ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವೆ ಎಲ್ಲವೂ ಸರಿ ಇಲ್ಲ, ಬ್ರೇಕ್ ಅಪ್ ಅನ್ನೋ ಮಾಹಿತಿಗಳು ಹಲವು ಬಾರಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇದಕ್ಕೆ ಪೂರಕ ಎಂಬಂತೆ ಹಲವು ಘಟನೆಗಳು ನಡೆದಿತ್ತು. ಇದೇ ಮೊದಲ ಬಾರಿಗೆ ಬ್ರೇಕ್ಅಪ್ ರೂಮರ್ ಕುರಿತು ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್ ಸೆಲೆಬ್ರೆಟಿ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಇತ್ತೀಚಿನ ದಿನಗಳಲ್ಲಿ ಭಾರಿ ಸಂಕಷ್ಟ ಎದುರಿಸಿದ್ದಾರೆ. ಇವರಿಬ್ಬರ ಸಂಬಂಧ ಹಳಸಿದೆ, ವಿಚ್ಚೇದನ, ಇಬ್ಬರು ಬೇರೆ ಬೇರೆ ನಿವಾಸದಲ್ಲಿದ್ದಾರೆ ಅನ್ನೋ ಹಲವು ಸುದ್ದಿಗಳು ಹರಿದಾಡಿತ್ತು. ಹಲವು ಕಾರ್ಯಕ್ರಮಗಳಲ್ಲಿ ಈ ಜೋಡಿ ಬೇರೆ ಬೇರೆಯಾಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಹಾರವಾಗಿದ್ದರು. ಆದರೆ ಎಲ್ಲೂ ಕೂಡ ಈ ಜೋಡಿ ಸ್ಪಷ್ಟನೆ ನೀಡುವ ಪ್ರಯತ್ನವಾಗಲಿ, ಟೀಕೆ, ಊಹಾಪೋಗಳನ್ನು ತಳ್ಳಿ ಹಾಕುವ ಪ್ರಯತ್ನವನ್ನೂ ಮಾಡಲಿಲ್ಲ. ಹೀಗಾಗಿ ಅನುಮಾನಗಳು ಹೆಚ್ಚಾಗಿತ್ತು.

ಇದೇ ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಬ್ರೇಕ್ಅಪ್ ರೂಮರ್ ಕುರಿತು ಮಾತನಾಡಿದ್ದಾರೆ. ಐಶ್ವರ್ಯ ರೈ ಜೊತೆ ಸಂಬಂಧ ಹಳಸಿದೆ ಅನ್ನೋ ಊಹಾಪೋಹಕ್ಕೆ ಅಭಿಷೇಕ್ ಬಚ್ಚನ್ ಉತ್ತರ ನೀಡಿದ್ದಾರೆ. ನಿಜಕ್ಕೂ ಐಶ್ವರ್ಯ ರೈ ಜೊತೆ ಜಗಳ ನಡೆದಿತ್ತಾ? ಇಟಿ ಟೈಮ್ಸ್ ನಡೆಸಿದ ಮಾತುಕತೆಯಲ್ಲಿ ಅಭಿಷೇಕ್ ಬಚ್ಚನ್ ತಮ್ಮ ದಾಂಪತ್ಯ ಜೀವನ ಕುರಿತು ಮಾತನಾಡಿದ್ದಾರೆ.

ಮೊದಲು ಈ ರೀತಿಯ ಗಾಸಿಪ್, ಟೀಕೆಗಳು ನನಗೆ ಅಷ್ಟಾಗಿ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ, ನನಗೆ ಪತ್ನಿ, ಮಗಳಿದ್ದಾಳೆ. ನನಗೂ ಹಾಗೂ ನನ್ನ ಕುಟುಂಬಕ್ಕೂ ಈ ರೀತಿಯ ಸುಳ್ಳು ಸುದ್ದಿಗಳ ಪರಿಣಾಮ ಬೀರುತ್ತದೆ. ಮಾನಸಿಕವಾಗಿ ಹೆಚ್ಚು ಒತ್ತಡ ನೀಡುತ್ತದೆ. ಈ ಕುರಿತು ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ನನಗನಿಸಿತ್ತು. ಕಾರಣ ನಾನು ಸತ್ಯ ಹೇಳಿದರೂ ನನಗೆ ನೆರವಾಗುವುದಿಲ್ಲ. ಕೆಲವರಿಗೆ ಸುಳ್ಳು ಮಾಹಿತಿಗಳೇ ಬೇಕಿದೆ. ಅದೆ ಹೆಚ್ಚು ಜನರಿಗೆ ತಲುಪುತ್ತದೆ. ಇದರ ನಡುವೆ ನಾನು ಸ್ಪಷ್ಟನೆ ಕೊಟ್ಟರೂ ಪ್ರಯೋಜನವೇನು? ಎಂದು ಅಭಿಷೇಕ್ ಬಚ್ಚನ್ ಪ್ರಶ್ನಿಸಿದ್ದಾರೆ.

ಈ ರೀತಿ ಸುಳ್ಳು ಸುದ್ದಿ ಹರಡುವವರಿಗೆ ಸತ್ಯ ಬೇಕಿಲ್ಲ. ಅವರ ಮಾಹಿತಿ ಹರಿದಾಡಬೇಕು ಅಷ್ಟೆ. ನೀವು ನಾನಲ್ಲ.ನೀವು ನನ್ನ ಜೀವನ ನಡೆಸುತ್ತಿಲ್ಲ. ನಾನು ಯಾರಿಗೆ ಉತ್ತರ ಕೊಡಬೇಕು, ಅರಿಗೆ ನೀವು ಉತ್ತರ ಕೊಡಬೇಕಿಲ್ಲ. ಇಂತಹ ಸುಳ್ಳು ಮಾಹಿತಿಗಳಿಂದ ಮಕ್ಕಳ ಮೇಲೆ ಆಗುವ ಪರಿಣಾಮವೇನು ಅನ್ನೋದು ಅವರು ಯೋಚಿಸುವುದಿಲ್ಲ ಎಂದು ಬಚ್ಚನ್ ಹೇಳಿದ್ದಾರೆ.

ವಿಚ್ಚೇದನ, ಬ್ರೇಕ್ಅಪ್ ಸೇರಿದಂತೆ ಹರಿದಾಡಿದ ಎಲ್ಲಾ ಮಾಹಿತಿಗಳು ಸುಳ್ಳು ಎಂದು ಅಬಿಷೇಕ್ ಬಚ್ಚನ್ ಹೇಳಿದ್ದಾರೆ. ಎಲ್ಲೂ ಕುಳಿತು ಇಂಟರ್ನೆಟ್‌ನಲ್ಲಿ ಏನೋ ಮಾಹಿತಿ ಹಾಕುವುದು ಸುಲಭ. ಹೀಗೆ ಮಾಡುವವರು ಸತ್ಯ ಬಿಟ್ಟು ಸುಳ್ಳನ್ನೇ ಹಾಕುತ್ತಾರೆ. ಇದೇ ಜನ ನನ್ನ ಮುಂದೆ ನಿಂತು ಮುಖ ನೋಡಿ ಈ ಮಾತು ಹೇಳಲಿ. ಅದು ಅವರಿಗೆ ಸಾಧ್ಯವಿಲ್ಲ. ಅಂತಹ ಧೈರ್ಯ ಅವರಿಗೆ ಇರುವುದಿಲ್ಲ. ಕಾರಣ ಸುಳ್ಳನ್ನು ಹೇಗೆ ಹೇಳುತ್ತಾರೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

Source link
ಐಶ್ವರ್ಯ ಜೊತೆ ನಿಜಕ್ಕೂ ನಡೆದಿತ್ತಾ ಜಗಳ? ಬ್ರೇಕ್ಅಪ್ ರೂಮರ್ ಕುರಿತು ಅಭಿಷೇಕ್ ಪ್ರತಿಕ್ರಿಯೆ