ಕನ್ನಡಿಗರ ಆಕ್ರೋಶಕ್ಕೆ ಮಣಿದ ದುಲ್ಕರ್ ಸಲ್ಮಾನ್ ಸಿನಿತಂಡ; ಡೈಲಾಗ್ ಮಾಯ ಆಯ್ತಾ? | Dulquer Salmaan Malayalam Movie Lokah Movie Controversy

ಕಳೆದ ವಾರ ತೆರೆಗೆ ಬಂದಿರೋ ಮಲಯಾಳಂ ಸಿನಿಮಾ ಲೋಕಾಃ ಭರ್ಜರಿ ಕಮಾಯಿ ಮಾಡ್ತಾ ಇದೆ. ದಲ್ಕರ್ ಸಲ್ಮಾನ್ ನಿರ್ಮಾಣ ಮಾಡಿರೊ ಡೊಮನಿಕ್ ಅರುಣ್ ನಿರ್ದೇಶನದ ಈ ಚಿತ್ರ ಐದೇ ದಿನದಲ್ಲಿ ಬಂಡವಾಳಕ್ಕಿಂತ ಡಬಲ್ ಹಣ ಗಳಿಕೆ ಮಾಡಿದೆ.

ಕಳೆದ ವಾರ ತೆರೆಗೆ ಬಂದಿರೋ ಮಲಯಾಳಂನ ‘ಲೋಕಾಃ ಚಾಪ್ಟರ್-1 ಸಿನಿಮಾ ಭರ್ಜರಿ ಕಮಾಯಿ ಮಾಡ್ತಾ ಇದೆ. ಆದ್ರೆ ಈ ಸಿನಿಮಾದಲ್ಲಿ ಬೆಂಗಳೂರು ಹುಡುಗಿಯರ ಬಗ್ಗೆ ಬಳಸಿದ ಒಂದು ಅಶ್ಲೀಲ ಪದ, ಕನ್ನಡಿಗರನ್ನೆಲ್ಲಾ ಕೆಣಕಿತ್ತು. ಕನ್ನಡಿಗರ ಆಕ್ರೋಶಕ್ಕೆ ಬೆದರಿರೋ ಈ ಸಿನಿಮಾತಂಡ ಕ್ಷಮೆ ಕೇಳಿ, ಆ ಡೈಲಾಗ್​ನ ಕಿತ್ತಿ ಹಾಕಿದೆ.

ಬೆಂಗಳೂರು ಹುಡುಗಿಯರ ಬಗ್ಗೆ ಕೆಟ್ಟ ಸಂಭಾಷಣೆ; ಆಕ್ರೋಶದ ಬಳಿಕ ಕ್ಷಮೆ ಕೇಳಿದ ಕೇರಳ ಸಿನಿತಂಡ:

ಕಳೆದ ವಾರ ತೆರೆಗೆ ಬಂದಿರೋ ಮಲಯಾಳಂ ಸಿನಿಮಾ ಲೋಕಾಃ ಭರ್ಜರಿ ಕಮಾಯಿ ಮಾಡ್ತಾ ಇದೆ. ದಲ್ಕರ್ ಸಲ್ಮಾನ್ ನಿರ್ಮಾಣ ಮಾಡಿರೊ ಡೊಮನಿಕ್ ಅರುಣ್ ನಿರ್ದೇಶನದ ಈ ಚಿತ್ರ ಐದೇ ದಿನದಲ್ಲಿ ಬಂಡವಾಳಕ್ಕಿಂತ ಡಬಲ್ ಹಣ ಗಳಿಕೆ ಮಾಡಿದೆ.

ಈ ಸಿನಿಮಾದಲ್ಲಿ ಬೆಂಗಳೂರಿನಲ್ಲಿ ನಡೆಯೋ ಕಥೆ ಇದೆ. ಅಸಲಿಗೆ ಮಲೆಯಾಳಿ ಮಂದಿಗೆ ಬೆಂಗಳೂರು ಅಂದ್ರೆ ಅದೇನೋ ಸೆಂಟಿಮೆಂಟ್. ಇಲ್ಲಿ ಚಿತ್ರಿತವಾದ ಬೆಂಗಳೂರು ಡೇಸ್, ರೋಮಾಂಚನಂ, ಅವೇಶಂ ನಂತಹ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈ ಲೋಕಾಃ ಕೂಡ ಅದೇ ಸಾಲಿಗೆ ಸೇರುವ ಸಿನಿಮಾ ಅನ್ನಬಹುದು.

ಬೆಂಗಳೂರಿನಲ್ಲೂ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಾ ಇದೆ. ಎಂದಿನಂತೆ ವಿಶಾಲ ಹೃದಯದ ಕನ್ನಡಿಗರು ಪರಬಾಷೆಯ ಈ ಸಿನಿಮಾವನ್ನ ಮುಗಿಬಿದ್ದು ನೋಡ್ತಾ ಇದ್ದಾರೆ. ಆದ್ರೆ ಈ ಸಿನಿಮಾದಲ್ಲಿರೋ ಒಂದು ಸಂಭಾಷಣೆ ಕನ್ನಡಿಗರನ್ನ ಕೆಣುಕುವಂತೆ ಇತ್ತು. ಪಾತ್ರಧಾರಿಯೊಬ್ಬ ಬೆಂಗಳೂರು ಹುಡುಗಿಯರೆಲ್ಲಾ ‘ಡ್ಯಾಶ್’ ಗಳು ಅಂತಾನೆ.

ಹಾಗ್ ನೋಡಿದ್ರೆ ಇಂಥದ್ದೊಂದು ಪದವನ್ನ ಮೊದಲು ಬಳಸಿದವರು ಕನ್ನಡದ್ದೇ ಒಬ್ಬ ಖ್ಯಾತ ನಿರ್ದೇಶಕರು. ಈಗ ಅದೆಷ್ಟು ಕುಖ್ಯಾತಿ ಗಳಿಸಿದೆ ಅಂದ್ರೆ ಪರಭಾಷಾ ಚಿತ್ರದವರು ಕೂಡ ಅದನ್ನ ಬಳಕೆ ಮಾಡೋವಷ್ಟು. ಲೋಕಾಃ ಸಿನಿಮಾದಲ್ಲಿನ ಈ ಸಂಭಾಷಣೆ ಬಗ್ಗೆ ಅನೇಕ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ರು. ಅನೇಕ ಕನ್ನಡ ಫಿಲ್ಮ್ ಮೇಕರ್ಸ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ರು. ಈ ಆಕ್ರೋಶಕ್ಕೆ ತಕ್ಷಣ ಸ್ಪಂದಿಸಿರೋ ಲೋಕಾಃ ಚಿತ್ರತಂಡ ಕನ್ನಡಿಗರ ಕ್ಷಮೆ ಯಾಚಿಸಿದೆ.

ಕ್ಷಮೆ ಕೇಳಿದ ಲೋಕಾಃ ಸಿನಿಮಾತಂಡ:

ನಮ್ಮ ಸಿನಿಮಾದ ಒಂದು ಡೈಲಾಗ್ ಉದ್ದೇಶಪೂರ್ವಕವಲ್ಲದೇ ಕರ್ನಾಟಕದ ಜನರ ಭಾವನೆಗೆ ಧಕ್ಕೆ ತಂದಿದೆ. ವೇಫೆರಾರ್ ಫಿಲಂಸ್‌ ಗೆ ಜನರು ಎಲ್ಲಕ್ಕಿಂತ ಮುಖ್ಯ. ಕಣ್ಣು ತಪ್ಪಿನಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಈ ತಪ್ಪು ಉದ್ದೇಶಪೂರ್ವಕವಾಗಿ ಆಗಿಲ್ಲ ಎಂದು ಭರವಸೆ ನೀಡುತ್ತೇವೆ. ಪ್ರಶ್ನಾರ್ಹವಾದ ಡೈಲಾಗ್ ಅನ್ನು ತೆಗೆದುಹಾಕುತ್ತೇವೆ ಇಲ್ಲವೇ ಎಡಿಟ್ ಮಾಡುತ್ತೇವೆ. ನಾವು ಪ್ರಾಮಾಣಿಕವಾಗಿ ನೋವಾಗಿರುವುದಕ್ಕೆ ಕ್ಷಮೆ ಕೇಳುತ್ತೇವೆ. ನಮ್ಮ ಕ್ಷಮಾಪಣೆಯನ್ನು ಸ್ವೀಕರಿಸಿ ಎಂದು ವಿನಮ್ರವಾಗಿ ಕೋರುತ್ತೇವೆ

ಒಟ್ಟಾರೆ ಕ್ಷಮೆ ಕೇಳಿ ಚಿತ್ರತಂಡ ವಿವಾದಕ್ಕೆ ಅಂತ್ಯ ಹಾಡಿದೆ. ಸದ್ಯದಲ್ಲೇ ಆ ಸಂಭಾಷಣೆ ದೃಶ್ಯ ಎಡಿಟ್ ಮಾಡ್ತಿವಿ ಅಂದಿದ್ದಾರೆ. ಅವರೇನೋ ಕ್ಷಮೆ ಕೇಳಿಯಾಯ್ತು ಆದ್ರೆ ಈ ಪದ ಸೃಷ್ಟಿಸಿದ ನಮ್ಮ ಕನ್ನಡದವರು ಕ್ಷಮೆ ಕೇಳೋದ್ಯಾವಾಗ ಅನ್ನೋದು ಪ್ರಶ್ನೆ..!

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ:

Source link

Leave a Reply

Your email address will not be published. Required fields are marked *