Headlines

ಡೊನಾಲ್ಡ್ ಟ್ರಂಪ್ ಹೊಟ್ಟೆ ಉರಿಸಿದ ರಷ್ಯಾ; ಇಬ್ಬರ ಜಗಳದಲ್ಲಿ ಭಾರತಕ್ಕೆ ಸಿಕ್ತು ಬಂಪರ್ ಲಾಭ

ಡೊನಾಲ್ಡ್ ಟ್ರಂಪ್ ಹೊಟ್ಟೆ ಉರಿಸಿದ ರಷ್ಯಾ; ಇಬ್ಬರ ಜಗಳದಲ್ಲಿ ಭಾರತಕ್ಕೆ ಸಿಕ್ತು ಬಂಪರ್ ಲಾಭ

ಡೊನಾಲ್ಡ್ ಟ್ರಂಪ್ ಹೊಟ್ಟೆ ಉರಿಸಿದ ರಷ್ಯಾ; ಇಬ್ಬರ ಜಗಳದಲ್ಲಿ ಭಾರತಕ್ಕೆ ಸಿಕ್ತು ಬಂಪರ್ ಲಾಭ

International News: ಮೋದಿ-ಪುಟಿನ್ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದ್ದು, ಟ್ರಂಪ್‌ಗೆ ಪರೋಕ್ಷ ತಿರುಗೇಟು ನೀಡಿದಂತಾಗಿದೆ. ಈ ರಿಯಾಯ್ತಿ ಭಾರತೀಯ ತೈಲ ಕಂಪನಿಗಳಿಗೆ ಭಾರಿ ಲಾಭ ತರುವ ನಿರೀಕ್ಷೆಯಿದೆ.

ಮಾಸ್ಕೋ: ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಅಮೆರಿಕ ಶೇ.50ರಷ್ಟು ತೆರಿಗೆ ಹೇರಿರುವ ನಡುವೆಯೇ ರಷ್ಯಾ ಭಾರತಕ್ಕೆ ಇನ್ನಷ್ಟು ರಿಯಾಯ್ತಿಯನ್ನು ನೀಡಿದೆ. ತೈಲ ಖರೀದಿ ಮೇಲೆ ಇಲ್ಲಿವರೆಗೂ ನೀಡುತ್ತಿದ್ದ 2.50 ಡಾಲರ್‌ನಷ್ಟು ರಿಯಾಯ್ತಿಯನ್ನು 3-4 ಡಾಲರ್‌ಗೆ ಏರಿಸಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅತ್ಯಾಪ್ತ ಭೇಟಿ ಬಳಿಕ ಈ ಬೆಳವಣಿಗೆಯಾಗಿದ್ದು, ಟ್ರಂಪ್‌ ಅವರಿಗೆ ನೇರ ತಿರುಗೇಟು ನೀಡಲಾಗಿದೆ.

ಈ ಮೂಲಕ ಭಾರತೀಯ ತೈಲ ಕಂಪನಿಗಳಿಗೆ ತೈಲ ರಿಯಾಯ್ತಿಯ ಭಾರಿ ಲಾಭ ಮಾಡಿಕೊಡಲಿದೆ ಎನ್ನಲಾಗಿದೆ. ರಷ್ಯಾದ ಉರಾಲ್‌ ಕಂಪನಿಯು ಸೆಪ್ಟೆಂಬರ್‌-ಅಕ್ಟೋಬರ್‌ಗೆ ಲೋಡ್‌ ಮಾಡುವ ತೈಲಕ್ಕೆ ಈ ರಿಯಾಯ್ತಿ ಅನ್ವಯವಾಗಲಿದೆ.

ಇದನ್ನೂ ಓದಿ: ಶೀಘ್ರ ಉಕ್ರೇನ್‌ ಯುದ್ಧ ಸ್ಥಗಿತಕ್ಕೆ ಪುಟಿನ್‌ಗೆ ಮೋದಿ ಮನವಿ

ವಿಶ್ವದ ಇತರ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಅಸ್ತ್ರ ಪ್ರಯೋಗಿಸಿ ಬೆದರಿಕೆ ಹಾಕುತ್ತಿರುವುದನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಖಂಡಿಸಿದ್ದು, ‘ ಶೀತಲ ಸಮರ ಮನಸ್ಥಿತಿ ವಿರುದ್ಧ ಒಗ್ಗಟ್ಟಾಗಿರಿ’ ಎಂದು ಟಿಯಾನ್‌ಜಿನ್‌ನಲ್ಲಿ ನಡೆದ ಶಾಂಘೈ ಶೃಂಗಸಭೆಯಲ್ಲಿ ಕರೆ ನೀಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಕೂಡ ಭಾಗಿಯಾಗಿದ್ದ ಎಸ್‌ಸಿಒ ಶೃಂಗಸಭೆಯಲ್ಲಿ ಕ್ಸಿ ಅಮೆರಿಕವನ್ನು ಒಗ್ಗಟ್ಟಿನಿಂದ ನ್ಯಾಯುತವಾಗಿ ಎದುರಿಸಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಚೀನಾ ಆಗಮಿಸಿದ ಕಿಮ್‌ ಜೊಂಗ್‌ ಉನ್‌ : ಏನಿದರ ಒಳರಹಸ್ಯ?

Source link

Leave a Reply

Your email address will not be published. Required fields are marked *