ಲೂಸಿಯಾ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಶ್ರುತಿ ಹರಿಹರನ್ ಇದೀಗ ಹಿರಿತೆರೆ ಬಿಟ್ಟು ಮೊಟ್ಟ ಮೊದಲಬಾರಿಗೆ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಅದು ಕೂಡ ಭಕ್ತಿ ಪ್ರಧಾನ ಸೀರಿಯಲ್ ಮೂಲಕ.

ಚಂದನವನದಲ್ಲಿ ಬ್ಯುಸಿಯಾಗಿದ್ದ ಲೂಸಿಯ ಖ್ಯಾತಿಯ ನಟಿ ಶ್ರುತಿ ಹರಿಹರನ್ (Shruti Hariharan) ಇದೀಗ ಮೊದಲ ಬಾರಿಗೆ ಸಿನಿಮಾ ಬಿಟ್ಟು ಸೀರಿಯಲ್ ನಲ್ಲಿ ನಟಿಸಲು ಮುಂದಾಗಿದ್ದಾರೆ. ಅದು ಅಂತಿಂಥ ಸೀರಿಯಲ್ ಅಲ್ಲ, ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಶ್ರುತಿ ನಟಿಸುತ್ತಿದ್ದಾರೆ.

ಹೌದು, ಕಿರುತೆರೆಯಲ್ಲಿ ಒಂದು ಭಕ್ತಿಪ್ರದಾನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದ್ದು, ಆ ಧಾರಾವಾಹಿಯೇ "ಶ್ರೀ ರಾಘವೇಂದ್ರ ಮಹಾತ್ಮೆ" (Sri Raghavenda Mahathme) .ಈ ಧಾರಾವಾಹಿ ಇದೇ ಸೋಮವಾರದಿಂದ ಅಂದರೆ ಸೆಪ್ಟೆಂಬರ್ 1 ರಿಂದ ಆರಂಭವಾಗಿ ಸೋಮ – ಶುಕ್ರ ರಾತ್ರಿ 9ಕ್ಕೆ ನಿಮ್ಮ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಬೇಡಿದ ವರಗಳ ಕರುಣಿಸುವ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಮಹಾತ್ಮೆ ಇದೇ ಸೆಪ್ಟೆಂಬರ್ 1 ರಿಂದ ನಿಮ್ಮ ಜ಼ೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಇದರಲ್ಲಿ ರಾಯರ ಜೀವನ ಕಥೆ, ಆತ್ಮ ಚರಿತ್ರೆ, ಪವಾಡಗಳನ್ನು ಕಣ್ಣಿಗೆ ಕಟ್ಟಿದಂತೆ ದೃಶ್ಯೀಕರಿಸಲಾಗುತ್ತದೆ.

ಈ ಧಾರಾವಾಹಿಯಲ್ಲಿ ಹಿರಣ್ಯಕಶಿಪುವಿನ ಪತ್ನಿ ಕಯಾದು (Kayadu character) ಆಗಿ ಆಗಿ ಲೂಸಿಯಾ ಬ್ಯೂಟಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದೊಂದು ಪ್ರಮುಖವಾದ ಪಾತ್ರವಾಗಿದ್ದು, ಪ್ರಹ್ಲಾದನ ತಾಯಿಯ ಪಾತ್ರಕ್ಕೆ ಶ್ರುತಿ ಹರಿಹರನ್ ಜೀವ ತುಂಬಲಿದ್ದಾರೆ.

ಕನ್ನಡ ಸೇರಿ ತಮಿಳು ಮತ್ತು ಮಲಯಾಲಂ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್, ಜನಪ್ರಿಯ ನಟಿ ಹಾಗೂ ಡ್ಯಾನ್ಸರ್ ಕೂಡ ಹೌದು. ಇವರು ಲೂಸಿಯಾ, ರಾಟೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಊರ್ವಿ, ತಾರಕ್, ನಾತಿ ಚರಾಮಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಲ್ಲದೇ ಸದ್ಯ ಕನ್ನಡದ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಆ ಸಿನಿಮಾಗಳು ಬಿಡುಗಡೆಯಾಗಲು ರೆಡಿಯಾಗುತ್ತಿದೆ. ಹೌದು ಜಸ್ಟ್ ಮ್ಯಾರೀಡ್ (Just Married), ಸ್ಟ್ರಾಬೆರ್ರಿ, ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಜಸ್ಟ್ ಮ್ಯಾರೀಡ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರುತಿ ಹರಿಹರನ್ ಇದೀಗ ಸಿನಿಮಾ ಬಿಟ್ಟು ಸೀರಿಯಲ್ ಗೆ ಎಂಟ್ರಿ ಕೊಟ್ಟಿರುವುದು ಅಚ್ಚರಿಯಾಗಿದೆ. ಇನ್ನೇನು ಒಂದು ದಿನದಲ್ಲಿ ಸೀರಿಯಲ್ ಆರಂಭವಾಗಲಿದ್ದು, ನಟಿಯ ಪಾತ್ರದ ಮಹತ್ವವನ್ನು ಅರಿಯಬಹುದಾಗಿದೆ.

Source link
ಹಿರಿತೆರೆ ಬಿಟ್ಟು ಕಿರುತೆರೆಯಲ್ಲಿ ನಟಿಸ್ತಾರ ಲೂಸಿಯಾ ಸುಂದ್ರಿ… ರಾಘವೇಂದ್ರ ಮಹಾತ್ಮೆಯಲ್ಲಿ ಶ್ರುತಿ ಹರಿಹರನ್