ನಮ್ಮ ವಿಘ್ನಗಳ ಪರಂಪರೆಯನ್ನು ನಾಶಮಾಡಬಲ್ಲ ದೇವರೇ ಗಣೇಶ

ನಮ್ಮ ವಿಘ್ನಗಳ ಪರಂಪರೆಯನ್ನು ನಾಶಮಾಡಬಲ್ಲ ದೇವರೇ ಗಣೇಶ

ಮಧುಗಿರಿ : ಹಿಂದೂ ಧರ್ಮದಲ್ಲಿ ಜನರು ಅತಿ ಹೆಚ್ಚು ಪೂಜಿಸಲಾಗುವ ದೇವರು ಮತ್ತು ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದಾನೆ. ಗಣೇಶನನ್ನು ಪ್ರತಿನಿತ್ಯವೂ ಪೂಜಿಸಲಾಗುತ್ತದೆಯಾದರೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾಕೆಂದರೆ, ಈ ದಿನವು ಗಣೇಶ ಚತುರ್ಥಿ ಹಬ್ಬದ ದಿನವಾಗಿದೆ. ಈ ದಿನದಂದು ಗಣೇಶನು ಜನಿಸಿದನು ಎಂಬುದು ಧಾರ್ಮಿಕ ನಂಬಿಕೆಯಾಗಿದೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಶಿಶಿರ್ ತಿಳಿಸಿದರು.

 ಪಟ್ಟಣದ ದೊಡ್ಡಪೇಟೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಂಡಳಿ ಮತ್ತು ವಾಸವಿ  ಯುವಜನ ಸಂಘದ ಸಂಯುಕ್ತ ಆಶ್ರಯದಲ್ಲಿ  ಪ್ರತಿಷ್ಠಾಪಿಸಿರುವ ಶ್ರೀ ಪ್ರಸನ್ನ ಗಣಪತಿ  ಪ್ರತಿಷ್ಠಾಪನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕಳೆದ 13 ವರ್ಷಗಳಿಂದ ಲೋಕಕಲ್ಯಾಣಾರ್ಥಕವಾಗಿ ಸಮಾಜದ ಏಳಿಗೆಗಾಗಿ ಹಾಗೂ ರೈತರಿಗಾಗಿ ಮಳೆ ಬೆಳೆ ಉತ್ತಮವಾಗಲೆಂದು ಈ ಗಣೇಶನ ಆಚರಣೆ ನಡೆಯುತ್ತಿರುವುದು ಎಂದು ತಿಳಿಸಿದರು.

 ಆರ್ಯವೈಶ್ಯ ಶ್ರೀರಾಮ ಸೇನೆ ಸೇವಾ ಸಮಿತಿ ಅಧ್ಯಕ್ಷರಾದ ಎಂಎಸ್ ರಘುನಾಥ್ ಮಾತನಾಡಿ,ಜೀವನದಲ್ಲಿ ಏನು ಮಾಡಲು ತೊಡಗಿದರೂ ಒಂದಲ್ಲ ಒಂದು ಅಡಚಣೆ ಎದುರಾಗುವುದು ಸಹಜ. ಹೀಗೆ ಎದುರಾಗುವ ವಿಘ್ನಗಳನ್ನು ಪರಿಹರಿಸಬಲ್ಲ ಶಕ್ತಿಯೊಂದು ನಮ್ಮ ಜೊತೆಗೆ ಇರಬಾರದಿತ್ತೆ – ಎಂದು ನಮಗೆ ಆ ಸಮಯದಲ್ಲಿ ಅನಿಸುವುದು ಸುಳ್ಳಲ್ಲ. ನಮ್ಮ ವಿಘ್ನಗಳ ಪರಂಪರೆಯನ್ನು ನಾಶಮಾಡಬಲ್ಲ ದೇವರೇ ಗಣೇಶ. ಅವನಿಗೆ ಒಂದು ಹೆಸರಿಲ್ಲ, ಸಾವಿರಾರು ಹೆಸರುಗಳು. ಅವನು ವಿಘ್ನನಾಯಕನೂ ಹೌದು, ವಿಘ್ನನಿವಾರಕನೂ ಹೌದು. ನಾವು ತಮಸ್ಸಿನಲ್ಲಿದ್ದಾಗ ಅವನು ನಮಗೆ ವಿಘ್ನನಾಯಕನೇ; ಆದರೆ ನಮ್ಮ ಸಾತ್ವಿಕತೆಯೇ ಅವನನ್ನು ನಮಗೆ ಸುಮುಖವಾಗಿಸುತ್ತದೆ, ವಿಘ್ನನಿವಾರಕನಾಗಿ ಒದಗಿಸುತ್ತದೆ. ಎಂದು ತಿಳಿಸಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಕೆ ಎನ್ ಶ್ರೀನಿವಾಸಮೂರ್ತಿ ಮಾತನಾಡಿ, ಶ್ರೀ ಪ್ರಸನ್ನ  ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮ ಯಾವುದೇ ಒಂದು ಪಕ್ಷ, ಜಾತಿ, ಒಬ್ಬ ವ್ಯಕ್ತಿಗೆ ಸಿಮೀತವಾಗಿಲ್ಲ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಉದ್ದೇಶ ಹೊಂದಲಾಗಿದೆ. ಭಕ್ತಿಯಿಂದ ರಾಷ್ಟ್ರ ಭಕ್ತಿ ಜಾಗೃತ ಗೊಳಿಸುವುದಾಗಿದೆ ಶ್ರೀ ಪ್ರಸನ್ನ ಗಣಪತಿಯಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.

 ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕರಾದ ಶ್ರೀ ರಾಜಶೇಖರ್ ಶರ್ಮ ರವರು ಮಾತನಾಡಿ ಎಲ್ಲಾ ಭಕ್ತಾದಿಗಳಿಗೂ ಹಾಗೂ ಸಂಘದ ಸದಸ್ಯರುಗಳಿಗೆ ಗಣಪತಿ ಹಬ್ಬವನ್ನು ಆಚರಿಸುತ್ತಿದ್ದೀರಾ ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು

ಈ ಸಂದರ್ಭದಲ್ಲಿ  ಸಲಹಾ ಸಮಿತಿ ಕೆ. ಎಂ. ಮಧು, ಎಂ.ಕೆ. ಮಂಜುನಾಥ್, ವಾಸವಿ ಯುವಜನ ಸಂಘದ ಉಪಾಧ್ಯಕ್ಷ ಅಶ್ವಿನ್ ಕೆ.ಎಸ್.ಕಾರ್ಯದರ್ಶಿ ಆದರ್ಶ್ ಕೆ.ಎ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಗಳಾದ ಬಾಲಾಜಿ ಕೆ.ಎಸ್. ಅಕ್ಷಯ್ ಕೆ, ರವಿ, ಭುವನ್, ಕಾರ್ತಿಕ್, ಅರ್ಚನ್ ಕುಮಾರ್, ವಿಕ್ರಮ್, ಕೆ.ಎಂ. ಹನುಮಂತರಾಜು, ಜಿ, ಫಣೀಶ್. ಎನ್. ಬಾಲಾಜಿ, ಟಿ.ಪಿ, ರಾಕೇಶ್, ಜಿ.ಎಸ್. ಅಮಿತ್. ಕೆ.ಎನ್. ಸುಕೇಶ್. ಆರ್. ಸ್ವರೂಪ್ ಬಿ.ವಿ. ರಾಜೇಶ್, ಎನ್.ಎನ್. ವಂಶಿ ಕೃಷ್ಣ, ಹರ್ಷವರ್ಧನ್. ಎನ್. ನಾಗಲ್ ಬಾಬು, ಡಿ.ವಿ, ಆದಿ ಅನ್ವಿಕ್, ಕೆ. ಆರ್, ಯೋಗೀಶ್, ಎಂ.ಆ‌ರ್. ಇನ್ನು ಮುಂತಾದವರಿದ್ದರು

Leave a Reply

Your email address will not be published. Required fields are marked *