‘ಆಪ್ ಕೈಸೆ ಹೋ’ ಹೆಸರು ನೋಡಿ ಹಿಂದಿ ಸಿನಿಮಾ ಎಂದುಕೊಂಡರೆ ತಪ್ಪು. ಇದೊಂದು ಮಲಯಾಳಂ ಸಿನಿಮಾ. ಹಾಸ್ಯಪ್ರಧಾನ ಕೌಟುಂಬಿಕ ಕತೆ ಹೊಂದಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ಇದೀಗ ಸನ್ನೆಕ್ಸ್ಟ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಹಾಲಿವುಡ್ನ ಕಾಮಿಡಿ-ಥ್ರಿಲ್ಲರ್ ವೆಬ್ ಸರಣಿ ‘ಮಾಂಕ್’ನ ರೀಮೇಕ್ ಆಗಿರುವ ‘ಮಿಸ್ತ್ರಿ’ ವೆಬ್ ಸರಣಿ ಜಿಯೋ ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಓಸಿಡಿ ಇರುವ ಪತ್ತೆಧಾರನೊಬ್ಬ ಹೇಗೆ ಕೇಸುಗಳನ್ನು ತನ್ನ ಚಾಕಚಕ್ಯತೆಯಿಂದ ಪತ್ತೆ ಹಚ್ಚುತ್ತಾನೆ ಎಂಬುದೇ ಕತೆ.
ಅಂಥಾಲಜಿ ಕ್ರೈಂ ಥ್ರಿಲ್ಲರ್ ಕತೆ ಹೊಂದಿರುವ ‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕೇಶವಮೂರ್ತಿ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ದಿಲೀಪ್ ರಾಜ್ ಸೇರಿದಂತೆ ಕೆಲ ಒಳ್ಳೆಯ ನಟ-ನಟಿಯರು ನಟಿಸಿದ್ದಾರೆ. ಸಿನಿಮಾ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಂ ಆಗುತ್ತಿದೆ.
ಉತ್ತರ ಕರ್ನಾಟಕದ ಕೆಲ ಉದಯೋನ್ಮುಖರು ಸೇರಿ ನಿರ್ಮಿಸಿರುವ ‘ಪಪ್ಪಿ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಗುಳೆ ಬರುವ ಕುಟುಂಬ. ಆ ಕುಟುಂಬದ ಬಾಲಕನಿಗೆ ಸಿಗುವ ನಾಯಿ. ಆ ನಾಯಿಯ ಹಿಂದಿನ ಕತೆ ಹೀಗೊಂದು ಆಸಕ್ತಿಕರ ಕತೆ ಸಿನಿಮಾನಲ್ಲಿದೆ. ಈ ಸಿನಿಮಾ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೆಬ್ ಸರಣಿಗಳಲ್ಲಿ ಸ್ಕ್ವಿಡ್ ಗೇಮ್ಸ್ ಸಹ ಒಂದು. ಇದೀಗ ಇದೇ ವೆಬ್ ಸರಣಿಯ ಮೂರನೇ ಹಾಗೂ ಕೊನೆಯ ಸೀಸನ್ ಬಿಡುಗಡೆ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ‘ಸ್ಕ್ವಿಡ್ ಗೇಮ್ಸ್ ಸೀಸನ್ 3’ ಇದೇ ವಾರದಿಂದ ಸ್ಟ್ರೀಮಿಂಗ್ ಆರಂಭಿಸಿದೆ.
ತೆಲುಗಿನಲ್ಲಿ ಇತ್ತೀಚೆಗೆ ವೆಬ್ ಸರಣಿಗಳು ಹಿಟ್ ಆಗುತ್ತಿವೆ. ಇದೀಗ ‘ವಿರಾಟಪಾಲೆಂ: ಪಿಸಿ ಮೀನಾ ರಿಪೋರ್ಟಿಂಗ್’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ಹಾರರ್ ಮತ್ತು ಕ್ರೈಂ ಒಳಗೊಂಡಿರುವ ಈ ವೆಬ್ ಸರಣಿ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಅಜಯ್ ದೇವಗನ್ ನಟನೆಯ ಬ್ಲಾಕ್ ಬಸ್ಟರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ರೈಡ್’ ಈ ಸಿನಿಮಾದ ಎರಡನೇ ಭಾಗ ‘ರೈಡ್ 2’ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ರಿತೇಶ್ ದೇಶ್ಮುಖ್, ಅಜಯ್ ದೇವಗನ್ ನಟನೆಯ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.