ಅಕ್ರಮವಾಗಿ ಗಾಂಜಾ ಸಾಗಾಣಿಕೆ: ಆರೋಪಿ ಬಂಧನ

ಅಕ್ರಮವಾಗಿ ಗಾಂಜಾ ಸಾಗಾಣಿಕೆ: ಆರೋಪಿ ಬಂಧನ

 ಮಧುಗಿರಿ : ಅ 28 ರ ರಾತ್ರಿ 10 ಸಮಯದಲ್ಲಿ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರು, ತುಮಕೂರು ಜಿಲ್ಲೆ, ತುಮಕೂರು ಇವರ ನಿರ್ದೇಶನದ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು, ಮಧುಗಿರಿ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ಯೊಂದಿಗೆ ಮಧುಗಿರಿ ತಾಲ್ಲೂಕ್, ಕೊಡಿಗೇನಹಳ್ಳಿ ಹೋಬಳಿ, ಹೊಸಹಳ್ಳಿ-ಕಾಳೇನಹಳ್ಳಿ ರಸ್ತೆಯಲ್ಲಿನ ಸಂಜೀವಪ್ಪ ರವರ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಹೊಸಹಳ್ಳಿ ಗ್ರಾಮದ ವಾಸಿಯಾದ ಜಗದೀಶ್ ಬಿನ್ ಲೇಟ್ ಹನುಮಂತಪ್ಪ ಇವರು ಆಕ್ರಮವಾಗಿ 287 ಗ್ರಾಂ ಸೊಪ್ಪು, ಹೂ, ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾವನ್ನು ಹೊಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು .

ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಯೊಂದಿಗೆ ಮಧುಗಿರಿ ತಾಲ್ಲೂಕ್, ಕೊಡಿಗೇನಹಳ್ಳಿ ಹೋಬಳಿ, ಹೊಸಹಳ್ಳಿ-ಕಾಳೇನಹಳ್ಳಿ ರಸ್ತೆಯಲ್ಲಿನ ಹೊಸಹಳ್ಳಿ ಗ್ರಾಮದಿಂದ ಸುಮಾರು 100 ಮೀಟರ್ ದೂರದಲ್ಲಿ ಸರ್ಕಲ್ ನಲ್ಲಿ ಹೊಸಹಳ್ಳಿ ಗ್ರಾಮದ ವಾಸಿಯಾದ ಅಶ್ವಥಪ್ಪ ಬಿನ್ ಚಿಕ್ಕವೆಂಟಪ್ಪ ಇವರು ಆಕ್ರಮವಾಗಿ 317 ಗ್ರಾಂ ಸೊಪ್ಪು, ಹೂ, ಬೀಜ ಹಾಗೂ ತೆನೆ ಮಿಶ್ರಿತ ಒಣ ಗಾಂಜಾವನ್ನು ಹೊಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು,

ಇದು ಎನ್.ಡಿ.ಪಿ.ಎಸ್. ಕಾಯ್ದೆ 1985ನೇ ಕಲಂ 8(ಸಿ) ರ ಉಲ್ಲಂಘನೆಯಾಗಿದ್ದು, ಇದೇ ಕಾರಣ ಕಾಯ್ದೆಯ ಕಲಂ-20(b)(ii)(A) ರ ಪ್ರಕಾರ ಶಿಕ್ಷಾರ್ಹಾಪರಾಧವಾಗಿರುತ್ತದೆ. ಪಂಚನಾಮೆಯಡಿ ಮುದ್ದೇಮಾಲು, ಹಾಗೂ ಆರೋಪಿಯನ್ನು ಇಲಾಖಾ ವಶಕ್ಕೆ ಪಡೆದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಮಾನ್ಯ ಘನ ನ್ಯಾಯಾಲಯದ ಮುಂದೆ

ಆರೋಪಿಯನ್ನು ಹಾಜರುಪಡಿಸಿದೆ. ಸದರಿ ಕಾರ್ಯಚಾರಣೆಯಲ್ಲಿ ಶ್ರೀ ದೀಪಕ್.ಎಸ್. ಅಬಕಾರಿ ಉಪ ಅಧೀಕ್ಷಕರು, ಶ್ರೀ ನಾಗರಾಜ. ಹೆಚ್. ಕೆ. ಅಬಕಾರಿ ನಿರೀಕ್ಷಕರು, ಶ್ರೀ ಸಿ.ಕರಿಬಸಪ್ಪ, ಅಬಕಾರಿ ಉಪ ನಿರೀಕ್ಷಕರು, ಸಿಬ್ಬಂದಿಗಳಾದ ರಾಜೇಶ್, ರಮೇಶ್, ಹಮೀದ್, ಜಗಧೀಶ್, ಶರಣಪ್ಪ, ತೋಸಿಫ್ ಖಾನ್ ಹಾಜರಿದ್ದರು.

Hanu Mobiles and Home Appleances .New Bustand ,Pavagada-561202.

Leave a Reply

Your email address will not be published. Required fields are marked *