Optical Illusion: ನಿಮಗೊಂದು ಸವಾಲ್;‌ ಈ ಉಲ್ಟಾ 24 ರ ನಡುವೆ ಅಡಗಿರುವ ಸೀದಾ 24 ಸಂಖ್ಯೆಯನ್ನು ಹುಡುಕಬಲ್ಲಿರಾ?

Optical Illusion: ನಿಮಗೊಂದು ಸವಾಲ್;‌ ಈ ಉಲ್ಟಾ 24 ರ ನಡುವೆ ಅಡಗಿರುವ ಸೀದಾ 24 ಸಂಖ್ಯೆಯನ್ನು ಹುಡುಕಬಲ್ಲಿರಾ?


ಆಪ್ಟಿಕಲ್‌ ಇಲ್ಯೂಷನ್‌Image Credit source: Jagran Josh

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ (Brain teaser)  ಒಗಟಿನ ಆಟಗಳು ಆಡಲು ತುಂಬಾನೇ ಮಜಾವಾಗಿರುತ್ತವೆ. ಇಂತಹ ಆಟಗಳು ಟೈಮ್‌ ಪಾಸ್‌ ಮಾತ್ರವಲ್ಲದೆ ನಮ್ಮ ಮೆದುಳಿಗೂ ಒಂದೊಳ್ಳೆ ವ್ಯಾಯಾಮವನ್ನು ನೀಡುತ್ತದೆ. ಈ ಬ್ರೈನ್‌ ಟೀಸರ್‌ ಆಟಗಳು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಅದರ ಉತ್ತರ ತಕ್ಷಣಕ್ಕೆ ಕಂಡು ಹಿಡಿಯುವುದು ಸುಲಭದ ಮಾತಲ್ಲ. ಅಂತಹದ್ದೊಂದು ಕಷ್ಟಕರವಾದ ಬ್ರೈನ್‌ ಟೀಸರ್‌ ಚಿತ್ರವೊಂದು ಇದೀಗ ವೈರಲ್‌ ಆಗಿದ್ದು, ಅದರಲ್ಲಿ ಅದರಲ್ಲಿ ಉಲ್ಟಾ 24 ರ ನಡುವೆ ಅಡಗಿರುವ ಒಂದು ಸೀದಾ 24 (find the number 24 hidden among these inverted 24) ನಂಬರನ್ನು ಹುಡುಕಲು ನಿಮಗೆ ಸವಾಲು ನೀಡಲಾಗಿದೆ. ಕೇವಲ 5 ಸೆಕೆಂಡುಗಳ ಒಳಗೆ ಆ ಸಂಖ್ಯೆಯನ್ನು ಹುಡುಕುವ ಮೂಲಕ ನಿಮ್ಮ ಕಣ್ಣು ಶಾರ್ಪ್‌ ಆಗಿದ್ಯಾ ಅನ್ನೋದನ್ನು ಪರೀಕ್ಷಿಸಿ.

ಉಲ್ಟಾ 24 ರ ನಡುವೆ ಅಡಗಿರುವ ಸೀದಾ 24 ಸಂಖ್ಯೆಯನ್ನು ಕಂಡು ಹಿಡಿಯಿರಿ:

Optical Illusion (1)

ಈ ಮೇಲಿನ ಚಿತ್ರದಲ್ಲಿ ನಿಮಗೆ ಎಲ್ಲಾ ಉಲ್ಟಾ  ಆಗಿರುವ ನಂಬರ್‌ 24 ಕಾಣಿಸಬಹುದು. ಉಲ್ಟಾ ನಂಬರ್‌ 24 ರ ನಡುವೆ ಒಂದು ಸೀದಾ 24 ಅಡಗಿದೆ. ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಆಗಿದೆ ಎಂದಾದರೆ, ನೀವು ಬರೀ 5 ಸೆಕೆಂಡುಗಳಲ್ಲಿ ಆ ಸೀದಾ ಇರುವ ನಂಬರ್‌ 24 ನ್ನು ಹುಡುಕಬೇಕು. ಇದರಲ್ಲಿ ಮೇಲ್ನೋಟಕ್ಕೆ ನಿಮಗೆ ಬರೀ ಉಲ್ಟಾ ಆಗಿರುವ ನಂಬರ್‌ 24 ಕಾಣಿಸಬಹುದು. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಮಾತ್ರ ಇವುಗಳ ನಡುವೆ ಅಡಗಿರುವ ಸೀದಾ 24 ನ್ನು ಪತ್ತೆ ಹಚ್ಚಬಹುದು.

ಇದನ್ನೂ ಓದಿ

ಸವಾಲನ್ನು ಸ್ವೀಕರಿಸಲು ಸಿದ್ಧರೇ?

ಉಲ್ಟಾ 24 ರ ನಡುವೆ ಸೀದಾ ಇರುವ ನಂಬರ್‌ 24 ಇದೆ. ಅದನ್ನು ಕೇವಲ 5 ಸೆಕೆಂಡುಗಳ ಒಳಗಾಗಿ ನೀವು ಪತ್ತೆ ಹಚ್ಚಬೇಕು. ನೀವೇನಾದ್ರೂ ಈ ಗುಪ್ತ ಸಂಖ್ಯೆಯನ್ನು  5 ಸೆಕೆಂಡುಗಳಲ್ಲಿ ಹುಡುಕಿದಿರೀ ಎಂದಾದ್ರೆ ನೀವು ತೀಕ್ಷ್ಣ ದೃಷ್ಟಿ ಗ್ರಹಿಕೆ,  ಉತ್ತಮ ಗಮನ, ಬಲವಾದ ಅರಿವಿನ ಸಾಮರ್ಥ್ಯ ಹೊಂದಿದ್ದೀರಿ ಎಂದರ್ಥ.

ಇದನ್ನೂ ಓದಿ: ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದ ಹುಡುಕಬಲ್ಲಿರಾ?

ಉತ್ತರ ಇಲ್ಲಿದೆ:

ಎಷ್ಟೇ ಹುಡುಕಿದರೂ, ಉಲ್ಟಾ 24 ರ ನಡುವೆ ಅಡಗಿರುವ ಗುಪ್ತ ಸಂಖ್ಯೆಯನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಚಿಂತೆ ಆಗಿದ್ಯಾ, ಟೆನ್ಷನ್‌ ಬೇಡ, ಉತ್ತರ ಇಲ್ಲಿದೆ ನೋಡಿ. ಕೆಳಗಿನ ಚಿತ್ರವನ್ನು  ಗಮನವಿಟ್ಟು ನೋಡಿದರೆ ಕೆಳಗಿನಿಂದ ನಾಲ್ಕನೇ ಸಾಲಿನಲ್ಲಿ ಸೀದಾ ಇರುವ ನಂಬರ್‌ 24 ಅಡಗಿರುವ ದೃಶ್ಯವನ್ನು ಪತ್ತೆ ಹಚ್ಚಬಹುದು.

Optical Illusion Answer

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *