ರೋಡ್ ಶೋ ವೇಳೆ ಅಭಿಮಾನಿ ತಲೆ ಮೇಲೆ ಹರಿದ ಜಗನ್‌ ಕಾರು, ಭಯಾನಕ ವಿಡಿಯೋ

ರೋಡ್ ಶೋ ವೇಳೆ ಅಭಿಮಾನಿ ತಲೆ ಮೇಲೆ ಹರಿದ ಜಗನ್‌ ಕಾರು, ಭಯಾನಕ ವಿಡಿಯೋ


ಗುಂಟೂರು, (ಜೂನ್ 22): ಆಂಧ್ರ ಪ್ರದೇಶದ (Andra Pradesh) ಗುಂಟೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು ಮಾಜಿ ಸಿಎಂ ಹಾಗೂ ವೈಎಸ್ ಆರ್ ಕಾಂಗ್ರೆಸ್ (YSR Congress) ಮುಖ್ಯಸ್ಥ ಜಗನ ಮೋಹನ್ ರೆಡ್ಡಿ (Jagan Mohan Reddy) ರೋಡ್ ಶೋ ವೇಳೆ ವ್ಯಕ್ತಿಯೋರ್ವ ಅವರ ಕಾರಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಪಲ್ನಾಡು ಜಿಲ್ಲೆಗೆ ಭೇಟಿ ನೀಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗುಂಟೂರು ಜಿಲ್ಲೆಯ ಎಟುಕುರು ಬಳಿಯ ಲಾಲ್‌ಪುರಂ ಹೆದ್ದಾರಿಯಲ್ಲಿ ವೈಎಸ್‌ಆರ್‌ಸಿಪಿ ಆಯೋಜಿಸಿದ್ದ ರ್ಯಾಲಿ ವೇಳೆ ಜಗನ್ ಪ್ರಯಾಣಿಸುತ್ತಿದ್ದ ಕಾರು ವ್ಯಕ್ತಿ ಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ ಮೃತಪಟ್ಟಿದ್ದಾನೆ. ವೈಎಸ್‌ಆರ್‌ಸಿಪಿ ಪಕ್ಷದ ಕಟ್ಟಾ ಬೆಂಬಲಿಗ ಚೀಲಿ ಸಿಂಗಯ್ಯ (54) ಮೃತ ದುರ್ವೈವಿ.

ಸಟ್ಟೇನಪಲ್ಲಿ ತಾಲೂಕಿನ ರೆಂಟಪಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಗನ್‌ ಮೋಹನ್‌ ರೆಡ್ಡಿ ಅವರನ್ನು ನೋಡಲು ರಸ್ತೆ ಬದಿ ನೂರಾರು ಸಂಖ್ಯೆಯಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ನೆರೆದಿದ್ದರು. ಅಲ್ಲದೇ ಜಗನ್​​ ಗೆ ಹಾರ ಹಾಕಿ ಕೈ ಕುಲುಕಲು ಮುಗಿಬಿದ್ದಿದ್ದು, ಜಗನ್ ಕಾರಿನ ಡೋರ್ ತೆಗೆದು ಅಭಿಮಾನಿಗಳತ್ತ ಕೈಬಿಸುತ್ತಿದ್ದರೆ, ಇತ್ತ ಚಾಲಕನ ಕಡೆಗೆ ಅಭಿಮಾನಿ ಸಿಂಗಯ್ಯ ಕಾರಿ ಮುಂಭಾಗದಲ್ಲಿ ಬಿದ್ದಿದ್ದಾನೆ.  ಇದನ್ನು ಗಮನಿಸದ ಚಾಲಕ ಹಾಗೇ ಕಾರು ಚಲಾಯಿಸಿದ್ದು, ಕಾರಿನ ಮುಂದಿನ ಗಾಲಿ ಸಿಂಗಯ್ಯನ ತಲೆ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಅಸುನೀಗಿದ್ದಾನೆ.

ಜೂನ್ 18ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಆಕ್ರೋಗಳು ವ್ಯಕ್ತವಾಗುತ್ತಿವೆ. ಇನ್ನು ಈ ರೀತಿಉ ಹುಚ್ಚು ಅಭಿಮಾನ ಇರಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಡಿಯೋನಲ್ಲೇನಿದೆ?

ಜಗನ್‌ ಮೋಹನ್‌ ರೆಡ್ಡಿ ಅವರಿಗೆ  ಪುಷ್ಪಾರ್ಚನೆ ಮಾಡಲು ನೂರಾರು ಅಭಿಮಾನಿಗಳು ಮುಂದಾಗಿದ್ದಾರೆ. ಈ ವೇಳೆ ಚೀಲಿ ಸಿಂಗಯ್ಯ ಸಹ ಹೋಗಿದ್ದಾನೆ. ಆದ್ರೆ, ನೂಕು ನುಗ್ಗಲಿನಲ್ಲಿ ಬ್ಯಾಲೆನ್ಸ್ ತಪ್ಪಿ ಜಗನ ಇದ್ದ ಕಾರಿನ ಮುಂಭಾಗದಲ್ಲಿ ಬಿದ್ದಿದ್ದಾರೆ. ಇದನ್ನು ತಿಳಿಯದೆ ಕಾರು ಸಿಂಗಯ್ಯ ತಲೆ ಮೇಲೆ ಹರಿದಿದೆ.  ವೈರಲ್‌ ವಿಡಿಯೊದಲ್ಲಿ ನೆಲದ ಮೇಲೆ ಬಿದ್ದ ಚೀಲಿ ಸಿಂಗಯ್ಯ ಅವರ ಕುತ್ತಿಗೆ ಮೇಲೆ ಕಾರಿನ ಮುಂದಿನ ಚಕ್ರ ಹರಿದುಹೋಗಿರುವುದು ಕಂಡು ಬಂದಿದೆ. ಸ್ಥಳೀಯರು ಕೂಡಲೇ ಪೊಲೀಸರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಕೂಡಲೇ ಸಿಂಗಯ್ಯ ನನ್ನುಗುಂಟೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗುಂಟೂರು ಎಸ್‌ಪಿ ಸತೀಶ್ ಕುಮಾರ್ ಮತ್ತು ಗುಂಟೂರು ರೇಂಜ್ ಐಜಿ ತ್ರಿಪಾಠಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ದೃಢಪಡಿಸಿದ್ದಾರೆ. “ಪ್ರಾಥಮಿಕ ತನಿಖೆಯ ಪ್ರಕಾರ ಕೇವಲ 3 ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದ್ರೆ, ಸುಮಾರು 30ರಿಂದ 35 ವಾಹನಗಳು ಬೆಂಗಾವಲು ಪಡೆಯಲ್ಲಿದ್ದವು” ಎಂದು ಐಜಿ ತ್ರಿಪಾಠಿ ಹೇಳಿದ್ದಾರೆ. ಅನಧಿಕೃತ ವಾಹನಗಳು ಬೆಂಗಾವಲು ಪಡೆಯೊಂದಿಗೆ ಹೇಗೆ ಸೇರಿಕೊಂಡವು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ, ಕಾರು ಚಾಲಕ ರಮಣ ರೆಡ್ಡಿ ಹಾಗೂ ಜಗನ್ ಇದ್ದ ಕಾರು ಮಾಲೀಕ ಕೃಷ್ಣ ಎನ್ನುವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಚಾಲಕ ರಮಣ ರೆಡ್ಡಿಯನ್ನು ಬಂಧಿಸಲಾಗಿದೆ. ಇನ್ನು ಎ2 ಆರೋಪಿಯಾಗಿರುವ ಜಗನ್ ಮೋಹನ್ ರೆಡ್ಡಿ ಸದ್ಯ ಬೆಂಗಳೂರಿನಲ್ಲಿ ಇದ್ದಾರೆ ಎನ್ನವ ಮಾಹಿತಿ ತಿಳಿದುಬಂದಿದೆ.

Published On – 4:46 pm, Sun, 22 June 25





Source link

Leave a Reply

Your email address will not be published. Required fields are marked *