Headlines

Karnataka Dam Level 18-08-2025 ಭಾರೀ ಮಳೆಯಿಂದಾಗಿ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಏರಿಕೆ | Heavy Rain Today S Level Of Major Reservoirs In Karnataka 18 August 2025 Mrq

Karnataka Dam Level 18-08-2025 ಭಾರೀ ಮಳೆಯಿಂದಾಗಿ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಏರಿಕೆ | Heavy Rain Today S Level Of Major Reservoirs In Karnataka 18 August 2025 Mrq



Karnataka Dam Level 18-08-2025 ಭಾರೀ ಮಳೆಯಿಂದಾಗಿ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಏರಿಕೆ | Heavy Rain Today S Level Of Major Reservoirs In Karnataka 18 August 2025 Mrq

ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಭಾರೀ ಪ್ರಮಾಣದಲ್ಲಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಕೆಆರ್‌ಎಸ್, ಆಲಮಟ್ಟಿ, ನಾರಾಯಣಪುರ ಸೇರಿದಂತೆ ಹಲವು ಜಲಾಶಯಗಳಿಂದ ಲಕ್ಷಾಂತರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದ್ದು, ಪ್ರವಾಹದ ಆತಂಕ ಎದುರಾಗಿದೆ.

ಬೆಂಗಳೂರು: ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು ಮತ್ತು -ಮಹಾರಾಷ್ಟ್ರದ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಭರ್ಜರಿಮಳೆಸುರಿಯುತ್ತಿರುವಪರಿಣಾಮ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕೆಯಾಗಿ ಡ್ಯಾಂಗಳಿಂದ ನದಿಗಳಿಗೆ ನೀರನ್ನು ಹರಿಸಲಾಗುತ್ತಿದೆ. ಮಂಡ್ಯದ ಕೆಆರ್‌ಎಸ್‌ನಿಂದ 50 ಸಾವಿರ ಕ್ಯುಸೆಕ್, ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟುಗಳಿಂದ 1.4 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಭದ್ರಾ ಜಲಾಶಯ ಭರ್ತಿಗೆ ಇನ್ನೊಂದಡಿ ಮಾತ್ರ ಬಾಕಿ ಉಳಿದಿದೆ. 19828 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯಕ್ಕೆ 29776 ಕ್ಯುಸೆಕ್ ನೀರು ಹರಿದು ಬಂದಿದೆ. 1819 ಅಡಿ ಗರಿಷ್ಟ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯ ಸದ್ಯ 1813.50 ಅಡಿಗೆ ತಲುಪಿದೆ. ತುಂಗ ಭದ್ರಾ ಜಲಾಶಯದಿಂದ ನದಿಗೆ 1.15 ಲಕ್ಷ ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುವ ಸಾಧ್ಯತೆ ಇದೆ. ಈಗಾಗಲೇ ನದಿಗೆ 90,124 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಇಂದಿನ ಜಲಾಶಯಗಳ ಪ್ರಮಾಣ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.  

ಜಲಾಶಯ ಡ್ಯಾಂ ಭರ್ತಿ ಎಷ್ಟಾಗಿದೆ? ಗರಿಷ್ಠ ಮಟ್ಟ   ಇಂದಿನ ಮಟ್ಟ
 ಕಬಿನಿ 92% 2284 ಅಡಿ 2283.87 ಅಡಿ
 ಹೇಮಾವತಿ 99% 2922 ಅಡಿ 2921.98 ಅಡಿ
ತುಂಗಭದ್ರಾ 65% 1633 ಅಡಿ 1627.75 ಅಡಿ
 ಸೂಪಾ 67% 564 ಮೀಟರ್ 552.89 ಮೀಟರ್
ಕೆಆರ್‌ಎಸ್‌ 99% 124.80 ಅಡಿ 124.64 ಅಡಿ
ಘಟಪ್ರಭಾ 96% 2175 ಅಡಿ 2172.12 ಅಡಿ
 ಲಿಂಗನಮಕ್ಕಿ 88% 1819.12 ಅಡಿ 1813.50 ಅಡಿ
ಭದ್ರಾ 98% 186 ಅಡಿ 185.1 ಅಡಿ
ಹಾರಂಗಿ 91% 2859 ಅಡಿ 2858.88 ಅಡಿ
ಆಲಮಟ್ಟಿ 99% 519.60 ಮೀ 519 ಮೀಟರ್
ನಾರಾಯಣಪುರ 99% 492.25 ಅಡಿ 494 ಅಡಿ
ಮಲಪ್ರಭಾ 90% 2079.50 ಅಡಿ 2078.80 ಅಡಿ

                                                                                  



Source link

Leave a Reply

Your email address will not be published. Required fields are marked *