Zee kannada additions ಬರಹಗಾರರು, ಡ್ಯಾನ್ಸರ್ಸ್‌, ಕಾಮಿಡಿ ಮಾಡುವವರಿಗೆ ಬಂಪರ್‌ ಅವಕಾಶ ಕೊಟ್ಟ ಜೀ ಕನ್ನಡ ವಾಹಿನಿ! | Zee Writers Room And Dkd And Comedy Khiladigalu Audition In Zee Kannada Channel

ಜೀ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ ನಡೆಯಲಿವೆಯಂತೆ. ಈ ಮೂಲಕ ಹೊಸಬರಿಗೆ ಬಂಪರ್‌ ಅವಕಾಶ ಎನ್ನಬಹುದು. 

ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎಂದು ಎಲ್ಲರೂ ಹೇಳೋದುಂಟು. ಈಗ ಕಿರುತೆರೆಗೆ ಪ್ರಭಾವಶಾಲಿ ಮತ್ತು ಅರ್ಥಪೂರ್ಣವಾದ ಕಥೆಗಳನ್ನು ಒದಗಿಸುವ ಜೀ ಕನ್ನಡ ಈಗ ಯುವಕಥೆಗಾರರಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಅದರ ಜೊತೆಗೆ ಡ್ಯಾನ್ಸರ್ ಗಳು ಹಾಗು ಕಾಮಿಡಿಯನ್ ಗಳಿಗೂ ಇಲ್ಲಿದೆ ಸುವವಕಾಶ. ಜೀ಼ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಜೀ ರೈಟರ್ಸ್ ರೂಮ್‌ನಲ್ಲಿ ಭಾಗವಹಿಸುವವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು, ಆಯ್ಕೆ ಆದ ಯುವಪ್ರತಿಭೆಗಳು ಮುಂದಿನ ಸುತ್ತಿಗೆ ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಜೀ಼ ರೈಟರ್ಸ್ ರೂಮ್‌ಗೆ ಸೇರಲು ಅವಕಾಶವನ್ನು ಹೊಂದಿರುತ್ತಾರೆ, ಅಲ್ಲಿ ಅವರು ಇಂಡಸ್ಟ್ರಿಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯುತ್ತಾರೆ ಹಾಗೂ ಜೀ಼ ನ ಮುಂಬರುವ ಯೋಜನೆಗಳಿಗೆ ಕೆಲಸ ಮಾಡುವ ಸುವವಕಾಶ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್‌ನಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿದೆ ಆಯ್ಕೆ ಆಗುತ್ತಾರೆ.

ಇಲ್ಲಿದೆ ಆಡಿಷನ್ಸ್ ನ ವಿವರಗಳು:

ಜೀ಼ ರೈಟರ್ಸ್ ರೂಮ್ ಆಡಿಷನ್ಸ್:

ಸ್ಥಳ: ಸಂತ ಸೋಫಿಯಾ ಕಾನ್ವೆಂಟ್ ಸ್ಕೂಲ್, #6, 10th ಬ್ಲಾಕ್, 2ನೆ ಹಂತ, ನಾಗರಬಾವಿ, ಬೆಂಗಳೂರು

ದಿನಾಂಕ: 7th ಸೆಪ್ಟೆಂಬರ್ 2025

ಸಮಯ: 9:00 AM-2:00 PM

ದೂರವಾಣಿ ಸಂಖ್ಯೆ: 9900207711

ಡಾನ್ಸ್ ಕರ್ನಾಟಕ ಡಾನ್ಸ್ & ಕಾಮಿಡಿ ಖಿಲಾಡಿಗಳು ಆಡಿಷನ್ಸ್:

ಸ್ಥಳ: ಹೈಯರ್ ಸೆಕೆಂಡರಿ ಸ್ಕೂಲ್, ಆರ್ ವಿ ರೋಡ್, ಬಸವನಗುಡಿ, ಬೆಂಗಳೂರು

ದಿನಾಂಕ: 7th ಸೆಪ್ಟೆಂಬರ್ 2025

ಸಮಯ: 9:00 AM-6:00 PM

ದೂರವಾಣಿ ಸಂಖ್ಯೆ: 9513134434

ಮತ್ಯಾಕೆ ತಡ, ಈಗಲೇ ಭಾಗವಹಿಸಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ.

Source link

Leave a Reply

Your email address will not be published. Required fields are marked *