ಬೆಂಗಳೂರು: ಬಂಗಾಳಿ ಮಹಿಳೆಯಿಂದ ಬ್ಲ್ಯಾಕ್ ಮ್ಯಾಜಿಕ್ ಗಾಗಿ ನಾಯಿಗಳ ಸರಣಿ ಹತ್ಯೆ ಶಂಕೆ!

ಬೆಂಗಳೂರು: ಬಂಗಾಳಿ ಮಹಿಳೆಯಿಂದ ಬ್ಲ್ಯಾಕ್ ಮ್ಯಾಜಿಕ್ ಗಾಗಿ ನಾಯಿಗಳ ಸರಣಿ ಹತ್ಯೆ ಶಂಕೆ!




<p>ಬೆಂಗಳೂರು ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪ ಲೇಔಟ್‌ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ತ್ರಿಪಾರ್ಣ ಪಾಯ್ಕ ಎಂಬ ಮಹಿಳೆಯು ನಾಲ್ಕು ದಿನಗಳ ಹಿಂದೆ ತನ್ನದೇ ಪೋಷಣೆಯಲ್ಲಿದ್ದ ನಾಯಿಯನ್ನು ಕತ್ತು ಕೊಯ್ದು ಹತ್ಯೆ ಮಾಡಿ, ಬಟ್ಟೆಯಿಂದ ಸುತ್ತಿಹಾಕಿ ಬಚ್ಚಿಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.</p><p>ಆರೋಪಿತೆಯು ನಾಲ್ಕು ಲ್ಯಾಬ್ರಡರ್ ನಾಯಿಗಳನ್ನು ಸಾಕುತ್ತಿದ್ದರು. ಸುಮಾರು ನಾಲ್ಕು ತಿಂಗಳ ಹಿಂದೆ ಇದೇ ಮಹಿಳೆಯ ಮನೆಯೊಂದರಲ್ಲಿ ಮತ್ತೊಂದು ನಾಯಿ ಕಾಣೆಯಾಗಿದ್ದರೂ, ಇದೀಗ ಮತ್ತೆ ನಾಯಿಯ ಹತ್ಯೆ ನಡೆದಿರುವುದು ಅನುಮಾನಕ್ಕೆ ಎಡೆಮಾಡಿದೆ. ಮೃತ ನಾಯಿಯಿಂದ ಬರುವ ದುರ್ವಾಸನೆಯ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p><p>ಸದ್ಯ ನಾಯಿಯ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ನಾಲ್ಕು ದಿನಗಳ ಹಿಂದೆಯೇ ಹತ್ಯೆ ನಡೆದಿರುವುದನ್ನು ದೃಢಪಡಿಸಿದೆ. ಬ್ಲ್ಯಾಕ್ ಮ್ಯಾಜಿಕ್ (ಕಪ್ಪು ಮಾಂತ್ರಿಕ ವಿಧೆಗಳು)ಕ್ಕಾಗಿ ಹತ್ಯೆ ಮಾಡಲಾಗಿತ್ತೆಂಬ ಶಂಕೆಯೂ ವ್ಯಕ್ತವಾಗಿದೆ. ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>&nbsp;</p>



Source link

Leave a Reply

Your email address will not be published. Required fields are marked *