‘ಕೌನ್ ಬನೇಗಾ ಕರೋಡ್‌ಪತಿ’ ಈ ಪ್ರಶ್ನೆ ಕ್ವಿಟ್ ಮಾಡಿದ ಹರಿಪ್ರಿಯಾ; ನಿಮಗೇನಾದ್ರೂ ‘ಉತ್ತರ’ ಗೊತ್ತಾ? | Amitabh Bachchan Hosting Kaun Banega Crorepati Season 17 Viral Question

‘ಕೌನ್ ಬನೇಗಾ ಕರೋಡ್‌ಪತಿ’ ಈ ಪ್ರಶ್ನೆ ಕ್ವಿಟ್ ಮಾಡಿದ ಹರಿಪ್ರಿಯಾ; ನಿಮಗೇನಾದ್ರೂ ‘ಉತ್ತರ’ ಗೊತ್ತಾ? | Amitabh Bachchan Hosting Kaun Banega Crorepati Season 17 Viral Question



‘ಕೌನ್ ಬನೇಗಾ ಕರೋಡ್‌ಪತಿ’ ಈ ಪ್ರಶ್ನೆ ಕ್ವಿಟ್ ಮಾಡಿದ ಹರಿಪ್ರಿಯಾ; ನಿಮಗೇನಾದ್ರೂ ‘ಉತ್ತರ’ ಗೊತ್ತಾ? | Amitabh Bachchan Hosting Kaun Banega Crorepati Season 17 Viral Question

ಅಮಿತಾಭ್ ಬಚ್ಚನ್ ಅವರು ಕೇಳಿದ ಈ ಪ್ರಶ್ನೆಗೆ ಸರಿಯುತ್ತರ ಕೊಡಲು ವಿಫಲರಾದ ಸ್ಪರ್ಧಿ ಹರಿಪ್ರಿಯಾ ಅವರು ತಾವು ಈ ಪ್ರಶ್ನೆಯನ್ನು ಕ್ವಿಟ್ ಮಾಡಿದ್ದಾರೆ. ಆ ಮೂಲಕ ಅವರು ಅದಕ್ಕೂ ಮೊದಲು ಗೆದ್ದಿದ್ದ 12.5 ಲಕ್ಷ ರೂ,ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ಪರ್ಧಿ ಹರಿಪ್ರಿಯಾ ಸಾಕೇತಪುರಂ (Hari Priya) ಅವರಿಗೆ ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ (Kaun Banega Crorepati Season 17) ಈ ಪ್ರಶ್ನೆ ಕೇಳಲಾಗಿದೆ. ರೂ. 25 ಲಕ್ಷ ಗೆಲ್ಲಲು ಕೇಳಲಾದ ಈ ಪ್ರಶ್ನೆ ಇದಾಗಿದ್ದು, ಅದು ಹೀಗಿದೆ.. ‘ಪರಮಹಂಸ ಯೋಗಾನಂದ ಜೀವನ ಚರಿತ್ರೆ ಪ್ರಕಾರ, ಯಾವ ಹಣ್ಣನ್ನು ಸೇವಿಸಲು ಅವರು ಮಹಾತ್ಮಾ ಗಾಂಧಿಗೆ ಸಲಹೆ ನೀಡಿದ್ದರು ಹಾಗೂ ಹಾಗು ಕ್ಯಾಲಿಪೋರ್ನಿಯಾದಿಂದ ವಾರ್ಧಾಗೆ ಯಾವ ಗಿಡಗಳನ್ನು ಕಳುಹಿಸಿಕೊಟ್ಟಿದ್ದರು?’

ಇದಕ್ಕೆ ಆಯ್ಕೆಯಾಗಿ 1- ಕಂಟೋಲೌಪ್, 2- ಹಕಲ್‌ಬೆರ್ರಿ, 3- ಅವಕಾಡೋ ಹಾಗೂ 4- ಪೀಚ್ ಇತ್ತು. ಈ ಪ್ರಶ್ನೆಗೆ ಸರಿಯುತ್ತರ ಕೊಡಲು ವಿಫಲರಾದ ಸ್ಪರ್ಧಿ ಹರಿಪ್ರಿಯಾ ಸಾಕೇತಪುರಂ ಅವರು ಈ ಪ್ರಶ್ನೆಯನ್ನು ಕ್ವಿಟ್ ಮಾಡಿದ್ದಾರೆ. ನೀವು ಈ ಕಾರ್ಯಕ್ರಮ ನೋಡಿದ್ದರೆ ಅಥವಾ ಈ ಪ್ರಶ್ನೆಗೆ ನಿಮಗೇನಾದರೂ ಉತ್ತರ ಗೊತ್ತಿದ್ದರೆ ಖಂಡಿತ ಕಾಮೆಂಟ್‌ ಮೂಲಕ ತಿಳಿಸಬಹುದು.

ಅಮಿತಾಭ್ ಬಚ್ಚನ್ ಅವರು ಕೇಳಿದ ಈ ಪ್ರಶ್ನೆಗೆ ಸರಿಯುತ್ತರ ಕೊಡಲು ವಿಫಲರಾದ ಸ್ಪರ್ಧಿ ಹರಿಪ್ರಿಯಾ ಅವರು ತಾವು ಈ ಪ್ರಶ್ನೆಯನ್ನು ಕ್ವಿಟ್ ಮಾಡಿದ್ದಾರೆ. ಆ ಮೂಲಕ ಅವರು ಅದಕ್ಕೂ ಮೊದಲು ಗೆದ್ದಿದ್ದ 12.5 ಲಕ್ಷ ರೂ,ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಪಾರ ಭರವಸೆ ಹಾಗೂ ಜ್ಷಾನ ಹೊಂದಿದ್ದ ಅವರು ಕೋಟಿ ರೂಪಾಯಿ ಗೆದ್ದು ‘ಕರೋಡ್‌ಪತಿ’ ಆಗಲು ಭಾರೀ ಉತ್ಸುಕತೆ ಹೊಂದಿದ್ದರು. ಆದರೆ, ಅವರ ಮಹದಾಸೆ ಕೈಗೂಡಲಿಲ್ಲ.

ಹೌದು, ಬಾಲಿವುಡ್‌ನ ಮೇರು ನಟ ಅಮಿತಾಭ್ ಬಚ್ಚನ್ ಅವರು ಇದೀಗ ಮತ್ತೆ ಕೌನ್ ಬನೇಗಾ ಕರೋಡ್‌ಪತಿ ಸೀಸನ್-17′ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. 11 ಆಗಸ್ಟ್ 2025ರಿಂದ ಶುರುವಾಗಿರುವ ಈ ಸೀಸನ್, ಸೋಮವಾರದಿಂದ ಶುಕ್ರವಾರ, ರಾತ್ರಿ 9.00 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಜೊತೆಗೆ, ‘ಸೋನಿ ಲೈವ್’ನಲ್ಲೂ ಸ್ಟ್ರೀಮ್ ಆಗುತ್ತಿದೆ. ಸಾಕಷ್ಟು ವೀಕ್ಷಕರು ಈ ಶೋ ನೋಡುತ್ತಿದ್ದು, ಒಳ್ಳೆಯ ಟಿಅರ್‌ಪಿ ದಾಖಲಾಗಿದೆ ಎಂಬ ಮಾಹಿತಿ ಇದೆ.



Source link

Leave a Reply

Your email address will not be published. Required fields are marked *