Headlines

US Open Tennis 2025 Record Prize Pool | ಅತಿ ಶ್ರೀಮಂತ ಟೆನಿಸ್‌ ಗ್ರ್ಯಾನ್‌ಸ್ಲಾಂ ಯುಎಸ್‌ ಓಪನ್‌ಗೆ ಇಂದು ಚಾಲನೆ! ₹745 ಕೋಟಿ ಬಹುಮಾನ! | Us Open 2025 Record 85 Million Dollar Prize Money Carlos Alcaraz Gauff In Action

US Open Tennis 2025 Record Prize Pool | ಅತಿ ಶ್ರೀಮಂತ ಟೆನಿಸ್‌ ಗ್ರ್ಯಾನ್‌ಸ್ಲಾಂ ಯುಎಸ್‌ ಓಪನ್‌ಗೆ ಇಂದು ಚಾಲನೆ! ₹745 ಕೋಟಿ ಬಹುಮಾನ! | Us Open 2025 Record 85 Million Dollar Prize Money Carlos Alcaraz Gauff In Action



US Open Tennis 2025 Record Prize Pool | ಅತಿ ಶ್ರೀಮಂತ ಟೆನಿಸ್‌ ಗ್ರ್ಯಾನ್‌ಸ್ಲಾಂ ಯುಎಸ್‌ ಓಪನ್‌ಗೆ ಇಂದು ಚಾಲನೆ! ₹745 ಕೋಟಿ ಬಹುಮಾನ! | Us Open 2025 Record 85 Million Dollar Prize Money Carlos Alcaraz Gauff In Action

ವಿಶ್ವದ ಅತಿ ಶ್ರೀಮಂತ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ ಯುಎಸ್‌ ಓಪನ್‌ ಸೋಮವಾರದಿಂದ ಆರಂಭ. ಒಟ್ಟು ₹745 ಕೋಟಿ ಬಹುಮಾನ ಮೊತ್ತಕ್ಕಾಗಿ ವಿಶ್ವದ ಅಗ್ರಗಣ್ಯ ಟೆನಿಸಿಗರು ಸೆಣಸಲಿದ್ದಾರೆ. ಚಾಂಪಿಯನ್‌ಗಳಿಗೆ ತಲಾ ₹43 ಕೋಟಿ ಬಹುಮಾನ.

ನ್ಯೂಯಾರ್ಕ್‌: ವಿಶ್ವದ ಅತಿ ಶ್ರೀಮಂತ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಾಗಿರುವ ಯುಎಸ್‌ ಓಪನ್‌ನ ಮುಖ್ಯ ಸುತ್ತಿನ ಪಂದ್ಯಗಳು ಸೋಮವಾರ ಆರಂಭಗೊಳ್ಳಲಿದೆ. ಸೆ.7ರವರೆಗೆ ಟೂರ್ನಿ ನಡೆಯಲಿದ್ದು, ವಿಶ್ವದ ಅಗ್ರಗಣ್ಯ ಟೆನಿಸಿಗರು ಪ್ರತಿಷ್ಠಿತ ಟ್ರೋಫಿ ಗೆಲ್ಲಲು ಸೆಣಸಾಡಲಿದ್ದಾರೆ.

ವರ್ಷಕ್ಕೆ 4 ಗ್ರ್ಯಾನ್‌ಸ್ಲಾಂ ಟೂರ್ನಿಗಳು(ಆಸ್ಟ್ರೇಲಿಯನ್‌, ಫ್ರೆಂಚ್‌, ವಿಂಬಲ್ಡನ್‌, ಯುಎಸ್‌) ನಡೆಯಲಿದ್ದು, ಯುಎಸ್‌ ಓಪನ್‌ ವರ್ಷದ ಕೊನೆ ಗ್ರ್ಯಾನ್‌ಸ್ಲಾಂ. ಕಳೆದ ವರ್ಷದ ಪುರುಷ ಹಾಗೂ ಮಹಿಳಾ ವಿಭಾಗಗಳ ಚಾಂಪಿಯನ್‌ಗಳು, ಈ ಎರಡೂ ವಿಭಾಗಗಳಲ್ಲಿ ವಿಶ್ವ ನಂ.1 ಸ್ಥಾನದಲ್ಲಿರುವ ಅರೈನಾ ಸಬಲೆಂಕಾ ಹಾಗೂ ಯಾನಿಕ್‌ ಸಿನ್ನರ್‌ ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. 2023ರ ಯುಎಸ್‌ ಓಪನ್‌ ಬಳಿಕ ಒಮ್ಮೆಯೂ ಗ್ರ್ಯಾನ್‌ಸ್ಲಾಂ ಗೆಲ್ಲದ ದಿಗ್ಗಜ ಟೆನಿಸಿಗ ನೋವಾಕ್‌ ಜೋಕೋವಿಚ್‌, ಈ ಬಾರಿ ಟೂರ್ನಿಯಲ್ಲಾದರೂ ತಮ್ಮ 25 ಗ್ರ್ಯಾನ್‌ಸ್ಲಾಂಗಳ ಕನಸು ನನಸು ಮಾಡಲಿದ್ದಾರೆಯೇ ಎಂಬ ಕುತೂಹಲವಿದೆ. 2022ರ ಚಾಂಪಿಯನ್‌, ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್‌ ಗೆದ್ದಿರುವ ಯುವ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. ಉಳಿದಂತೆ 2023ರ ಚಾಂಪಿಯನ್‌ ಕೊಕೊ ಗಾಫ್‌, 2022ರ ಚಾಂಪಿಯನ್‌ ಇಗಾ ಸ್ವಿಯಾಟೆಕ್‌, 2021ರ ಚಾಂಪಿಯನ್‌ ಎಮ್ಮಾ ರಾಡುಕಾನು ಹಾಗೂ ಡ್ಯಾನಿಲ್‌ ಮೆಡ್ವೆಡೆವ್‌ ಸೇರಿ ಹಲವು ಕಣಕ್ಕಿಳಿಯಲಿದ್ದಾರೆ.

ದಾಖಲೆ ಬಹುಮಾನ:

ಈ ಬಾರಿ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಬಹುಮಾನ ಮೊತ್ತದಲ್ಲಿ ಭಾರೀ ಏರಿಕೆಯಾಗಿದೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತವನ್ನು 85 ಮಿಲಿಯನ್‌ ಯುಎಸ್‌ ಡಾಲರ್‌(745 ಕೋಟಿ ರು.)ಗೆ ಹೆಚ್ಚಿಸಲಾಗಿದೆ. ಇದು ಟೆನಿಸ್‌ ಇತಿಹಾಸದಲ್ಲೇ ಗರಿಷ್ಠ ಮೊತ್ತ. ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗುವವರಿಗೆ ತಲಾ 5 ಮಿಲಿಯನ್‌ ಡಾಲರ್‌(₹43 ಕೋಟಿ) ನಗದು ಬಹುಮಾನ ಲಭಿಸಲಿದೆ. ಇದು ಕಳೆದ ಬಾರಿಗಿಂತ ಶೇ.39ರಷ್ಟು ಹೆಚ್ಚು. 2024ರಲ್ಲಿ ಸಿಂಗಲ್ಸ್‌ ವಿಭಾಗದ ವಿಜೇತರಿಗೆ ₹31 ಕೋಟಿ ಬಹುಮಾನ ಲಭಿಸಿದ್ದವು.

ಭಾರತದ ಹಲವು ಕಿರಿಯರು ಕಣಕ್ಕೆ

ಯುಎಸ್‌ ಓಪನ್‌ನ ಮುಖ್ಯ ಟೂರ್ನಿಯ ಸಿಂಗಲ್ಸ್‌ನಲ್ಲಿ ಈ ಬಾರಿ ಯಾವುದೇ ಭಾರತೀಯರಿಲ್ಲ. ಕಳೆದ ವರ್ಷ ಸುಮಿತ್‌ ನಗಾಲ್‌ ಆಡಿದ್ದರೂ, ಈ ಸಲ ಅರ್ಹತೆ ಪಡೆದಿಲ್ಲ. ಆದರೆ ಈ ಬಾರಿ ಕಿರಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತೀಯರು ಆಡಲಿದ್ದಾರೆ. ಬಾಲಕಿಯರ ಸಿಂಗಲ್ಸ್‌ನಲ್ಲಿ 16 ವರ್ಷದ ಮಾಯಾ ರಾಜೇಶ್ವರನ್‌, ಬಾಲಕರ ವಿಭಾಗದಲ್ಲಿ 18 ವರ್ಷದ ಕೃಷ್ ತ್ಯಾಗಿ ಆಡಲಿದ್ದಾರೆ. ಉಳಿದಂತೆ ಹಿತೇಶ್‌ ಚೌಹಾಣ್‌, ಅರ್ಜುನ್‌ ರಾಠಿ, ರೆಥಿನ್‌ ಪ್ರಣವ್‌ ಸೆಂಥಿಲ್‌ ಕುಮಾರ್‌ ಹಾಗೂ ಆರ್ಣವ್‌ ಅರ್ಹತಾ ಸುತ್ತಿನಲ್ಲಿ ಆಡಲಿದ್ದು, ಮುಖ್ಯ ಸುತ್ತಿಗೇರುವ ವಿಶ್ವಾಸದಲ್ಲಿದ್ದಾರೆ.

 



Source link

Leave a Reply

Your email address will not be published. Required fields are marked *