
ಪ್ರತ್ಯಕ್ಷದರ್ಶಿ ಹೇಳಿಕೆ
ಮಗು ಅಪ್ಪ – ಅಮ್ಮಾ ಬೈಕ್ ನಲ್ಲಿ ಹೋಗುತ್ತಿದ್ದರು. ಬೈಕ್ ನಿಂದ ಬಿದ್ದ ಮೇಲೆ ಮಗು ಮೇಲೆಯೇ ಬಸ್ ಹತ್ತಿಸಿದ್ದಾರೆ. ನಾವು ಚಾಮರಾಜಪೇಟೆಯಿಂದ ಬರುತ್ತಿದ್ದಾಗ ಈ ಅಪಘಾತ ನೋಡಿದೇವು. ಅಪಘಾತ ಆದ ಮೇಲೆ ಚಾಲಕ ಎಸ್ಕೇಪ್ ಆಗಲು ಪ್ರಯತ್ನಿಸುತ್ತಿದ್ದನು. ಸ್ಥಳೀಯರ ಸಹಾಯದೊಂದಿಗೆ ಚಾಲಕನನ್ನು ಹಿಡಿಯಲಾಯ್ತು ನಂತರ ಪೊಲೀಸರ ವಶಕ್ಕೆ ನೀಡಲಾಯ್ತು. ನಾವು ಮೃತ ಮಗುವಿನ ಸಂಬಂಧಿಯೂ ಅಲ್ಲ. ಮಗುವಿನ ಸಾವಿಗೆ ನ್ಯಾಯ ಬೇಕೆಂದು ಪ್ರತ್ಯಕ್ಷದರ್ಶಿ ಕಾವ್ಯಾ ಹೇಳಿದ್ದಾರೆ.