Headlines

ನಿಧಾನವಾಗ್ತಿದೆ ಭೂಮಿಯ ತಿರುಗುವಿಕೆ; ಹೊಸ ಅಧ್ಯಯನದಲ್ಲಿ ಅಚ್ಚರಿ ವಿಷಯ

ನಿಧಾನವಾಗ್ತಿದೆ ಭೂಮಿಯ ತಿರುಗುವಿಕೆ;  ಹೊಸ ಅಧ್ಯಯನದಲ್ಲಿ ಅಚ್ಚರಿ ವಿಷಯ



ನಿಧಾನವಾಗ್ತಿದೆ ಭೂಮಿಯ ತಿರುಗುವಿಕೆ;  ಹೊಸ ಅಧ್ಯಯನದಲ್ಲಿ ಅಚ್ಚರಿ ವಿಷಯ

ಭೂಮಿ ತನ್ನ ಅಕ್ಷದ ಮೇಲೆ ತಿರುಗುವ ವೇಗ ನಿಧಾನವಾಗಿ ಕಡಿಮೆಯಾಗುತ್ತಿರುವುದು ನಮ್ಮ ವಾತಾವರಣದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಹೊಸ ಅಧ್ಯಯನವೊಂದು ಹೇಳುತ್ತದೆ. ಈ ಅಧ್ಯಯನವನ್ನು “ನೇಚರ್ ಜಿಯೋಸೈನ್ಸ್” ನಲ್ಲಿ ಪ್ರಕಟಿಸಲಾಗಿದೆ. 

ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಭೂಮಿ ರೂಪುಗೊಂಡಾಗಿನಿಂದ ಚಂದ್ರನ ಗುರುತ್ವಾಕರ್ಷಣೆಯಿಂದಾಗಿ ಅದರ ತಿರುಗುವಿಕೆಯ ವೇಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಒಂದು ದಿನದ ಅವಧಿ ಕ್ರಮೇಣ ಹೆಚ್ಚಾಗುತ್ತಿದೆ. 

ಈ ಅಧ್ಯಯನದ ಪ್ರಕಾರ, 1.4 ಶತಕೋಟಿ ವರ್ಷಗಳ ಹಿಂದೆ ಒಂದು ದಿನದ ಅವಧಿ ಕೇವಲ 18 ಗಂಟೆಗಳಷ್ಟಿತ್ತು. ಈಗ ಅದು 24 ಗಂಟೆಗಳಿಗೆ ಏರಿದೆ. ಪ್ರತಿ ಶತಮಾನಕ್ಕೆ ಸುಮಾರು 1.8 ಮಿಲಿಸೆಕೆಂಡುಗಳಷ್ಟು ಈ ತಿರುಗುವಿಕೆ ಕಡಿಮೆಯಾಗುತ್ತಿದೆ.



Source link

Leave a Reply

Your email address will not be published. Required fields are marked *