Video : ಹುಟ್ಟುಹಬ್ಬದ ದಿನ ಫುಡ್ ಡೆಲಿವರಿ ಮಾಡಲು ಹೋದ ವ್ಯಕ್ತಿಗೆ ಕಾದಿತ್ತು ಸರ್ಪ್ರೈಸ್, ಏನದು ಗೊತ್ತಾ?

Video : ಹುಟ್ಟುಹಬ್ಬದ ದಿನ ಫುಡ್ ಡೆಲಿವರಿ ಮಾಡಲು ಹೋದ ವ್ಯಕ್ತಿಗೆ ಕಾದಿತ್ತು ಸರ್ಪ್ರೈಸ್, ಏನದು ಗೊತ್ತಾ?


ಫುಡ್ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್Image Credit source: Instagram

ಹುಟ್ಟುಹಬ್ಬ (birthday) ಬಂತೆಂದರೆ ಎಲ್ಲರೂ ಕೂಡ ಆತ್ಮೀಯರು ಏನಾದ್ರೂ ಸರ್ಪ್ರೈಸ್ ಉಡುಗೊರೆಗಳನ್ನು ನೀಡುತ್ತಾರಾ ಎಂದು ಕಾಯುತ್ತೇವೆ. ಯಾರಾದ್ರೂ ಸ್ಪೆಷಲ್ ಆಗಿ ಸರ್ಪ್ರೈಸ್ ನೀಡಿದರೆ ಆ ಖುಷಿಯನ್ನು ಹೇಳಲು ಪದಗಳೇ ಸಾಲಲ್ಲ. ಇನ್ನು ಮನೆ ಮಂದಿಗೆ, ಸ್ನೇಹಿತರಿಗೆ ಹುಟ್ಟುಹಬ್ಬದ ಸರ್ಪ್ರೈಸ್‌ ನೀಡುವುದು ಕಾಮನ್‌. ಆದರೆ ಇಲ್ಲೊಂದು ಮನೆ ಮಂದಿ ಗುರುತು ಪರಿಚಯವಿಲ್ಲದ ಜೊಮಾಟೊ ಡೆಲಿವರಿ ಬಾಯ್‌ಗೆ (Zomato delivery boy) ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ನೋಡಿ ಫುಡ್ ಡೆಲಿವರಿ ಬಾಯ್ ಕಣ್ಣೀರು ಸುರಿಸಿದ್ದಾನೆ. ಈ  ವಿಡಿಯೋ ಸಾಮಾಜಿಕತಾಣಗಳಲ್ಲಿ(social media) ಸಿಕ್ಕಾಪಟ್ಟೆ ವೈರಲ್ ಆಗಿದೆ.

ಫುಡ್ ಡೆಲಿವರಿ ಬಾಯ್‌ಗೆ ಸರ್ಪ್ರೈಸ್ ನೀಡಿದ ಮನೆಮಂದಿ

ಇದನ್ನೂ ಓದಿ

krsnaratnanii ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಫುಡ್ ಡೆಲಿವರಿ ಬಾಯ್, ಆರ್ಡರ್ ಮಾಡಿದ ಫುಡ್ ತಲುಪಿಸಲು ಮನೆಯೊಂದಕ್ಕೆ ಹೋಗಿದ್ದಾನೆ. ಆ ವೇಳೆ ಆ ಮನೆಯ ಸದಸ್ಯರಲ್ಲಿ ಒಬ್ಬರು ಆತನ ಕಣ್ಣನ್ನು ಮುಚ್ಚಿ ಒಳಗೆ ಕರೆದುಕೊಂಡು ಹೋಗಿ ಬರ್ತ್ಡೇ ಸರ್ಪ್ರೈಸ್ ನೀಡಿದ್ದಾರೆ. ಪ್ರಾರಂಭದಲ್ಲಿ ಆತನಿಗೆ ಈ ಬಗ್ಗೆ ಯಾವುದೇ ಐಡಿಯಾ ಕೂಡ ಇರಲಿಲ್ಲ. ಮನೆಯೊಳಗೆ ಹೋದ ಬಳಿಕ ಅಲ್ಲಿದ್ದವರೆಲ್ಲರೂ ಜೋರಾಗಿ ಹುಟ್ಟುಹಬ್ಬದ ಶುಭಾಶಯಗಳು ಎನ್ನುತ್ತಾ ವಿಶ್ ಮಾಡಿದ್ದಾರೆ. ಬಳಿಕ ಸಿಹಿ ತಿನ್ನಿಸಿ ಆತನನ್ನು ಖುಷಿ ಪಡಿಸುವ ಪ್ರಯತ್ನ ಮಾಡಿದ್ದು, ಈ ಪರಿಶುದ್ಧ ಪ್ರೀತಿಯನ್ನು ಕಂಡು ಡೆಲಿವರಿ ಬಾಯ್ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ.

ಇದನ್ನೂ ಓದಿ :Video : ರಸ್ತೆಬದಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ಹೀಗೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಬಳಕೆದಾರರೊಬ್ಬರು, ಈ ವಿಡಿಯೋ ಅದ್ಭುತವಾಗಿದೆ, ಡೆಲಿವರಿ ಬಾಯ್ ಡಿಟೇಲ್ಸ್ ಹೇಗೆ ಸಿಕ್ಕಿತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಈ ಪ್ರಪಂಚದಲ್ಲಿರುವ ಜನರಿಂದ ನಾನು ಬಯಸುವುದು ಇದನ್ನೇ, ಇಂತಹ ಬದಲಾವಣೆಗಳಾಗಬೇಕು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಆಹಾರದ ರುಚಿ ಕೆಲವು ಸಮಯದವರೆಗೆ ಇರುತ್ತದೆ. ಆದರೆ ಈ ರೀತಿಯ ಪ್ರೀತಿಯೂ ಕೊನೆಯವರೆಗೂ ಇರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *