ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಶಿರಾ ತಾಲ್ಲೂಕಿನ ಮೂವರು ಶಿಕ್ಷಕರು

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಶಿರಾ ತಾಲ್ಲೂಕಿನ ಮೂವರು ಶಿಕ್ಷಕರು

ಶಿರಾ : ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಪ್ರತಿವರ್ಷ ಪ್ರಧಾನ ಮಾಡುವ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿಯನ್ನು ಶಿರಾ ತಾಲ್ಲೂಕಿನ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಮೂಡಿಗೇರಿಸಿಕೊಂಡಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿಯ ನ್ಯಾಯಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ  ಕುಮಾರಸ್ವಾಮಿ ಎಚ್. ಎಸ್., ಹುಲಿಕುಂಟೆ ಹೋಬಳಿಯ ದೊಡ್ಡಬಾಣಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಉಮೇಶ್ ಡಿ. ಬಿ., ಗೌಡಗೆರೆ ಹೋಬಳಿಯ ಮೇಲಕುಂಟೆ ಗೊಲ್ಲಹಳ್ಳಿ  ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಶಿಕ್ಷಕ ತಿಪ್ಪೇಸ್ವಾಮಿ. ಇವರೆಲ್ಲಾ ಶಿಕ್ಷಕರು  ಶಾಲೆ ಅಭಿವೃದ್ಧಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ಪರಿಸರ, ಶಾಲಾ ಆವರಣ ಸ್ವಚ್ಛತೆ, ಕುಡಿಯಲು ಶುದ್ಧ ನೀರಿನ ವ್ಯವಸ್ಥೆ, ಕಲಿಕಾ ಸಾಮಗ್ರಿಗಳು ಹೀಗೆ ಬಹುತೇಕ ಎಲ್ಲಾ ವಿಧವಾದ ಶಾಲೆಯ ಬೆಳವಣಿಗೆಗೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಈ ಶಿಕ್ಷಕರ ಉತ್ತಮ ಸೇವೆಗೆ ಸಂದ ಪ್ರಶಸ್ತಿಯಾಗಿದೆ.ಈದಿನ ಮಧುಗಿರಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

Leave a Reply

Your email address will not be published. Required fields are marked *