Headlines

Bengaluru Metro Yellow Line Fourth train to start operating soon | ಮೆಟ್ರೋ ಹಳದಿ ಮಾರ್ಗ: ನಾಲ್ಕನೇ ರೈಲು ಸಂಚಾರ ಶೀಘ್ರ! | Bengaluru Metro Yellow Line Fourth Train To Start Operating Soon

ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲಿನ ಸಂಚಾರ ಪರೀಕ್ಷೆ ಆರಂಭವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ.

ಬೆಂಗಳೂರು (ಸೆ.1): ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ನಾಲ್ಕನೇ ರೈಲಿನ ಸಂಚಾರ ಪರೀಕ್ಷೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.

ಆರ್‌.ವಿ.ರಸ್ತೆ – ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರ ನಡುವಿನ ಈ ಮಾರ್ಗವನ್ನು ಕಳೆದ ಆ.10ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಸದ್ಯ ಮೂರು ರೈಲುಗಳು 25 ನಿಮಿಷಕ್ಕೊಮ್ಮೆ ಆವರ್ತನದಲ್ಲಿ ಇಲ್ಲಿ ಸಂಚರಿಸುತ್ತಿವೆ. ಇದೀಗ ನಾಲ್ಕನೇ ರೈಲಿನ ಸೇರ್ಪಡೆಯಿಂದಾಗಿ 18-20 ನಿಮಿಷಕ್ಕೆ ರೈಲುಗಳ ನಡುವಿನ ಸಂಚಾರ ತಗ್ಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ನಾಲ್ಕನೇ ರೈಲಿನ ಆರು ಬೋಗಿಗಳು ಕೊಲ್ಕತ್ತಾದಿಂದ ಹೊರಟು ಆಗಸ್ಟ್‌ 15ರಂದು ಎಲ್ಲವೂ ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿವೆ. ಇಲ್ಲಿ ಜೋಡಣೆ ಮಾಡಲಾಗಿದ್ದು, ಸಿಬಿಟಿಸಿ ಸಿಗ್ನಲಿಂಗ್‌ ತಂತ್ರಜ್ಞಾನದ ಪರೀಕ್ಷೆ ನಡೆಸಲಾಗುತ್ತಿದೆ. ರಾತ್ರಿ ವೇಳೆ ಸಂಚಾರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಪರೀಕ್ಷೆಗೆ ಸಮಯ ಹಿಡಿಯಲಿದೆ. ಇದು ಮುಗಿದ ಬಳಿಕ ಸಂಚಾರ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಈ ಮಾರ್ಗ ಆರಂಭದ ಬಳಿಕ ಸರಾಸರಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಲಕ್ಷದಿಂದ 9.15 ಲಕ್ಷಕ್ಕೆ ತಲುಪಿದೆ. ರೈಲುಗಳ ಕೊರತೆಯಿಂದಾಗಿ ಹಳದಿ ಮಾರ್ಗದ ಆರ್‌.ವಿ.ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ನಿಲ್ದಾಣ ಸೇರಿ ಕೆಲ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗುತ್ತಿದೆ. ರೈಲಿಗಾಗಿ 25 ನಿಮಿಷ ಕಾಯುವಂತಾಗಿದ್ದು, ಶೀಘ್ರವೇ ಇನ್ನಷ್ಟು ರೈಲುಗಳನ್ನು ಸೇರ್ಪಡೆ ಮಾಡುವಂತೆ ಈ ಭಾಗದ ಪ್ರಯಾಣಿಕರ ಒತ್ತಾಯ ಹೆಚ್ಚಾಗಿದೆ.

ಸೆಪ್ಟೆಂಬರ್‌ ಅಂತ್ಯಕ್ಕೆ ಇನ್ನೊಂದು ರೈಲು ಕೊಲ್ಕತ್ತಾದ ತಿತಾಘಡ್‌ ರೈಲ್‌ ಸಿಸ್ಟಂನಿಂದ ಬರುವ ನಿರೀಕ್ಷೆಯಿದೆ. ಇನ್ನೆರಡು ರೈಲುಗಳು ಸೇರ್ಪಡೆ ಆದಲ್ಲಿ 11ಲಕ್ಷ ಪ್ರಯಾಣಿಕರ ಸಂಖ್ಯೆ ದಾಟಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

Source link

Leave a Reply

Your email address will not be published. Required fields are marked *