ಅನನ್ಯಾ ಭಟ್ ಮಗಳ ಕತೆ ಸುಳ್ಳು,ಫೋಟೋ ನಕಲಿ, ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಸುಜಾತ್ ಭಟ್ | Dharmasthala Case Sujatha Bhat Denies Ananya Bhat Her Daughter Calls It False

ಅನನ್ಯಾ ಭಟ್ ಮಗಳ ಕತೆ ಸುಳ್ಳು,ಫೋಟೋ ನಕಲಿ, ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಸುಜಾತ್ ಭಟ್ | Dharmasthala Case Sujatha Bhat Denies Ananya Bhat Her Daughter Calls It False


ಧರ್ಮಸ್ಥಳದಲ್ಲಿ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಕತೆ ಸುಳ್ಳು. ಕೆಲವರ ಒತ್ತಡದಿಂದ ಈ ಕತೆ ಕಟ್ಟಿ ಹೇಳಿದ್ದೇನೆ. ಆಸ್ತಿ ವಿಚಾರಕ್ಕಾಗಿ ಈ ಸುಳ್ಳು ಹೇಳಿದೆ ಎಂದು ಸುಜಾತ್ ಭಟ್ ಖಾಸಗಿ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಆ.22) ಧರ್ಮಸ್ಥಳ ಪ್ರಕರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಸುಜಾತ್ ಭಟ್ ಮಗಳು ಅನನ್ಯಾ ಭಟ್ ನಾಪತ್ತೆ ಕೇಸ್ ಅಸಲಿ ವಿಚಾರ ಹೊರಬಂದಿದೆ. ತಾನು ಹೇಳಿದ್ದೆಲ್ಲಾ ಸುಳ್ಳು, ಅನನ್ಯಾ ಭಟ್ ಅನ್ನೋ ಮಗಳೇ ಇರಲಿಲ್ಲ. ನಾನು ಹೇಳಿಕೊಟ್ಟ ಹಾಗೇ ಹೇಳಿದ್ದೇನೆ ಎಂದು ಇನ್‌ಸೈಟ್‌ರಶ್‌ಗೆ ಯೂಟ್ಯೂಬ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ. ಗಿರೀಶ್ ಮಟ್ಟೆಣ್ಣನವರ್,ಜಯಂತ್ ಹೇಳಿದ ಹಾಗೇ ಹೇಳಿದ್ದೇನೆ. ಸುಳ್ಳು ಹೇಳುವ ಪರಿಸ್ಥಿತಿ ಬಂದಿತ್ತು. ಆಸ್ತಿ ಸಿಗಲಿಲ್ಲ ಅನ್ನೋ ಕಾರಣಕ್ಕೆ ಸುಳ್ಳು ಹೇಳಿದೆ ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್‌ಸೈಟ್‌ರಶ್‌ಗೆ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸುಜಾತಾ

ನಿಮ್ಮ ಮಗಳು ಅನ್ನೋ ಕತೆ ಸತ್ಯವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ಅನನ್ಯಾ ಭಟ್ ಅನ್ನೋ ಮಗಳು ಸುಳ್ಳು ಕತೆ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ ಹೇಳಿದ ಹಾಗೇ ನಾನು ಹೇಳಿದೆ. ಆಸ್ತಿ ವಿಚಾರವಾಗಿ ಈ ಕತೆ ಹೇಳಿಕೊಟ್ಟಿದ್ದರು. ಹೀಗಾಗಿ ಈ ಕತೆ ಹೇಳಿದೆ. ನನಗೆ ದುಡ್ಡಿಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೂ ಯಾರೂ ಆಫರ್ ಮಾಡಿಲ್ಲ. ಆದರೆ ನನ್ನ ತಾತನ ಆಸ್ತಿಯನ್ನು ಧರ್ಮಸ್ಥಳಕ್ಕೆ ದಾನವಾಗಿ ಹೇಗೆ ಕೊಟ್ಟರು ಅನ್ನೋದು ನನ್ನ ಪ್ರಶ್ನೆ. ಅದು ನನಗೂ ಸಿಗಬೇಕಿತ್ತು. ಆದರೆ ನನಗೆ ಪಾಲು ಸಿಗಲಿಲ್ಲ ಎಂದು ಸುಜಾತ್ ಭಟ್ ನೋವು ತೋಡಿಕೊಂಡಿದ್ದಾಳೆ.

ಮಗಳ ಪೋಟೋ ಫೇಕ್ ಎಂದ ಸುಜಾತಾ ಭಟ್

ಮಗಳು ಫೋಟೋ ಬಿಡುಗಡೆ ಮಾಡಿದ್ದು ಸುಳ್ಳು, ಅದು ಖಂಡಿತ ಸುಳ್ಳು ಫೋಟೋ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇದೇ ವೇಳೆ ತಾನು ಧರ್ಮಸ್ಥಳದ ಜನರ ನಂಬಿಕೆ, ಜನರ ಭಾವನೆ ಜೊತೆ ಆಟವಾಡಿಲ್ಲ. ಆದರೆ ನನ್ನನ್ನು ಜನರ ಭಾವನೆ ಜೊತೆ ಆಟವಾಡುವಂತೆ ಕೆಲವರು ಮಾಡಿದರು ಎಂದು ಸುಜಾತಾ ಭಟ್ ಹೇಳಿದ್ದಾರೆ. ಆಸ್ತಿಯಲ್ಲಿ ನನಗೆ ಪಾಲು ನೀಡದೆ ಕೊಟ್ಟಿದ್ದಾರೆ. ಈ ನೋವು ನನಗಿದೆ ಎಂದು ಹೇಳಿದ್ದಾರೆ.

 



Source link

Leave a Reply

Your email address will not be published. Required fields are marked *