ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥ ಆಗಿದೆ ಅಂತ ಸುದ್ದಿಗಳು ಹರಿದಾಡ್ತಿತ್ತು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಸೆಲೆಬ್ರಿಟಿಗಳ ಜೀವನ ಅಂದ್ರೆ ಹೀಗೆ. ಅಭಿಮಾನಿಗಳು, ಮೀಡಿಯಾ, ಸೋಶಿಯಲ್ ಮೀಡಿಯಾಗಳಿಂದ ವೈಯಕ್ತಿಕ ವಿಷಯಗಳೆಲ್ಲಾ ಸುದ್ದಿಯಾಗುತ್ತೆ. ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥದ ಸುದ್ದಿ ಕೂಡ ವೈರಲ್ ಆಗಿದೆ. ಸಚಿನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ನಿಶ್ಚಿತಾರ್ಥದ ಗುಲ್ಲು ಎಲ್ಲೆಡೆ ಹಬ್ಬಿತ್ತು. ಅಭಿಮಾನಿಗಳು ಕಾತರದಿಂದ ನಿಜವಾದ ಸುದ್ದಿಗಾಗಿ ಕಾಯುತ್ತಿದ್ದರು. ಸಚಿನ್ ‘ಆಸ್ಕ್ ಮಿ ಎನಿಥಿಂಗ್’ ಸೆಷನ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹೌದು, ಅವನ ಎಂಗೇಜ್‌ಮೆಂಟ್ ಆಗಿದೆ. ನಾನು ಅವರ ಹೊಸ ಬದುಕಿನ ಘಟ್ಟದ ಬಗ್ಗೆ ಎದುರು ನೋಡುತ್ತಿದ್ದೇವೆ ಎಂದು ಸಚಿನ್ ತೆಂಡೂಲ್ಕರ್ ಸ್ಷಷ್ಟನೆ ನೀಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ನಿಶ್ಚಿತಾರ್ಥ ಜೂನ್ 14 ರಂದು ನಡೆದಿದೆ ಎನ್ನಲಾಗಿದೆ. ಮುಂಬೈನಲ್ಲಿ ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿದೆ.
ಅರ್ಜುನ್ ಅವರ ಪತ್ನಿ ಸಾನಿಯಾ ಚಂದೋಕ್ ಪ್ರಸಿದ್ಧ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಘಾಯ್ ಕುಟುಂಬ ಹಾಸ್ಪಿಟಾಲಿಟಿ ಮತ್ತು ಆಹಾರ ಉದ್ಯಮದಲ್ಲಿ ಹೆಸರುವಾಸಿ.
ಅರ್ಜುನ್ ತೆಂಡೂಲ್ಕರ್ ಎಡಗೈ ವೇಗದ ಬೌಲರ್ ಆಗಿದ್ದು, ಗೋವಾ ಪರ ದೇಶಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ.
ನಿಶ್ಚಿತಾರ್ಥದ ಸುದ್ದಿ ಹೊರಬಿದ್ದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳು ಅರ್ಜುನ್‌ಗೆ ಶುಭ ಹಾರೈಸಿದ್ದಾರೆ.
Source link
ಮಗನ ನಿಶ್ಚಿತಾರ್ಥದ ಬಗ್ಗೆ ಮೊದಲ ಸಲ ಸ್ಪಷ್ಟನೆ ಕೊಟ್ಟ ಸಚಿನ್ ತೆಂಡುಲ್ಕರ್!