Tea recipe : Milk ಟೀ ತಯಾರಿಸೋವಾಗ ಶೇ.99 ಮಂದಿ ಮಾಡ್ತಾರೆ ಈ ತಪ್ಪು | People Make These 3 Mistakes While Making Milk Tea Roo

Tea recipe : Milk ಟೀ ತಯಾರಿಸೋವಾಗ ಶೇ.99 ಮಂದಿ ಮಾಡ್ತಾರೆ ಈ ತಪ್ಪು | People Make These 3 Mistakes While Making Milk Tea Roo



Tea recipe : Milk ಟೀ ತಯಾರಿಸೋವಾಗ ಶೇ.99 ಮಂದಿ ಮಾಡ್ತಾರೆ ಈ ತಪ್ಪು | People Make These 3 Mistakes While Making Milk Tea Roo

Healthy tea recipe: ಮೂಡ್ ಫ್ರೆಶ್ ಮಾಡುವ ಟೀ ಆರೋಗ್ಯ ಹಾಳ್ಮಾಡ್ಬಹುದು. ಅದಕ್ಕೆ ನೀವು ಟೀ ತಯಾರಿಸೋ ವಿಧಾನ ಕಾರಣವಾಗಿರ್ಬಹುದು. ನಿಮ್ಮ ಟೀ ಆರೋಗ್ಯ ಹಾಳ್ಮಾಡಬಾರದು ಅಂದ್ರೆ ಈ ತಪ್ಪನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ. 

ಬೆಳಗಾಗ್ತಿದ್ದಂತೆ ಭಾರತದ ಬಹುತೇಕರ ಮನೆಯಲ್ಲಿ ಟೀ (tea) ಪರಿಮಳ ಮೂಗಿಗೆ ಬಡಿಯುತ್ತೆ. ಬೆವರಿಳಿಸೋ ಬೇಸಿಗೆ ಇರಲಿ, ಮಳೆ ಅಥವಾ ಚಳಿಗಾಲ ಇರ್ಲಿ ಟೀ ಬೇಕೇಬೇಕು. ಮೂಡ್ ಫ್ರೆಶ್ ಗೆ, ತಲೆ ನೋವಿಗೆ, ಮೈ ಬೆಚ್ಚಗೆ ಮಾಡೋಕೆ ಅಂತ ನೆಪ ಹೇಳ್ಕೊಂಡೇ ಜನ ಟೀ ಕುಡಿತಾರೆ. ಆರೋಗ್ಯ ಹಾಳು ಮಾಡುವ ಟೀ ಬಿಟ್ಟು ಬಿಡಿ ಅಂದ್ರೆ ಅದನ್ನು ಒಪ್ಪಿಕೊಳ್ಳೋದು ಸುಲಭ ಅಲ್ಲ. ಎಷ್ಟೋ ವರ್ಷಗಳಿಂದ ಟೀ ಮಾಡ್ತಾ ಬಂದಿದ್ದೇನೆ, ನಾನು ತಯಾರಿಸೋ ಟೀಯಲ್ಲಿ ದೋಷ ಇರೋಕೆ ಸಾಧ್ಯವೇ ಇಲ್ಲ. ನಾನು ಮಾಡಿದ ಟೀ ಕುಡಿದ್ರೆ ಆರೋಗ್ಯ ಹಾಳಾಗಲ್ಲ ಅಂತ ನೀವು ವಾದ ಮಾಡ್ಬಹುದು. ಆದ್ರೆ ತಜ್ಞರ ಪ್ರಕಾರ, ಹಾಲಿನ ಟೀ ಮಾಡುವ ಶೇಕಡಾ 99 ಮಂದಿ ತಪ್ಪು ಮಾಡ್ತಾರೆ. ಅದೇನು, ಡಿಟೇಲ್ ಇಲ್ಲಿದೆ.

ಹಾಲಿನ ಟೀ ತಯಾರಿಸುವಾಗ ಈ ತಪ್ಪು ಮಾಡ್ತಾರೆ ಜನ : ಟೀ ಮಾಡೋದು ಬಹಳ ಸಿಂಪಲ್. ಮೊದಲು ಒಂದು ಪಾತ್ರೆಗೆ ಹಾಲನ್ನು ಹಾಕಿ, ಅದಕ್ಕೆ ಟೀ ಪುಡಿ ಹಾಕಿ, ಸಕ್ಕರೆ ಹಾಕಿ ಬಿಸಿ ಮಾಡ್ತೇವೆ. ಟೀ ಪುಡಿ ಮಿಶ್ರಿತ ಹಾಲು ಕುದಿ ಬಂದ್ಮೇಲೆ ಟೀ ಸಿದ್ಧವಾಗುತ್ತೆ. ಪ್ರತಿ ದಿನ ನೀವೂ ಹೀಗೆ ಟೀ ಮಾಡ್ತಾ ಬಂದಿದ್ರೆ ನಿಮ್ಮ ವಿಧಾನ ತಪ್ಪು. ಹಾಲನ್ನು ಮೊದಲು ಪಾತ್ರೆಗೆ ಹಾಕಿ ಕುದಿಸ್ಬಾರದು. ಹಾಲಿನಲ್ಲಿರುವ ಪ್ರೋಟೀನ್ (protein) ಟೀ ಪುಡಿಯಲ್ಲಿರುವ ಉತ್ಕರ್ಷಣ ನಿರೋಧಕಕ್ಕೆ ಅಂಟಿಕೊಳ್ಳುತ್ತೆ. ಇದು ಆಸಿಡಿಟಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತೆ.

ಟೀ ತಯಾರಿಸುವ ಸರಿಯಾದ ವಿಧಾನ ಏನು? : ಟೀ ತಯಾರಿಸಲು ಮೊದಲು ಪಾತ್ರೆಗೆ ನೀರನ್ನು ಹಾಕಿ. ಅದಕ್ಕೆ ಟೀ ಪುಡಿ ಹಾಕಿ ಕುದಿಸಿ., ನಂತರ ಸಕ್ಕರೆ ಹಾಕಿ. ಕೊನೆಯಲ್ಲಿ ಹಾಲನ್ನು ಹಾಕಿ ಸರ್ವ್ ಮಾಡಿ. ಇದು ಟೀ ತಯಾರಿಸೋ ಸರಿಯಾದ ವಿಧಾನ.

ಪದೇ ಪದೇ ಟೀ ಕುದಿಸಬೇಡಿ : ದಿನದಲ್ಲಿ ಮೂರ್ನಾಲ್ಕು ಬಾರಿ ಟೀ ಕುಡಿಯುವವರಿದ್ದಾರೆ. ಆಗಾಗ ಟೀ ತಯಾರಿಸೋದು ಬೋರಿಂಗ್. ಒಂದೇ ಬಾರಿ ಟೀ ತಯಾರಿಸಿ ಅದನ್ನು ಮುಚ್ಚಿಡ್ತಾರೆ. ಟೀ ಕುಡಿಯೋ ಆಸೆ ಆದಾಗೆಲ್ಲ ಅದೇ ಟೀ ಬಿಸಿ ಮಾಡಿ ಸೇವನೆ ಮಾಡ್ತಾರೆ. ಪದೇ ಪದೇ ಟೀ ಬಿಸಿ ಮಾಡೋದು ಸೂಕ್ತವಲ್ಲ. ಇದು ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಿಸುತ್ತೆ. ಹೊಟ್ಟೆ ಸಮಸ್ಯೆಗೆ ಕಾರಣವಾಗುತ್ತೆ.

ಪ್ಲಾಸ್ಟಿಕ್ ಸ್ಟ್ರೈನರ್ ಬಳಕೆ ಬೇಡ : ಟೀ ಫಿಲ್ಟರ್ ಮಾಡಲು ಅನೇಕರು ಪ್ಲಾಸ್ಟಿಕ್ ಸ್ಟ್ರೈನರ್ ಬಳಕೆ ಮಾಡ್ತಾರೆ. ಪ್ಲಾಸ್ಟಿಕ್ ಸ್ಟ್ರೈನರ್ ನಲ್ಲಿ ನೀವು ಬಿಸಿಯಾದ ಟೀ ಫಿಲ್ಟರ್ ಮಾಡಿದಾಗ ಪ್ಲಾಸ್ಟಿಕ್ ಅಂಶ ಟೀಯನ್ನು ಸೇರುತ್ತೆ. ಇದು ಗಂಭೀರ ಕಾಯಿಲೆಗೆ ಕಾರಣವಾಗುತ್ತೆ. ನೀವು ಬಿಸಿ ಟೀ ಫಿಲ್ಟರ್ ಮಾಡಲು ಸ್ಟೀಲ್ ಸ್ಟ್ರೈನರ್ ಬಳಕೆ ಮಾಡ್ಬೇಕು.

ಟೀ ಕುಡಿಯುವುದ್ರಿಂದ ಆಗುವ ನಷ್ಟ : ದಿನದಲ್ಲಿ ಒಂದು ಬಾರಿ ಟೀ ಸೇವನೆಯಿಂದ ಯಾವುದೇ ನಷ್ಟವಿಲ್ಲ. ಆದ್ರೆ ಖಾಲಿ ಹೊಟ್ಟೆಯಲ್ಲಿ, ಪದೇ ಪದೇ ಟೀ ಸೇವನೆ ಮಾಡೋದ್ರಂದ ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಉಂಟಾಗುತ್ತದೆ. ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಉಸಿರಾಟ ದುರ್ಬಲಗೊಳ್ಳುವುದಲ್ಲದೆ ಹಲ್ಲಿನ ಸಮಸ್ಯೆ ಕಾಡುತ್ತದೆ. ನಿದ್ರೆ ಮತ್ತು ಮಾನಸಿಕ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ.



Source link

Leave a Reply

Your email address will not be published. Required fields are marked *