Headlines

Prajwal Revanna ಪೆನ್​ಡ್ರೈವ್​ನಲ್ಲಿ ಏನೇನಿತ್ತು? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ | Swc President Nagalakshmi Choudhary About Prajwal Revanna Case Suc

Prajwal Revanna ಪೆನ್​ಡ್ರೈವ್​ನಲ್ಲಿ ಏನೇನಿತ್ತು? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ | Swc President Nagalakshmi Choudhary About Prajwal Revanna Case Suc



Prajwal Revanna ಪೆನ್​ಡ್ರೈವ್​ನಲ್ಲಿ ಏನೇನಿತ್ತು? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ | Swc President Nagalakshmi Choudhary About Prajwal Revanna Case Suc

ಪ್ರಜ್ವಲ್​ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದು ಗೊತ್ತೇ ಇದೆ. ಆದರೆ ನಿಜಕ್ಕೂ ಆ ಪೆನ್​ಡ್ರೈವ್​ನಲ್ಲಿ ಏನೆಲ್ಲಾ ಇತ್ತು? ಅದರ ಬಗ್ಗೆ ಸುವರ್ಣ ಪಾಡ್​ಕಾಸ್ಟ್​ನಲ್ಲಿ ರಿವೀಲ್​ ಮಾಡಿದ್ದಾರೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ. 

ಮನೆಗೆಲಸದ ಮಹಿಳೆ ಮೇಲೆ ಅ*ತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಳೆದ ತಿಂಗಳು ಜೀವನಪರ್ಯಂತ ಜೈಲು ಶಿಕ್ಷೆ ಹಾಗೂ 11 ಲಕ್ಷ 60 ಸಾವಿರ ರೂಪಾಯಿ ದಂಡ ವಿಧಿಸಿರುವುದು ಗೊತ್ತೇ ಇದೆ. ಇದರಲ್ಲಿ 11 ಲಕ್ಷ 25 ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ. ಇದರೊಂದಿಗೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಲೈಂ*ಗಿಕ ದೌರ್ಜನ್ಯ ಮತ್ತು ಅ*ತ್ಯಾಚಾರ ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದ್ದು, ಇನ್ನೂ ಮೂರು ಪ್ರಕರಣಗಳ ವಿಚಾರಣೆ ಬಾಕಿ ಇದೆ. ವಿಚಾರಣೆಯ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರ ಬಂಧನವಾಗಿರಲಿಲ್ಲ, ಕೇವಲ ಬಾಡಿ ವಾರಂಟ್‌ ಮೇಲೆ ಪ್ರಜ್ವಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಹೀಗಾಗಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ನೀಡಿದ ಆಗಸ್ಟ್​ 2ರಿಂದಲೇ ಈ ಶಿಕ್ಷೆ ಆರಂಭವಾಗಿದ್ದು, ಇದೀಗ ಒಂದು ತಿಂಗಳಿನಿಂದ ಅವರು ಜೈಲಿನಲ್ಲಿ ಇದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ಶೋಭಾ ಅವರು ತನಿಖೆಯ ನೇತೃತ್ವ ವಹಿಸಿದ್ದರು ಮತ್ತು 26 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಸುಮಾರು 2 ಸಾವಿರ ಪುಟಗಳ ಚಾರ್ಜ್ ಶೀಟನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಸಲ್ಲಿಸಿದ್ದರು.

ಸಂಚಲನ ಮೂಡಿಸಿದ್ದ ಪೆನ್​ಡ್ರೈವ್​

ಈ ಬಗ್ಗೆ ತನಿಖೆ ನಡೆಯುವ ಪೂರ್ವದಲ್ಲಿ ಪೆನ್​ಡ್ರೈವ್​ ಇಡೀ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದರ ಬಗ್ಗೆ ತನಿಖೆಗೆ ಆಗ್ರಹಗಳು ಕೇಳಿ ಬಂದಿದ್ದವು. ಅದಾದ ಬಳಿಕ ರಾಜ್ಯ ಮಹಿಳಾ ಆಯೋಗವು ಇದರ ವಿಚಾರಣೆ ನಡೆಸಿತ್ತು. ಆ ಸಮಯದಲ್ಲಿ ಪ್ರಜ್ವಲ್​ ರೇವಣ್ಣ ಅವರ ಕರ್ಮಕಾಂಡದ ಬಗ್ಗೆ ಪೆನ್​ಡ್ರೈವ್​ನಲ್ಲಿ ದಾಖಲಾಗಿದ್ದ ವಿಡಿಯೋ ಅನ್ನು ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ (Dr Nagalakshmi Choudhary ) ವೀಕ್ಷಿಸಿದ್ದರು. ಸುವರ್ಣ ಬೆಂಗಳೂರು ಬಜ್​ ಪಾಡ್​ಕಾಸ್ಟ್​ಗೆ (Suvarna Bangaluru Bujj Podcast) ಅವರು ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ರಿವೀಲ್​ ಮಾಡಿದ್ದಾರೆ. ಅಂದು ತಾವು ನೋಡಿದ ಪೆನ್​ಡ್ರೈವ್​ (Prajwal Revanna Pen drive case)ನಲ್ಲಿ ಏನಿತ್ತು ಎನ್ನುವುದನ್ನು ಅವರು ತಿಳಿಸಿದ್ದಾರೆ.

ಮನೆಕೆಲಸದವಳ ವಿಡಿಯೋ ಪೆನ್​ಡ್ರೈವ್​ನಲ್ಲಿ….

ತಾವು ಪೆನ್​ಡ್ರೈವ್​ ನೋಡಿದಾಗ ಅದರಲ್ಲಿ ಮನೆ ಕೆಲಸದವಳ ವಿಡಿಯೋ ಇರುವುದನ್ನು ನಾಗಲಕ್ಷ್ಮಿ ರಿವೀಲ್​ ಮಾಡಿದ್ದಾರೆ. ‘ಮನೆ ಕೆಲಸದವಳನ್ನು ಅಟ್ಟಾಡಿಸಿಕೊಂಡು … ಮಾಡುವುದು ಇವೆಲ್ಲವೂ ಅದರಲ್ಲಿ ರೆಕಾರ್ಡ್​ ಆಗಿದೆ. ಅದನ್ನು ನೋಡಿದ ತಕ್ಷಣ ಏನೋ ಆಯ್ತು. ಅದರಲ್ಲಿಯೂ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನದಲ್ಲಿ ಕುಳಿತಾದ ಇದರ ಬಗ್ಗೆ ಗಮನ ಹರಿಸುವುದು ಸೂಕ್ತ ಎನ್ನಿಸಿತು. ಇದೇ ಕಾರಣಕ್ಕೆ ಮಧ್ಯಾಹ್ನವೇ ಪ್ರೆಸ್​ಮೀಟ್​ ಕರೆದೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದೆ. ಇದು ತುಂಬಾ ಹೈ ಪ್ರೊಫೈಲ್​ ಕೇಸ್​ ಆಗಿರುವ ಕಾರಣ ಈ ರೀತಿ ಅನಿವಾರ್ಯವಾಯಿತು. ಒಬ್ಬರಲ್ಲ, ಇಬ್ಬರಲ್ಲ… ಯಾವ್ಯಾವ ಸ್ಥಿತಿಗಳಲ್ಲಿ ಅವರು ಈ ರೀತಿಯ ಕೆಲಸ ಮಾಡಬೇಕಾಯಿತು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಇದರ ತನಿಖೆ ಆಗಲೇಬೇಕು, ಇದಕ್ಕೆ ನ್ಯಾಯ ಸಿಗಲೇಬೇಕು ಎಂದು ಎನ್ನಿಸಿತು’ ಎಂದಿದ್ದಾರೆ ನಾಗಲಕ್ಷ್ಮಿ.

ತುಂಬಾ ಹೆಣ್ಣುಮಕ್ಕಳ ಮಾನಹಾನಿ

‘ಪೆನ್​ಡ್ರೈವ್ ನೋಡಿದಾಗ, ತುಂಬಾ ಜನ ಹೆಣ್ಣುಮಕ್ಕಳ ಮಾನಹಾನಿಯಾಗಿದೆ ಎನ್ನುವುದು ತಿಳಿಯಿತು. ಎಷ್ಟೋ ಮಂದಿ ಊರು ಬಿಟ್ಟು ಹೋದರು. ಇವತ್ತು ಎಷ್ಟು ಮಂದಿ ಎಲ್ಲಿ ಇದ್ದಾರೆ ಎನ್ನುವುದೇ ಗೊತ್ತಿಲ್ಲ. ಆದ್ದರಿಂದ ಇದನ್ನು ಸೀರಿಯಲ್​ ಆಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು’ ಎಂದು ನಡೆದ ಘಟನೆಯನ್ನು ಅವರು ವಿವರಿಸಿದ್ದಾರೆ.

 

 



Source link

Leave a Reply

Your email address will not be published. Required fields are marked *