Headlines

ಆಂಕರ್ ಅನುಶ್ರೀ ಮದುವೆ ಆಮಂತ್ರಣ ಪತ್ರಿಕೆ ಹೊರಬಂತು!.. ಹೇಗಿದೆ ನೋಡಿ, ಕಾಮೆಂಟ್ ಮಾಡಿ..! | Finally Kannada Anchor Anushree Marriage Invitation Is Ready

ಆಂಕರ್ ಅನುಶ್ರೀ ಮದುವೆ ಆಮಂತ್ರಣ ಪತ್ರಿಕೆ ಹೊರಬಂತು!.. ಹೇಗಿದೆ ನೋಡಿ, ಕಾಮೆಂಟ್ ಮಾಡಿ..! | Finally Kannada Anchor Anushree Marriage Invitation Is Ready


ಆಂಕರ್ ಅನುಶ್ರೀ ಮದುವೆ ಸುದ್ದಿ ಮೊದಲು ಗಾಸಿಪ್ ರೂಪ ಪಡೆದು ಹೊರಬಿತ್ತು. ಆ ಬಳಿಕ ಸ್ವತಃ ಅನುಶ್ರೀ ಅವರೇ ತಮ್ಮ ಮದುವೆ ಫಿಕ್ಸ್ ಆಗಿರೋ ಬಗ್ಗೆ ಅಧೀಕೃತವಾಗಿ ಮಾಹಿತಿ ನೀಡಿದ್ದಾರೆ. ಇದೀಗ ಈ ಸುದ್ದಿ ಆಮಂತ್ರಣ ಪತ್ರಿಕೆ ಮೂಲಕವೇ ಮಾಧ್ಯಮಗಳಿಗೆ ತಲುಪಿವೆ. ಸುದ್ದಿ ಒಳಗಡೆ ‘ಇನ್ವಿಟೇಶನ್ ಇದೆ, ನೋಡಿ..

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಅವರ ಮದುವೆ ಆಮಂತ್ರಣ ಪತ್ರಿಕೆ ಹೊರಬಿದ್ದಿದೆ. ಈಗಾಗಲೇ ಈ ನ್ಯೂಸ್ ಕರ್ನಾಟಕದ ಮನೆಮನೆಗಳಲ್ಲೂ ಹರಡಿದೆ. ಆದರೆ, ಅನುಶ್ರೀ ಅಭಿಮಾನಿಗಳಿಗೆ ಮದುವೆ ಆಮಂತ್ರಣ ಪತ್ರ ನೋಡುವ ಸಹಜ ಕುತೂಹಲ ಇದ್ದೇಇರುತ್ತೆ ಅಲ್ವಾ? ಅದಕ್ಕೆ ಇದೀಗ ಇನ್ವಿಟೇಶನ್ ಕೂಡ ಹೊರಜಗತ್ತಿಗೆ ಅನಾವರಣ ಆಗಿದೆ. ನೀವೇನಾದ್ರೂ ಆಂಕರ್ ಅನುಶ್ರೀ ಫ್ಯಾನ್ ಆಗಿದ್ರೆ ಇಲ್ಲಿದೆ ನೋಡಿ ಆಮಂತ್ರಣ ಪತ್ರಿಕೆ!

ಹೌದು, ನಟಿ, ನರೂಪಕಿ ಅನುಶ್ರೀ ಮದುವೆ ಬಗ್ಗೆ ಅವರಿಗಿಂತಲೂ ಹೆಚ್ಚಾಗಿ ಬೇರೆ ಹಲವರಿಗೆ ತಲೆಬಿಸಿ ಆಗಿತ್ತು ಎನ್ನಬಹುದು. ಅನುಶ್ರೀ ಅವರು ಹೋದಲ್ಲಿ ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಎಲ್ಲೇ ಹೋದ್ರೂ ಅವರ ಮದುವೆ ಬಗ್ಗೆಯೇ ಪ್ರಶ್ನೆ ಕೇಳಲಾಗುತ್ತಿತ್ತು. ಆ ಕ್ಷಣಕ್ಕೆ ಏನೋ ಒಂದು ಹೇಳಿ ನಟಿ ಅನುಶ್ರೀ ಅವರು ಜಾರಿಕೊಳ್ಳುತ್ತಿದ್ದರು. ಹಲವು ವರ್ಷಗಳನ್ನು ಹೀಗೆಯೇ ಕಳೆದಿದ್ದರು ಅನುಶ್ರೀ. ಆದರೆ ಈ ವರ್ಷದ ಪ್ರಾರಂಭದಿಂದಲೇ ಅನುಶ್ರೀ ಅವರು ಮದುವೆ ಆಗುವ ಮುನ್ಸೂಚನೆ ಕೊಟ್ಟಿದ್ದರು.

ಆ ಬಳಿಕ, ಅಂದರೆ ಕಳೆದ ತಿಂಗಳು ಆಂಕರ್ ಅನುಶ್ರೀ ಮದುವೆ ಸುದ್ದಿ ಮೊದಲು ಗಾಸಿಪ್ ರೂಪ ಪಡೆದು ಹೊರಬಿತ್ತು. ಆ ಬಳಿಕ ಸ್ವತಃ ಅನುಶ್ರೀ ಅವರೇ ತಮ್ಮ ಮದುವೆ ಫಿಕ್ಸ್ ಆಗಿರೋ ಬಗ್ಗೆ ಅಧೀಕೃತವಾಗಿ ಮಾಹಿತಿ ನೀಡಿದ್ದಾರೆ. ಇದೀಗ ಈ ಸುದ್ದಿ ಆಮಂತ್ರಣ ಪತ್ರಿಕೆ ಮೂಲಕವೇ ಮಾಧ್ಯಮಗಳಿಗೆ ತಲುಪಿವೆ. ಇದೇ ತಿಂಗಳು 28ಕ್ಕೆ ಅನುಶ್ರೀ ಮದುವೆ ಬೆಂಗಳೂರಿನ ಕಗ್ಗಲಿಪುರದಲ್ಲಿ ನಡೆಯಲಿದೆ. ಅನುಶ್ರೀ ಕೈಹಿಡಯಲಿರುವ ವರ ರೋಶನ್ (Roshan). ಹೆಚ್ಚಿನ ಮಾಹಿತಿಗೆ ಇನ್ವಿಟೇಶನ್ ನೋಡಬಹುದು.



Source link

Leave a Reply

Your email address will not be published. Required fields are marked *