Bengaluru Shocking incident: ಫ್ಲೆಕ್ಸ್‌ ಅಪ್ಪಳಿಸಿ ಕಾರಿನ ಗಾಜು ನುಚ್ಚುನೂರು; ದಂಪತಿ ಪ್ರಾಣಾಪಾಯದಿಂದ ಪಾರು | Flex Hits Moving Car Shatters Glass Incident Happens Peenya Bengaluru Rav

Bengaluru Shocking incident: ಫ್ಲೆಕ್ಸ್‌ ಅಪ್ಪಳಿಸಿ ಕಾರಿನ ಗಾಜು ನುಚ್ಚುನೂರು; ದಂಪತಿ ಪ್ರಾಣಾಪಾಯದಿಂದ ಪಾರು | Flex Hits Moving Car Shatters Glass Incident Happens Peenya Bengaluru Rav



ತುಮಕೂರು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಜಾಹಿರಾತು ಫ್ಲೆಕ್ಸ್‌ ಏಕಾಏಕಿ ಬಡಿದ ಪರಿಣಾಮ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಪೀಣ್ಯ ದಾಸರಹಳ್ಳಿ : ರಸ್ತೆ ಬದಿಯ ಜಾಹಿರಾತು ಫ್ಲೆಕ್ಸ್‌ವೊಂದು ಯಮರೂಪದಲ್ಲಿ ಹಾರಿಬಂದು ಚಲಿಸುತ್ತಿದ್ದ ಕಾರಿಗೆ ಬಡಿದ ಪರಿಣಾಮ ಕಾರಿನ ಮುಂಭಾಗದ ಗ್ಲಾಸ್‌ ಪುಡಿ ಪುಡಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ತುಮಕೂರು ರಸ್ತೆಯ 8ನೇ ಮೈಲಿ ಬಳಿ ನಡೆದಿದ್ದು, ಈ ದೃಶ್ಯ ವೈರಲ್‌ ಆಗಿದೆ.

ನೆಲಮಂಗಲ ಮೂಲದ ದಂಪತಿ ಮಗು ಸಹಿತ ತಮ್ಮ ಕಾರಿನಲ್ಲಿ 8ನೇ ಮೈಲಿ ಫ್ಲೈ ಓವರ್ ಮೇಲೆ ನೆಲಮಂಗಲ ಕಡೆ ಬರುತ್ತಿದ್ದರು. ಇದೇ ವೇಳೆ ಫ್ಲೈ ಓವರ್ ಮೇಲೆ ಕಟ್ಟಲಾಗಿದ್ದ ಜಾಹಿರಾತು ಫ್ಲೆಕ್ಸ್‌ ತೆರವು ಮಾಡಲಾಗುತ್ತಿತ್ತು. ತೆರವು ಮಾಡುತ್ತಿರುವ ಸಿಬ್ಬಂದಿ ಮುಂಜಾಗ್ರತೆ ವಹಿಸದೆ ಏಕಾಏಕಿ ಎಳೆದ ಪರಿಣಾಮ ಫ್ಲೆಕ್ಸ್‌ ಕಾರಿಗೆ ಬಂದು ಅಪ್ಪಳಿಸಿದೆ. ಅದೃಷ್ಟವಶಾತ್‌ ವಾಹನದಲ್ಲಿದ್ದ ದಂಪತಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗದ ಗಾಜು ನುಚ್ಚುನೂರಾಗಿದೆ. ಈ ಭಯಾನಕ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ದುರಂತದ ಬಗ್ಗೆ ಪ್ರಶ್ನೆ ಮಾಡಲು ದಂಪತಿ ನೆಲಮಂಗಲ ನವಯುಗ ಬಳಿಯ ಟೋಲ್ ಕಂಪನಿ ಕಚೇರಿಗೆ ಹೋದಾಗ ಕಚೇರಿ ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಉಡಾಫೆ ಉತ್ತರ ನೀಡಿದ್ದಾರೆ. ಅಲ್ಲದೇ ದಂಪತಿಗೆ ದಮ್ಕಿ ಸಹ ಹಾಕಿದ್ದಾರೆ. ಈ ವರ್ತನೆಗೆ ಸ್ಥಳಿಯರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,

ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.

ಜೀವ ಕೈಯಲ್ಲಿಡಿದು ಓಡಾಡುವ ದುಸ್ಥಿತಿ:

ತುಮಕೂರು ರಸ್ತೆಯ 8ನೇ ಮೈಲಿ ಫ್ಲೈ ಓವರ್ ಮೇಲೆ ಕಂಬಗಳಿಗೆ ಕಟ್ಟಿರುವ ಜಾಹಿರಾತು ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಈಗ ಫ್ಲೆಕ್ಸ್ ಕಳಚಿಕೊಂಡು ಕಾರಿನ ಮೇಲೆ ಬಿಳುವ ದೃಶ್ಯದಿಂದ ವಾಹನ ಸವಾರರನ್ನು ಬೆಚ್ಚಿ ಬಿದ್ದಿದ್ದು, ರಾಷ್ಟ್ರಿಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *