Shrirasthu Shubhamasthu ತುಳಸಿ ಮಗಳು ಮೀರಾ ನಿಜಕ್ಕೂ ಗಂಡುಪಾಪು: ಯಾರು ಮಗು? ಛಾನ್ಸ್​ ಸಿಕ್ಕಿದ್ದು ಹೇಗೆ?

Shrirasthu Shubhamasthu  ತುಳಸಿ ಮಗಳು ಮೀರಾ ನಿಜಕ್ಕೂ ಗಂಡುಪಾಪು: ಯಾರು ಮಗು? ಛಾನ್ಸ್​ ಸಿಕ್ಕಿದ್ದು ಹೇಗೆ?

Shrirasthu Shubhamasthu  ತುಳಸಿ ಮಗಳು ಮೀರಾ ನಿಜಕ್ಕೂ ಗಂಡುಪಾಪು: ಯಾರು ಮಗು? ಛಾನ್ಸ್​ ಸಿಕ್ಕಿದ್ದು ಹೇಗೆ?

ಶ್ರೀರಸ್ತು ಶುಭಮಸ್ತು ಸೀರಿಯಲ್​ ಅಂತ್ಯಕಂಡಿದೆ. ಶಾರ್ವರಿಯ ಕಲ್ಲು ಹೃದಯವನ್ನು ಮಾತೃಹೃದಯವಾಗಿ ಪರಿವರ್ತನೆ ಮಾಡಿದ ತುಳಸಿಯ ಪುತ್ರಿಯಾದ ಮೀರಾಳ ರಿಯಾಲಿಟಿ ಏನು? ಯಾರ ಪಾಪು ಇದು?

ಮೂರು ವರ್ಷಗಳಿಂದ ಎಲ್ಲರನ್ನು ಹಿಡಿದಿಟ್ಟುಕೊಂಡಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್​ ಅಂತ್ಯಕಂಡಿದೆ. ಸೀರಿಯಲ್ ಇನ್ನೇನು ಮುಗಿದೇ ಬಿಡ್ತು ಎನ್ನುವಷ್ಟರಲ್ಲಿಯೇ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಲೇ ಇತ್ತು. ಶಾರ್ವರಿಯ ಕುತಂತ್ರ ತಿಳಿಯಿತು, ಸೀರಿಯಲ್​ ಮುಗಿಯತ್ತೆ ಅಂದುಕೊಳ್ಳುವಷ್ಟರಲ್ಲಿ ಅವಳು ನಾಪತ್ತೆಯಾದಳು. ಕೈಯಲ್ಲಿ ದುಡ್ಡು ಇಲ್ಲದಿದ್ದರೂ ರೌಡಿಗಳನ್ನು ಹೇಗೆ ಸಾಕಿದಳು ಎನ್ನುವುದೇ ಪ್ರಶ್ನಾರ್ಹವಾಗಿ ಉಳಿದುಕೊಂಡಿತು. ಕೊನೆಗೆ ಅವಳ ಅಕ್ಕ ಶರ್ಮಿಳಾ ಸಿಕ್ಕಾಗ, ಅಲ್ಲೊಂದಿಷ್ಟು ವಿಚಿತ್ರಗಳೇ ನಡೆದುಹೋದವು.

ಕೊನೆಗೆ ರಾಧಾಳೇ ಶರ್ಮಿಳಾ ಎಂದು ತಿಳಿದಾಗ, ಶಾರ್ವರಿ ಒಳ್ಳೆಯವಳಾಗುತ್ತಾಳೆ ಎಂದುಕೊಂಡರೆ ಹಾಗೂ ಆಗದೇ ಮತ್ತದೇ ಕಿಡ್ನಾಪ್​, ಸಾಯಿಸಲು ಪ್ರಯತ್ನ ಎಲ್ಲವೂ ನಡೆದವು. ಎಲ್ಲವೂ ಚಿತ್ರ-ವಿಚಿತ್ರಗಳಂತೆಯೇ ನಡೆಯತೊಡಗಿದವು. ವಯಸ್ಸಾದವರ ಮದುವೆಯ ಸುಮಧುರ ಕಥೆಯಿಂದ ಪ್ರಾರಂಭವಾದ ಸೀರಿಯಲ್ ಎಲ್ಲೋ ತಾಳ ತಪ್ಪುತ್ತಿದೆ ಎಂದು ಹಲವರು ಅಂದುಕೊಂಡದ್ದೂ ಇದೆ.

ಒಟ್ಟಿನಲ್ಲಿ ಏನೇನೋ ತಿರುವುಗಳ ಮೇಲೆ ತಿರುವು ಬಂದು ಕೊನೆಗೆ ಶಾರ್ವರಿ ಜೈಲುಪಾಲಾದಳು. ಎಲ್ಲರೂ ಖುಷಿಯಿಂದ ಬಾಳಿದರು. ಒಂದೆಡೆ, ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ… ಈ ಇಬ್ಬರು ಸೊಸೆಯಂದಿರ ನಡುವಿನ ಕಥೆ ಕೊನೆಗೂ ಮುಕ್ತಾಯ ಕಂಡಿದೆ.

ಇಲ್ಲಿ ಎಲ್ಲರ ಗಮನ ಸೆಳೆದದ್ದು ತುಳಸಿಯ ಪುತ್ರಿ ಮೀರಾ. ತುಳಸಿ ಗರ್ಭಿಣಿ ಎಂದು ತಿಳಿದಾಗ ಟ್ರೋಲ್​ ಮಾಡಿದವರೇ ಹೆಚ್ಚು. ಕೊನೆಗೆ ಮೀರಾಳ ಮುಖ ನೋಡಿ ಎಲ್ಲರೂ ತಣ್ಣಗಾಗಿದ್ದರು. ಕೊನೆಗೆ ಇದೇ ಮೀರಾ, ಕಟುಕಳಾದ ಶಾರ್ವರಿಯ ಮಾತೃ ಹೃದಯವನ್ನೂ ಬಡಿದೆಬ್ಬಿಸಿತ್ತು. ಈ ಮಗುವನ್ನು ಬಿಟ್ಟು ಬಿಡಲಾರಷ್ಟು ಆಕೆ ಅದನ್ನು ನೆಚ್ಚಿಕೊಂಡಳು.

ಅಷ್ಟಕ್ಕೂ ಮಕ್ಕಳು ಎಂದರೆ ಹಾಗೇ ಅಲ್ವಾ? ಎಂಥ ಕಟುಕನ ಮನಸ್ಸನ್ನೂ ಅರೆ ಕ್ಷಣವಾದರೂ ಬದಲಾಯಿಸುವ ತಾಕತ್ತು ಪುಟಾಣಿ ಕಂದಮ್ಮಗಳಿಗೆ ಇರುತ್ತದೆ. ಆ ಮುಗ್ಧತೆ, ಚೆಲುವಿನ ನೋಟ ಎಂಥವರನ್ನೂ ಮರಳು ಮಾಡುವುದು ಇದೆ. ಅದೇ ರೀತಿ ತುಳಸಿಯ ಮಗಳಾಗಿ ಬಂದಿರುವ ಪುಟ್ಟ ಕಂದನ ನೋಟಕ್ಕೆ ಸೀರಿಯಲ್​ನಲ್ಲಿ ಮಾತ್ರವಲ್ಲದೇ ವೀಕ್ಷಕರೂ ಫಿದಾ ಆಗಿದ್ದಾರೆ. ಶೂಟಿಂಗ್​ ಸೆಟ್​ನಲ್ಲಿ ಒಂದು ಮಗುವನ್ನು ಸಮಾಧಾನ ಮಾಡುವುದು ಬಹಳ ಕಷ್ಟಕರವಾದದ್ದೇ. ಅಲ್ಲಿನ ಲೈಟು, ಗಲಾಟೆ, ಅಪರಿಚಿತ ಮುಖ ಎಲ್ಲವನ್ನೂ ನೋಡುವ ಮಗು ಸುಮ್ಮನೇ ಇರುವುದು ತುಂಬಾ ಕಷ್ಟ. ಆದರೆ ಅದನ್ನು ಸಮಾಧಾನಪಡಿಸಿ ಶೂಟಿಂಗ್​ ಮಾಡುವುದು ಸವಾಲಿನ ಕೆಲಸವೇ.

ಆದರೂ, ಮೀರಾ ಇಲ್ಲಿ ಹೈಲೈಟ್​ ಆಗಿದ್ದಾಳೆ. ಆದರೆ ಕುತೂಹಲದ ವಿಷಯ ಏನೆಂದರೆ, ಮೀರಾ ನಿಜವಾಗಿ ಹೆಣ್ಣುಪಾಪುವಲ್ಲ ಅದು ಗಂಡು ಪಾಪು. ಹೆಣ್ಣು ಮಗು ಬೇಕು ಎನ್ನುವ ಕಾರಣಕ್ಕೆ, ಈ ಪಾಪುವನ್ನು ಹೆಣ್ಣು ಪಾಪು ಮಾಡಿ ಮೀರಾ ಎನ್ನುವ ಹೆಸರು ನೀಡಲಾಗಿದೆ. ಆರು ತಿಂಗಳ ಪಾಪು ಇದು.

ಇದರ ರಿಯಲ್ ಅಪ್ಪ-ಅಮ್ಮ ಇನ್ನೂ ರಿವೀಲ್ ಆಗಿಲ್ಲ. ಆದರೆ ಇದು ತಮ್ಮ ಸ್ನೇಹಿತೆಯ ಮಗು ಎಂದು ಸುಷ್ಮಾ ಶಿವಮೊಗ್ಗ ಎನ್ನುವವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದು ಅವರದ್ದೇ ಪಾಪು ಎಂದುಕೊಂಡವರು ಹಲವರು. ಆದರೆ ಅವರು ಕಮೆಂಟ್​ ಒಂದರಲ್ಲಿ ಇದು ತಮ್ಮ ಸ್ನೇಹಿತೆಯ ಗಂಡು ಪಾಪು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಆರು ತಿಂಗಳು ಎಂದೂ ಹೇಳಿದ್ದಾರೆ. ಕಾಂಟ್ರಾಕ್ಟರ್​ ಮೂಲಕ ಇದಕ್ಕೆ ಸೀರಿಯಲ್​ನಲ್ಲಿ ಅವಕಾಶ ಸಿಕ್ಕಿತು ಎಂದು ಅವರು ಕಮೆಂಟ್​ಗೆ ರಿಪ್ಲೈ ಮಾಡಿದ್ದಾರೆ.

ಒಟ್ಟಿನಲ್ಲಿ ಹುಟ್ಟುತ್ತಲೇ ಸ್ಟಾರ್​ ಕಿಡ್​ ಆಗಿದ್ದಾನೆ ಈ ಪುಟಾಣಿ. ಇವನನ್ನು ನಾವು ಮಿಸ್​ ಮಾಡಿಕೊಳ್ಳುತ್ತಿದ್ದೇವೆ ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.
View this post on Instagram
A post shared by ಸುಷ್ಮಾ ಶಿವಮೊಗ್ಗ (@sushma__t.s)

Source link

Leave a Reply

Your email address will not be published. Required fields are marked *