ಪಾದನಾ ಘಟಕದಲ್ಲಿ 70 ಮೀ. ಉದ್ದದ ಟ್ರ್ಯಾಕ್‌ನಲ್ಲಿ ಈ ಸೌರಫಲಕಗಳನ್ನು ಅಳವಡಿಸಲಾಗಿದೆ, ಈ ಸೌರಫಲಕವು ನಿತ್ಯ 67 ಯೂನಿಟ್‌ ವಿದ್ಯುತ್‌ ಉತ್ಪಾದಿಸುವ ನಿರೀಕ್ಷೆಯಿದೆ.

ಗರಿಷ್ಠ 15 ಕಿಲೋವ್ಯಾಟ್‌ ಉತ್ಪಾದಿಸುವ 28 ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವನ್ನು ಭಾರತೀಯ ರೈಲ್ವೆಯ 1.2 ಲಕ್ಷ ಕಿಮೀ ಟ್ರ್ಯಾಕ್ ನೆಟ್‌ವರ್ಕ್‌ಗಳಿಗೆ ಅಳವಡಿಸುವ ಚಿಂತನೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿದರೆ ಶೇ.20ರಷ್ಟು ರಿಯಾಯ್ತಿ

ನವದೆಹಲಿ: ಹಬ್ಬದ ವೇಳೆ ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ, ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿದರೆ ಶೇ.20ರಷ್ಟು ರಿಯಾಯ್ತಿ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

ಆ.14ರಿಂದ ಈ ಯೋಜನೆ ಆರಂಭವಾಗಲಿದ್ದು, ಮೊದಲ ಯಾನದ ಪ್ರಯಾಣ ದಿನಾಂಕವು ಅ.13ರಿಂದ ಅ.26ರವರೆಗೆ ಇರಬೇಕಿದೆ. ರಿಟರ್ನ್‌ ಬರುವ ದಿನಾಂಕವು ನ.17ರಿಂದ ಡಿ.1ರ ಒಳಗೆ ಇರಬೇಕಿದೆ. ಈ ಅವಧಿಯಲ್ಲಿ ಟಿಕೆಟ್ ಬುಕ್‌ ಮಾಡಿಕೊಂಡವರಿಗೆ ರಿಯಾಯ್ತಿ ಲಭಿಸಲಿದೆ. ಇವುಗಳು ವಂದೇ ಭಾರತ್‌, ಶತಾಬ್ಧಿ, ರಾಜಧಾನಿ, ದುರಂತೋ ರೀತಿ ಪ್ರೀಮಿಯಂ ರೈಲುಗಳಿಗೆ ಅನ್ವಯಿಸುವುದಿಲ್ಲ.

ಎಲ್ಲಾ ಸಾಮಾನ್ಯ ಎಕ್ಸ್‌ಪ್ರೆಸ್‌, ಸುಪರ್‌ಫಾಸ್ಟ್‌ಗಳಿಗೆ ಅನ್ವಯಿಸಲಿದೆ. ಇದರಲ್ಲಿ ಯಾವುದೇ ರೀಫಂಡ್‌ ದೊರೆಯುವುದಿಲ್ಲ ಎಂದು ರೈಲ್ವೆ ತಿಳಿಸಿದೆ.

Source link

Leave a Reply

Your email address will not be published. Required fields are marked *