ಮಹಿಳೆಯೊಬ್ಬಳು 18 ಎಕರೆ ಆಸ್ತಿಗಾಗಿ 45 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. | In Bhopal A Newlywed Woman Killed Her Husband For His Property

ಮಹಿಳೆಯೊಬ್ಬಳು 18 ಎಕರೆ ಆಸ್ತಿಗಾಗಿ 45 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. | In Bhopal A Newlywed Woman Killed Her Husband For His Property



ಮಹಿಳೆಯೊಬ್ಬಳು 18 ಎಕರೆ ಆಸ್ತಿಗಾಗಿ 45 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಭೋಪಾಲ್: ಮಹಿಳೆಯೊಬ್ಬಳು 18 ಎಕರೆ ಆಸ್ತಿಗಾಗಿ 45 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಆತನನ್ನು ಹತ್ಯೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಡ್ವಾರ್ (ಖಿಟೋಲಾ) ಗ್ರಾಮದ ಇಂದ್ರಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ?: ಇಂದ್ರಕುಮಾರ್ ತಿವಾರಿ, ಅರೆಕಾಲಿಕ ಶಿಕ್ಷಕ ಮತ್ತು ರೈತನಾಗಿದ್ದರು. ಕಳೆದ ತಿಂಗಳು ಪ್ರಸಿದ್ಧ ಗುರು ಅನಿರುದ್ಧಾಚಾರ್ಯ ಮಹಾರಾಜ್ ಅವರ ಆಧ್ಯಾತ್ಮಿಕ ಪ್ರವಚನದ ಸಂದರ್ಭದಲ್ಲಿ, ‘18 ಎಕರೆ ಭೂಮಿ ಹೊಂದಿದ್ದೇನೆ. ಆದರೆ ತನ್ನ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ’ ಎಂದು ಹತಾಶೆ ವ್ಯಕ್ತಪಡಿಸಿದ್ದರು.

ಈ ವಿಡಿಯೋ ವೈರಲ್‌ ಆಗಿತ್ತು. ಇದನ್ನೇ ವಂಚಕರು ದಾಳವಾಗಿ ಬಳಸಿಕೊಂಡಿದ್ದರು. ವಂಚಕಿ ಸಾಹಿಬಾ ಬಾನೋ ನಕಲಿ ಆಧಾರ್‌ ಕಾರ್ಡ್‌ ಮಾಡಿಸಿ, ಖುಷಿ ತಿವಾರಿ ಎಂದು ಹೆಸರು ಬದಲಿಸಿಕೊಂಡು, ಸಾಮಾಜಿಕ ಜಾಲತಾಣದ ಮೂಲಕ ಇಂದ್ರಕುಮಾರ್‌ರನ್ನು ಸಂಪರ್ಕಿಸಿದ್ದಳು. ಬಳಿಕ ಅವರನ್ನು ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಕರೆಸಿ, ಮದುವೆಯಾಗಿದ್ದಳು. ಇದಾದ ಕೆಲವು ದಿನಗಳ ನಂತರ ಇಂದ್ರಕುಮಾರ್‌ ಶವ ಉತ್ತರ ಪ್ರದೇಶದ ಕುಶಿನಗರದ ಹತಾ ಕೊತ್ವಾಲಿ ಪ್ರದೇಶದ ಸುಕರೌಲಿಯಲ್ಲಿ ಪತ್ತೆಯಾಗಿತ್ತು. ಶವದ ಕತ್ತಿನಲ್ಲಿ ಚಾಕು ಸಿಲುಕಿಕೊಂಡಿತ್ತು.

ಇದೀಗ ಸಾಹಿಬಾಳೇ ಆತನನ್ನು ಕೊಂದಿದ್ದಾಲೆ ಎಂದು ಗೊತ್ತಾಗಿದೆ ಹಾಗೂ ಆಕೆಯನ್ನು ಬಂಧಿಸಲಾಗಿದೆ. ಆಕೆಯ ಸಹಚರರಿಗಾಗಿ ಬಲೆ ಬೀಸಲಾಗಿದೆ.

ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಅಪರಿಚಿತ ಮಹಿಳೆ ಪ್ರಕರಣಕ್ಕೆ ರೋಚಕ ತಿರುವು

ಬೆಂಗಳೂರು  : ಸಿಲಿಕಾನ್ ಸಿಟಿ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಅಪರಿಚಿತ ಮಹಿಳೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕಳೆದ ಎರಡ್ಮೂರು ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಹೋಗಿದ್ದ ಹಿಂದೂ ಮಹಿಳೆ ಪುಷ್ಪಾ ಎಂಬುದು ಪತ್ತೆಯಾಗಿದೆ. ಇದೀಗ ಗಂಡನೇ ಕೊಲೆ ಮಾಡಿ ಕಸದ ಲಾರಿಗೆ ಬೀಸಾಕಿ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ನಗರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಅನಾಮಿಕ ಮಹಿಳೆಯ ಶವ ಕೇಸ್‌ಗೆ ಟ್ವಿಸ್ಟ್‌ಗೆ ಸಿಕ್ಕಿದೆ. ಕೊಲೆಯಾದ ಮಹಿಳೆ ಹುಳಿಮಾವು ನಿವಾಸಿ ಪುಷ್ಪ ಅಲಿಯಾಸ್ ಆಶಾ ಎಂದು ಪೊಲೀಸರು ಗುರುತಿಸಿದ್ದಾರೆ. ಮಹಿಳೆ ಹಿಂದೂ ಧರ್ಮದವಳಾಗಿದ್ದು, ಕೆಲ ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯೊಂದಿಗಿನ ಪ್ರೀತಿಗೆ ಮಣಿದು ಮದುವೆಯಾಗಿದ್ದರು.

ಮದುವೆಯ ನಂತರ ಇಬ್ಬರೂ ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ವಾಸವಿದ್ದು, ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ, ಇವರ ನಡುವೆ ವಿಚ್ಛೇದನದಂತೆ ಆಗಾಗ ತೊಂದರೆಗಳೂ ನಡೆದಿದ್ದವು ಎಂದು ವರದಿಗಳು ತಿಳಿಸುತ್ತವೆ. ಮಹಿಳೆಯ ಮೃತದೇಹವನ್ನು ಸಿ ಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಚನ್ನಮ್ಮನಕೆರೆಯ ಬಳಿ ಬಿಸಾಡಲಾಗಿದ್ದು, ಶವವನ್ನು ದ್ವಿಚಕ್ರ ವಾಹನದಲ್ಲಿ ತಂದು ಬಿಸಾಡಲಾಗಿದೆಯೆಂದು ಶಂಕೆ ವ್ಯಕ್ತವಾಗಿದೆ. ಶವವು ನಿರ್ವಸ್ತ್ರ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅತ್ಯಾಚಾ*ರ ನಡೆದಿರಬಹುದೆಂಬ ಶಂಕೆಯೂ ಇದ್ದು, ತನಿಖೆ ಈಗ ಈ ಕೌಟುಂಬಿಕ ಕಲಹದಿಂದ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ



Source link

Leave a Reply

Your email address will not be published. Required fields are marked *